ಸುಸಜ್ಜಿತ ರಸ್ತೆಗಳಿಂದ ಧಾರ್ಮಿಕ ಕ್ಷೇತ್ರ, ಮಠಗಳ ಅಭಿವೃದ್ಧಿ ಸಾಧ್ಯ
Team Udayavani, Mar 23, 2021, 1:51 PM IST
ಕನಕಪುರ: ಧಾರ್ಮಿಕ ಕ್ಷೇತ್ರಗಳು, ಮಠಮಾನ್ಯಗಳುಸಂಘ-ಸಂಸ್ಥೆಗಳು ಅಭಿವೃದ್ಧಿಯಾಗಬೇಕಾದರೆಸುಸಜ್ಜಿತ ರಸ್ತೆ ಮಾರ್ಗಗಳು ಅವಶ್ಯಕ ಎಂದುಮರಳೆಗವಿ ಮಠದ ಶಿವರುದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಮರಳೆಗವಿ ಮಠದ ರಸ್ತೆ ಅಗಲೀಕರಣ ಹಾಗೂಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿಮಾತನಾಡಿದ ಅವರು, ಮಠದ ಆವರಣದಲ್ಲಿತೋಂಟದ ಯಡಿಯೂರು ಸಿದ್ದಲಿಂಗೇಶ್ವರರುತಪಸ್ಸು ಮಾಡಿದಂತಹ ಸ್ಥಳವಿದೆ. ಅಲ್ಲಿನಿರ್ಮಾಣವಾಗುತ್ತಿರುವ ಭವ್ಯ ಕಟ್ಟಡ ಕೆಲವೇದಿನಗಳಲ್ಲಿ ಪೂರ್ಣಗೊಂಡು ಲೋಕರ್ಪಣೆಗೊಳ್ಳಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಠಕ್ಕೆ ಭಕ್ತರು ಆಗಮಿಸುವ ನಿರೀಕ್ಷೆಇದೆ. ಶ್ರೀಮಠಕ್ಕೆ ಸುಸಜ್ಜಿತ ರಸ್ತೆ ಅಗತ್ಯವಿತ್ತು. ಈಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರನ್ನು ಖುದ್ದು ಭೇಟಿ ಮಾಡಿ ರಸ್ತೆ ಅಗಲೀಕರಣದ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಯಾವುದೇಸಂಘ ಸಂಸ್ಥೆಗಳು ಧಾರ್ಮಿಕ ಕೇಂದ್ರಗಳು ಅಭಿವೃದ್ಧಿ ಆಗಬೇಕಾದರೆ ಸುಸಜ್ಜಿತ, ವಿಶಾಲ ರಸ್ತೆಮಾರ್ಗಗಳು ಅಗತ್ಯ. ಆ ನಿಟ್ಟಿನಲ್ಲಿ ಸಿಎಂ ನಮ್ಮ ಮನವಿಗೆ ಓಗೊಟ್ಟು ಶ್ರೀಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣಕ್ಕೆ ಮೊದಲ ಹಂತದಲ್ಲಿ 1.5 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಉಳಿಕೆ ರಸ್ತೆಯ ಅಗಲೀಕರಣಕ್ಕೆ ಬೇಕಾಗುವ ಅನುದಾನ ಭರಿಸುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ರಸ್ತೆ ಅಭಿವೃದ್ಧಿ ಕಾಮಗಾರಿ ಕಾರ್ಯಾರಂಭಮಾಡಬೇಕೆಂಬ ಇಲಾಖೆಯ ಸೂಚನೆ ಮೇರೆಗೆರಸ್ತೆ ಅಗಲೀಕರಣದ ಕಾಮಗಾರಿಗೆ ಭೂಮಿ ಪೂಜೆನೆರವೇರಿಸಲಾಗಿದೆ. ಗುತ್ತಿಗೆದಾರರಾದ ದಿನೇಶ್‌ಒಂದು ತಿಂಗಳ ಒಳಗಾಗಿ ಗುಣಮಟ್ಟದ ರಸ್ತೆನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಶಾಸಕ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳಸಹಕಾರದಿಂದ ಮರಳೆಗವಿ ಮಠ ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ದೇವ್,ಜಿಪಂ ಸದಸ್ಯ ಶಿವಕುಮಾರ್, ತಾಪಂ ಅಧ್ಯಕ್ಷನಾಗು, ಪಿಡಬ್ಲ್ಯೂಡಿ ಇಲಾಖೆಯ ಎಇಇಮೂರ್ತಿ, ಎಇ ಅಪ್ಪಣ್ಣ, ಗುತ್ತಿಗೆದಾರ ದಿನೇಶ್, ಭರತ್, ಪಿಡಿಒ ಶಿವಣ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.