ಕುಸಿಯುವ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ
Team Udayavani, Oct 12, 2018, 4:41 PM IST
ಕುದೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಕಟ್ಟಣದ ಚಾವಣಿ ಯಾವಾಗ ಕುಸಿಯುತ್ತದೆಯೋ ಎಂದು ಜೀವಭಯದಲ್ಲಿ ವಿದ್ಯಾರ್ಥಿಗಳು ಪಾಠಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
2008ರಲ್ಲಿ ಕಾಲೇಜಿಗೆ ಸೇರಿದಂತೆ ಎಂಟು ಕೊಠಡಿಯುಳ್ಳ ಕಟ್ಟಡ ನಿರ್ಮಿಸಲಾಗಿದ್ದು, ಪ್ರಸ್ತುತ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಸುಮಾರು 448 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 8 ಕೊಠಡಿಗಳಲ್ಲಿ 6 ಕೊಠಡಿಗಳನ್ನು ವಿದ್ಯಾರ್ಥಿಗಳ ಬೋಧನೆಗೆಗಾಗಿ ಬಳಸುತ್ತಿದ್ದಾರೆ, ಇನ್ನುಳಿದ 2 ಕೊಠಡಿಯನ್ನು ಕಾಲೇಜು ಸಿಬ್ಬಂದಿ ಹಾಗೂ ವಿಜ್ಞಾನದ ಪ್ರಯೋಗಲಾಯಕ್ಕೆ ಬಳಸಲಾಗಿದೆ.
ಪ್ರಾಣ ಭಯದ ಭೀತಿ:ಈ ಹಿಂದೆ ಇದ್ದ ಕಲ್ಯಾಣಿಯನ್ನು ಮುಚ್ಚಿ ಆ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲಾಗಿದ್ದು, ಕಟ್ಟಡ ಮತ್ತು ಒಳಗಿನ ಆವರಣದ ನೆಲ ಕೆಲವುದಿನಗಳ ಹಿಂದೆ ಕುಸಿದಿದೆ, ಕೊಠಡಿಗಳ ಗೋಡೆಗಳು ಸಹ ಬಿರುಕು ಬಿಟ್ಟಿದೆ, ಪಾಠ ಮಾಡುವ ಉಪನ್ಯಾಸಕರು ಒಳಗೆ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದು ಬರುತ್ತಾರೆ. ಕೊಠಡಿಗಳ ಒಳಗೆ ಕುಳಿತು ಪಾಠ ಕೇಳುವಾಗ ಯಾವುದೇ ಕ್ಷಣದಲ್ಲಿ ಮೇಲ್ಚಾವಣಿ ಕುಸಿದು ಬೀಳುವ ಭೀತಿ ಎದುರಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು.
ಕಟ್ಟಡದ ಮೇಲ್ಚಾವಣಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಇಳಿಜಾರು ಮಾಡಿಲ್ಲ, ಮಳೆ ನೀರೆಲ್ಲಾ ಮೇಲ್ಛಾವಣಿ ಮೇಲೆ ನಿಂತು ನಿತ್ಯ ಕಟ್ಟಡ ಸೋರುತ್ತಿದೆ. ಸೋರುವ ನೀರಿನ ಕೆಳೆಗೆ ಕುಳಿತು ಪಾಠ ಕೇಳುವುದು ತುಂಬಾ ಕಷ್ಟವಾಗಿದೆ ಎಂದು ವಿದ್ಯಾರ್ಥಿಯೊಬ್ಬ ಉದಯವಾಣಿಗೆ ತಿಳಿಸಿದ್ದಾನೆ.
ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಮಳೆಗಾಲದಲ್ಲಂತೂ ಕಾಲೇಜಿನ ಕಟ್ಟಡ ಸಂಪೂರ್ಣ ಜಲಾವೃತ್ತವಾಗುತ್ತದೆ. ಕಾಲೇಜಿನ ಆವರಣದಲ್ಲಿ ನಿಂತ ನೀರಿನಲ್ಲಿ ಜಡ ಸಸ್ಯಗಳು ಬೆಳೆದು ಕಸ ಕಡ್ಡಿ ಕೊಳೆತು ದುರ್ನಾತ ಬೀರುತ್ತಿದೆ, ಚಾವಣಿಯಲ್ಲಿ ನಿಲ್ಲುವ ನೀರನ್ನು ವಿದ್ಯಾರ್ಥಿಗಳು ಸ್ವತ್ಛಗೊಳಿಸುವ ಪರಿಸ್ಥಿತಿ ಎದುರಾಗಿದೆ ಮತ್ತು ವಿಷ ಜಂತುಗಳ ಕಾಟವು ಹೆಚ್ಚಾಗಿದೆ.
ಗ್ರಾಪಂ ಗಮನಕ್ಕೆ: ಉಪನ್ಯಾಸಕರು ತಮ್ಮ ಕೈಲಾಗುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ಆದರೆ ಕಟ್ಟಡ ಬಿರುಕು, ಮೈದಾನ ಸಮತಟ್ಟು , ಚರಂಡಿ ಸಮಸ್ಯೆ ಮುಂತಾದವು ಉನ್ನತ ಮಟ್ಟದಲ್ಲಿ ಕೈಗೊಳ್ಳುವ ಕಾರ್ಯಗಳಾಗಿದ್ದು ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿ ಕೊಡಲೇ ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಲೇಜು ಸಿಬ್ಬಂದಿ ಮನವಿ ಮಾಡಿದ್ದಾರೆ.
ಕ್ರೀಡೆಗೂ ಹಿನ್ನಡೆ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕ್ರೀಡಾಪಟ್ಟುಗಳಿದ್ದು ಅವರಿಗೆ ಸೂಕ್ತ ತರಬೇತಿ ಅವಶ್ಯ ಕತೆಯಿದೆ. ಸರಿಯಾಗಿ ನಿರ್ವಹಣೆ ಕಾಣದ ಮೈದಾ ನದಿಂದ ಕ್ರೀಡಾ ಚಟುವಟಿಕೆಗಳು ತೀವ್ರ ಹಿನ್ನಡೆ ಯಾಗಿದೆ. ಗ್ರಾಮೀಣ ಪ್ರತಿಭೆಗಳು ಸರಿಯಾಗಿ ತರ ಬೇತಿ ಪಡೆಯಲು ಸಾಧ್ಯವಾಗದೆ ಕಮರಿ ಹೋಗು ತ್ತಿದ್ದಾರೆ. ಮಳೆ ಬಂದರೆ ನೀರು ತುಂಬಿ ಕೆರೆಯಂತಾಗಿ ಮಾರ್ಪಾಡಾಗುವ ಮೈದಾನದಲ್ಲಿ ಕ್ರೀಡಾಭ್ಯಾಸ ಹೇಗೆ ಸಾಧ್ಯ ಎಂಬುದು ಕ್ರೀಡಾಭಿಮಾನಿಗಳ ಪ್ರಶ್ನೆ ?
ಕಾಲೇಜಿನ ಆವರಣದಲ್ಲಿ ಮಳೆ ಬಂದರೆ ನೀರು ನಿಂತುಕೊಳ್ಳುವ ಬಗ್ಗೆ ಇಲಾಖೆಗೆ ಲಿಖೀತ ರೂಪದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಜಿಪಂ ಸಭೆಯಲ್ಲೂ ಸಹ ಹಲವು ಬಾರಿ ತಿಳಿಸಿದ್ದೇವೆ ಹಾಗೂ ಗ್ರಾಪಂ ಅಧ್ಯಕ್ಷ, ಸದಸ್ಯರಿಗೂ
ವಸ್ತುಸ್ಥಿತಿ ಬಗ್ಗೆ ತಿಳಿದಿದೆ. ಆದರೂ ಜನಪ್ರತಿನಿಧಿಗಳು ಮಾತ್ರ ಈ ಕಾಲೇಜಿಗೂ ನಮಗೆ ಸಂಬಂಧವೇ ಇಲ್ಲ ಎಂಬುವ ರೀತಿ ವರ್ತಿಸುತ್ತಿದ್ದಾರೆ. ಇದು ಹೀಗೆ ಮೂಮದುವರಿದರೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವೆ.
ಕಾಂತರಾಜು, ಪ್ರಾಂಶುಪಾಲ
ಶಾಸಕ ಮಂಜುನಾಥ್ ಪ್ರತಿನಿಧಿಸಿದ್ದ ಕೇತ್ರ ಶಾಸಕ ಎ.ಮಂಜುನಾಥ್ ಜಿಪಂನಲ್ಲಿ ಗೆಲುವು ನೀಡಿ ರಾಜಕೀಯವಾಗಿ ಪುನಜನ್ಮ ನೀಡಿದ ಕ್ಷೇತ್ರ ಕುದೂರು, ಹೋಬಳಿ ಕೇಂದ್ರದ ಸರ್ಕಾರಿ ಕಾಲೇಜು ಇಂತಹ ಪರಿಸ್ಥಿತಿಯಿದ್ದರೂ ಜನಪ್ರತಿ ನಿಧಿಗಳು ಮಾತ್ರ ಕಣ್ಮುಚ್ಚಿಕೊಳಿತ್ತಿದ್ದಾರೆ. ಮಳೆ ಬಂದರೆ ಕಾಲೇಜಿಗೆ ಬರಲು ಮುಜುಗರ ವಾಗುತ್ತದೆ. ಈ ಕಾಲೇಜಿಗೆ
ಯಾಕಾದರೂ ಸೇರಿ ಕೊಂಡೆವೋ ಎಂಬ ಮನೋಭಾವನೆ ವಿದ್ಯಾರ್ಥಿ ಗಳಲ್ಲಿ ಮೂಡುತ್ತದೆ. ಅತ್ತ ಇಲಾಖೆಯೂ ತಲೆಕಡೆಸಿಕೊಳ್ಳುತ್ತಿಲ್ಲ ಇತ್ತ ಗ್ರಾಪಂ ಸಹ ಚರಂಡಿ ನಿರ್ಮಾಣದ ವಿಷಯದಲ್ಲಿ ಜಾಣಕುರುಡು ಪ್ರದರ್ಶಿಸುತ್ತಿದೆ, ಶಾಸಕರು ನಮ್ಮ ಕಾಲೇಜಿನ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯ ಲ್ಲಿದ್ದೇವೆ ಎಂದು ವಿದ್ಯಾರ್ಥಿಗಳು ಉದಯವಾಣಿ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ.
ಕೆ.ಎಸ್.ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.