ರಾತ್ರಿ ವೇಳೆ ಎಟಿಎಂಗಳಿಗೆ ಬೀಗ: ಜನರ ಪರದಾಟ

Team Udayavani, May 6, 2019, 5:38 PM IST

ramanagar-2

ಮಾಗಡಿ: ಪಟ್ಟಣದಲ್ಲಿ ಎಟಿಎಂಗಳು ಇದ್ದರೂ ಇಲ್ಲದಂತಾಗಿದ್ದು, ನಿಜಕ್ಕೂ ಗ್ರಾಹಕರಿಗೆ ನಿರುಪಯುಕ್ತವಾಗಿದೆ. ದಿನದ 24 ಗಂಟೆಯೂ ಗ್ರಾಹಕರಿಗೆ ಹಣ ತೆಗೆಯಲು ಅನುಕೂಲವಾಗುವಂತದ್ದು, ಎಟಿಎಂಗಳ ಸೇವೆಯನ್ನು ಬ್ಯಾಂಕ್‌ಗಳು ಒದಗಿಸಿದೆ. ಆದರೆ ಪಟ್ಟಣದಲ್ಲಿರುವ ಬಹುತೇಕ ಎಲ್ಲಾ ಎಟಿಎಂಗಳು ಬೆಳಗ್ಗೆ ಮತ್ತು ರಾತ್ರಿ ವೇಳೆ ಮುಚ್ಚಿರುತ್ತದೆ. ಗ್ರಾಹಕರು ಎಟಿಎಂಗಳಲ್ಲಿ ತುರ್ತು ಅಗತ್ಯ ಹಣ ತೆಗೆಯಲಾಗದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಬ್ಯಾಂಕ್‌ಗಳ ವ್ಯವಸ್ಥಾಪಕರಂತೂ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಗ್ರಾಹಕರ ಆರೋಪವಾಗಿದೆ.

ಅದರಲ್ಲೂ ವಾರದ ರಜೆದಿನಗಳಂತೂ ಎಟಿಎಂಗಳು ಮುಚ್ಚಿರುವುದರಿಂದ ಗ್ರಾಹಕರು ಎಟಿಎಂಗಳಲ್ಲಿ ಹಣ ಪಡೆಯಲಾಗದೆ ಪರದಾಟದ ಸಮಸ್ಯೆ ಹೇಳತೀರದು, ಬ್ಯಾಂಕ್‌ ಕಾರ್ಯನಿರ್ವಹಿಸುವುದು ರಜಾ ದಿನ ಹೊರತುಪಡಿಸಿ ಸೋಮವಾರದಿಂದ ಶನಿವಾರ ಕೆಲಸದ ವೇಳೆ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ.

ಆ ವೇಳೆಗಾದರೂ ಹಣ ಪಡೆಯಲು ಗ್ರಾಹಕರು ಬ್ಯಾಂಕ್‌ಗೆ ತೆರಳಿ ತರ್ತು ಹಣ ಕೇಳಿದರೆ ಇಲ್ಲಿ ಹಣ ಕೊಡಲಾಗುವುದಿಲ್ಲ, ಎಟಿಎಂ ಬಳಸಿ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಬ್ಯಾಂಕ್‌ ಸಮಯದಲ್ಲಿ ಮಾತ್ರ ಎಟಿಎಂಗಳು ತೆರೆದುಕೊಳ್ಳುತ್ತದೆ. ಆ ವೇಳೆ ಎಟಿಎಂ ಮುಂದೆ ಗ್ರಾಹಕರು ಸರದಿಯಲ್ಲಿ ನಿಂತಿರುತ್ತಾರೆ. ಕನಿಷ್ಠ 1 ರಿಂದ 2 ಗಂಟೆ ಹಣಕ್ಕಾಗಿ ಎಟಿಎಂ ಮುಂದೆ ನಿಲ್ಲಬೇಕಿರುತ್ತದೆ. ಸಂಜೆಯೋ ಅಥವಾ ರಾತ್ರಿಯೋ ಎಟಿಎಂಗಳಲ್ಲಿ ಹಣ ತೆಗೆದುಕೊಂಡರಾಯಿತು ಎಂದು ರಾತ್ರಿ ಸಮಯದಲ್ಲಿ ಹೋದರೆ ಬಹುತೇಕ ಎಲ್ಲಾ ಎಟಿಎಂಗಳು ಮುಚ್ಚಿರುತ್ತದೆ. ಯಾವ ಎಟಿಎಂಗಳು ಕಾರ್ಯನಿರ್ವಹಿಸುತ್ತಿರುವುದಿಲ್ಲ, ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ ಹಣ ಖಾಲಿಯಾಗಿರುತ್ತದೆ. ಎಟಿಎಂಗಳಲ್ಲಿ ಹಣ ಸಿಗದೆ ಇರುವುದರಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸಬೇಕಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ಎಟಿಎಂಗಳು ದಿನ 24 ಗಂಟೆಯೂ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸೇವೆಗೆ ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಹಕರ ಒಕ್ಕರಲಿನಿಂದ ಮನವಿ ಮಾಡಿ ಕೋರಿದ್ದಾರೆ.

ಟಾಪ್ ನ್ಯೂಸ್

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

5-hiriyadka

Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3(1

Bajpe: ಪಂಚ ಭಾಷೆಗಳಲ್ಲಿ ಎಕ್ಕಾರು ಶಾಲಾ ವಾರ್ತೆಗಳು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

5-hiriyadka

Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.