ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ
Team Udayavani, May 10, 2020, 5:52 PM IST
ಚನ್ನಪಟ್ಟಣ: ಜನಸಾಮಾನ್ಯರ ತುರ್ತು ಅವಶ್ಯಕತೆ ಅನುಗುಣವಾಗಿ ತಮ್ಮ ವೈಯಕ್ತಿಕ ಉಳಿತಾಯ ಖಾತೆಗೆ 5,000 ರೂ.ಗಳನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಗ್ರಾಹಕರು ಅದನ್ನು ಬಳಸಿಕೊಂಡು ನಿಯಮಿತ ಮರುಪಾವತಿಗೆ ಅನುವು ಮಾಡಿಕೊಡ ಲಾಗುವುದು ಎಂದು ಆರ್‌ಬಿಒ ಒನ್ ಪ್ರಾದೇಶಿಕ ವ್ಯವಸ್ಥಾಪಕ ಕಿಶೋರ್‌ಕುಮಾರ್ ಪಾಟೀಲ್ ತಿಳಿಸಿದರು. ತಾಲೂಕಿನ ವಂದಾರಗುಪ್ಪೆ ಗ್ರಾಪಂ ವ್ಯಾಪ್ತಿಯ ಕರಿಯಪ್ಪನ ದೊಡ್ಡಿ, ಬಾಣಗಹಳ್ಳಿ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿಕಾಸ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋವಿಡ್-19 ಜನ ಜಾಗೃತಿ ಕಾರ್ಯಕ್ರಮ ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗೆ ಬ್ಯಾಂಕ್ ಸಾಲದ ಬಗ್ಗೆ ತಿಳಿವಳಿಕೆ ಮತ್ತು ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಸಹಾಯ ಸಂಘಗಳಿಗೆ ಸಾಲ ಮಂಜೂರಾತಿ ಪತ್ರ ನೀಡಲಾಯಿತು. ಎಸ್‌ಬಿಐ ಚನ್ನಪಟ್ಟಣ ಶಾಖೆ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ಆರ್‌ಬಿಒ ಒನ್ ಉಪ ವ್ಯವಸ್ಥಾಪಕ ಮಹೇಶ್, ಎಸ್‌ಬಿಐ ಚನ್ನಪಟ್ಟಣ ಶಾಖೆ ವ್ಯವಸ್ಥಾಪಕ ಶ್ರೀಧರಮೂರ್ತಿ, ಹೊಂಗನೂರು ಶಾಖೆ ಬಿಂದುಶ್ರೀ, ಅಕ್ಕೂರು ಶಾಖೆ ಅನುಜ್ ದ್ವಿವೇದಿ ಮತ್ತು ಸಿಬ್ಬಂದಿ ನಿಹಾರಿಕಾ, ಅಮಿತ್ ಕುಮಾರ್, ಆರ್‌ಬಿಒ ಒನ್ ಸಿಬ್ಬಂದಿ ಕೃಷ್ಣಮೂರ್ತಿ, ವಿಕಾಸ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಮನಗರ ವಿಭಾಗದ ಆರ್‌ಡಿಸಿ ಎ.ಸಿ.ಪಾಂಡು, ರವಿ, ಸಿಡಿಸಿ ಮಂಗಳಮ್ಮ, ಶಿವಮ್ಮ, ಸುಜಾತಾ, ಲತಾ ಎಸ್., ಲತಾ ಸಿ.ಎಸ್, ಸಿ.ಎಂ.ರಾಜು ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.