ಕೆಂಪೇಗೌಡ ಜಯಂತಿಗೆ ಭೂಮಿ ಪೂಜೆ
Team Udayavani, Dec 6, 2019, 5:06 PM IST
ಮಾಗಡಿ: ಪಟ್ಟಣದ ಐತಿಹಾಸಿಕ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಡಿ.12ರ ಗುರುವಾರ ದಿನದಂದು ನಡೆಯಲಿರುವ ಕೆಂಪೇಗೌಡರ 511ನೇ ಜಯಂತ್ಯುತ್ಸವದ ಬೃಹತ್ ವೇದಿಕೆ ನಿರ್ಮಾಣಕ್ಕೆ ಸಕಲ ಸಿದ್ದತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಕೆಂಪೇಗೌಡ ಕೋಟೆ ಮೈದಾನದಲ್ಲಿ ಗುರುವಾರ ದೇವಮೂಲೆಯಲ್ಲಿ ಹಾಲುಕಂಭ ನೆಟ್ಟು ಹಾಲೆರೆಂದು ಶ್ರದ್ಧಾಭಕ್ತಿಯಿಂದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಶ್ವಖ್ಯಾತಿ ಹೊಂದಿರುವ ನಾಡಪ್ರಭು ಕೆಂಪೇಗೌಡರು ಗಂಡು ಮೆಟ್ಟಿದ ಮಾಗಡಿಯ ಮಣ್ಣಿನ ಮಗ ಎಂದು ಹೇಳಲು ಹೆಮ್ಮೆ ಎನಿಸಿದೆ. ಅವರ 511ನೇ ಜಯಂತ್ಯುತ್ಸವದ ಸಮಾರಂಭಕ್ಕೆ ಸುಮಾರು 25 ಸಾವಿರ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸು ನಿರೀಕ್ಷೆ ಇದೆ ಎಂದರು.
ಕೆಂಪೇಗೌಡರ 511ನೇ ಜಯಂತ್ಯುತ್ಸವದ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಇವರನ್ನು ವಿಶೇಷವಾಗಿ ಆಹ್ವಾಸಿಲಾಗಿದೆ. ನಾಡಪ್ರಭು ಕೆಂಪೇಗೌಡರ ಮೇಲೆ ಅಭಿಮಾನವುಳ್ಳ ಮಹಾನೀಯರು, ಮಠಾಧೀಶರು, ನಟನಟಿಯರು, ಗಣ್ಯರು, ಕಲಾವಿದರು, ಚಿಂತಕರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭಕ್ಕೆ ಆಗಮಿಸುವ ಕೆಂಪೇಗೌಡರ ಎಲ್ಲ ಅಭಿಮಾನಿಗಳಿಗೂ ನನ್ನ ಸ್ವಂತ ದುಡಿಮೆಯಹಣದಿಂದ ಬೂಂದಿಬೂರಿ ಬೋಜನದ ವ್ಯವಸ್ಥೆ ಮಾಡುತ್ತೇನೆ. ಈ ಸಮಾರಂಭವನ್ನು ಸರ್ಕಾರದ ಅನುದಾನದಿಂದ ಮಾಡುತ್ತಿಲ್ಲ ಎಂದು ಕೃಷ್ಣಮೂರ್ತಿ ಸ್ಪಷ್ಟಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: 511 ನೇ ಕೆಂಪೇಗೌಡರ ಜಯಂತ್ಯುತ್ಸವ ಸಮಾರಂಭದ ಪ್ರಯುಕ್ತ ಹೆಸರಾಂತ ಕಲಾವಿದರು, ನಟನಟಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆ. ಸಾಧಕ ರೈತರು, ಯುವಪ್ರತಿಭೆಗಳು, ಮಹಿಳೆಯರು ಸೇರಿದಂತೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿರುವ 2 ಸಾವಿರ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸುವ ವಿಶೇಷ ವಿನೂತನವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಭೈರೇಗೌಡ ಮಾತನಾಡಿ, ಪ್ರಥಮವಾಗಿ ಮಾಗಡಿಯಲ್ಲಿ ಕೆಂಪೇಗೌಡ ಜಯಂತಿಯನ್ನು ಪ್ರಾರಂಭಿಸಿದ್ದು, ಗಂಡು ಮೆಟ್ಟಿದ ಮಾಗಡಿಯಲ್ಲಿ ಕೃಷ್ಣಮೂರ್ತಿ ಅವರಲ್ಲಿರುವ ಕೆಂಪೇಗೌಡ ಆದರ್ಶಗಳೇ ಇದಕ್ಕೆಲ್ಲ ಸಾಕ್ಷಿಯಾಗಿದೆ. ಕಳೆದ 20 ವರ್ಷಗಳಿಂದ ಕೆಂಪೇಗೌಡ ಜಯಂತಿಯನ್ನು ಅವರ ಸ್ವಂತ ದುಡಿಮೆಯ ಹಣದಲ್ಲಿ ಮಾಡಿಕೊಂಡು ಬರುತ್ತಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡೆಬೇಕು. ಅವರ ವಿರುದ್ಧಆಹಂಕಾರ ದಿಂದ ಮಾತನಾಡುವುದನ್ನು ಬಿಡಬೇಕು. ಕೃಷ್ಣಮೂರ್ತಿ ಏನೇ ಆಗಿರಲಿ ಅವರಲ್ಲೊಬ್ಬ ಆದರ್ಶ ಕೆಂಪೇಗೌಡ ಇದ್ದಾನೆ ಎಂಬುದನ್ನು ಮರೆಯ ಬಾರದು ಎಂದರು.
ಜಯಂತ್ಯುತ್ಸವದಲ್ಲಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ರಾಜಕೀಯ ಮರೆತು ಭಾಗವಹಿಸಿದರೆ ನಿಮ್ಮಲ್ಲರ ಗೌವರರವೂ ಹೆಚ್ಚಾಗುತ್ತದೆ. ಎಲ್ಲರೂ ಜಯಂತ್ಯುತ್ಸವದಲ್ಲಿ ಭಾಗವಹಿಸುವ ಮೂಲಕ ಕೆಂಪೇಗೌಡರಿಗೆ ಒಂದು ಸಲಮ್ ಸಲ್ಲಿಸೋಣ. ಕೆಂಪೆಗೌಡರ ತತ್ವಾ ದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ಗಂಗಾಧರ್, ತಮ್ಮಣ್ಣಗೌಡ, ಆನಂದ್, ಹೇಮಂತ್, ಗೋಪಾಲ್,ಕುಮಾರ್, ಮಂಜುನಾಥ್, ಗೊಲ್ಲರಪಾಳ್ಯದ ಜಯರಾಂ, ಕೋಟಪ್ಪ, ಶಿವಣ್ಣ, ರಂಗಪ್ಪ, ಶ್ರೀನಿವಾಸಯ್ಯ ರವಿಕುಮಾರ್,ಜಗದೀಶ್, ಶಂಕರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.