ಜಮೀನು ವಿಚಾರವಾಗಿ ಗಲಾಟೆ ಅಣ್ಣನಿಂದಲೇ ತಮ್ಮನ ಕೊಲೆ
Team Udayavani, Jul 8, 2023, 2:03 PM IST
ಮಾಗಡಿ: ಜಮೀನು ವಿಚಾರವಾಗಿ ಸಹೋದರರ ನಡುವೆ ಗಲಾಟೆ ಉಂಟಾಗಿ ಅಣ್ಣನಿಂದ ತಮ್ಮ ಕೊಲೆಯಾಗಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ನಸೆಪಾಳ್ಯದ ನಾಗರಾಜು(34) ಕೊಲೆಯಾದ ವ್ಯಕ್ತಿ ಎಂದು ಗುರುತಿಸ ಲಾಗಿದೆ. ಶುಕ್ರವಾರ ಬೆಳಗ್ಗೆ ಕೊಂಡಳ್ಳಿ ದಾರಿಯ ಶೆಟ್ಟರಕಟ್ಟೆ ಬಳಿ ಇರುವ ಜಮೀನಿನಲ್ಲಿ ರೇಷ್ಮೆ ಸೊಪ್ಪು ಕೀಳುವ ಸಮಯದಲ್ಲಿ ಸಹೋದರರಾದ ರಾಮಚಂದ್ರ ಹಾಗೂ ನಾಗರಾಜು ನಡುವೆ ಜಮೀನು ವಿಚಾರವಾಗಿ ಗಲಾಟೆ ಆರಂಭವಾಗಿದೆ ಗಲಾಟೆ, ವಿಕೋಪಕ್ಕೆ ಹೋಗಿ ಅಣ್ಣ ರಾಮ ಚಂದ್ರು ತಮ್ಮ ನಾಗರಾಜು ಇಬ್ಬರು ಮಾರಕಾಸ್ತ್ರ ಗಳಿಂದ ಹೊಡೆದಾಡಿದ್ದು, ಈ ವೇಳೆ ರಾಮಚಂದ್ರ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ನಾಗರಾಜು ಸಾವನ್ನಪ್ಪಿದ್ದಾನೆ. ಪದೇ ಪದೇ ಜಮೀನು ವಿಚಾರವಾಗಿ ಸಹೋ ದರರ ನಡುವೆ ಗಲಾಟೆ ನಡೆ ಯುತ್ತಿದ್ದು, ಶುಕ್ರವಾರ ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣ ನಿಂದಲೇ ತಮ್ಮ ಕೊಲೆಯಲ್ಲಿ ವಿವಾದದ ಗಲಾಟೆ ಅಂತ್ಯ ವಾಗಿದೆ.
ಸ್ಥಳೀಯರು ಮಾಹಿತಿ ಮೇರೆಗೆ ಸ್ಥಳಕ್ಕೆ ರಾಮ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಯು.ಡಿ. ಕೃಷ್ಣಕುಮಾರ್, ವೃತ್ತ ನಿರೀಕ್ಷಕರಾದ ಬಿ.ರವಿ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗರಾಜುಗೆ ಪತ್ನಿ ಅನುಷಾ, ತಾಯಿ ಅರಸಮ್ಮ ಇದ್ದಾರೆ. ರಾಮಚಂದ್ರ ಪೊಲೀಸರಿಗೆ ಶರಣಾಗಿದ್ದು, ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.