ಮಾಗಡಿ: ಸ್ವಯಂ ಘೋಷಿತ ಲಾಕ್‌ಡೌನ್
Team Udayavani, Jun 23, 2020, 6:37 AM IST
ಮಾಗಡಿ: ಇಂದಿನಿಂದ ಮಾಗಡಿ ಪಟ್ಟಣದ ಜನತೆ ಸ್ವಯಂ ಪ್ರೇರಿತರಾಗಿ ತಾಲೂಕು ಆಡ ಳಿತದೊಂದಿಗೆ ಸಹಕರಿಸಿ ಸ್ವಯಂ ಲಾಕ್‌ಡೌನ್ ವಿಧಿಸಿಕೊಳ್ಳಲು ಕೋವಿಡ್-19 ತುರ್ತು ಸಭೆಯಲ್ಲಿ ಒಕ್ಕೋರಲಿನಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂ ಗಣದಲ್ಲಿ ನಡೆದ ಪಟ್ಟಣದ ವ್ಯಾಪಾರಿಗಳು, ವರ್ತಕರು, ಮಾಲಿಕರ ಕೋವಿಡ್ -19 ತುರ್ತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಪಟ್ಟಣದ ಸ್ಥಿತಿಗತಿಗಳ ಕುರಿತು ಅನೇಕ ದೂರುಗಳು ಬಂದಿದೆ. ಜನರು ಭಯ ಭೀತಿಗೊಂಡಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಎಂದು ದೈರ್ಯ ತುಂಬಲಾಗುತ್ತಿದೆ. ಜೀವ ಬೇಕೋ ಅಥವಾ ಜೀವನ ಬೇಕೋ ನಾಗರಿಕರೇ ತೀರ್ಮಾ ನಿಸಬೇಕು ಎಂದರು. ಪಟ್ಟಣದಲ್ಲಿ ಕೋವಿಡ್ 19 ಸೋಂಕು ಉಲ್ಬಣಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮದಿಂದ ನಂತರ ಸಂಪೂರ್ಣ ಮಾಗಡಿ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಆಗಲಿದೆ.
ಸಾರ್ವಜನಿಕರು ಸಹಕರಿಸಬೇಕು. ಪಟ್ಟಣದಲ್ಲಿ ಪ್ರತಿದಿನ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಅಂಗಡಿ, ಮಾರುಕಗಿಲು ತೆಗೆದು ವ್ಯಾಪಾರ, ವ್ಯವಹಾರ ನಡೆಸಬಹುದು. ಈಗಾಗಲೇ ಸೀಲ್‌ಡೌನ್ ಆಗಿರುವ ಬೀದಿಯಲ್ಲಿಯಲ್ಲಿನ ಮನೆಗಳ ಪಟ್ಟಿ ಮಾಡಿ ಪುರಸಭೆ ಅಧಿಕಾರಿಗಳು ನೀಡಿದರೆ ಅಂತಹ ಮನೆಗಳ ಕುಟುಂಬ ನಿರ್ವಹಣೆಗೆ ತಾಲೂಕು ಆಡಳಿತದ ಮೂಲಕ ಅಗತ್ಯ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುವುದು.
ನಗರ, ಪಟ್ಟಣ ಪ್ರದೇಶಗಳಿಂದ ಜನರು ಹಳ್ಳಿಗಳಿಗೆ ಬರುತ್ತಿರುವುದರಿಂದ ಈಗ ಹಳ್ಳಿಗಳೂ ಸುರಕ್ಷಿತ ವಾಗಿಲ್ಲ. ಹಳ್ಳಿಗಳ ಜನರು ಕೋವಿಡ್ 19 ತಡೆಗೆಸಹಕರಿಸಬೇಕಿದೆ ಎಂದು ತಿಳಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಿದರೆ ಲಾಕ್ ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಿಸಬಹುದು ಎಂದು ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಪ್ಪ, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಟಿ.ಪ್ರದೀಪ್, ಸಿಪಿಐ ಮಂಜು ನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದೆಟಛೀಶ್ವರ್, ಕುದೂರು ಪಿಎಸ್‌ಐ ಮಂಜುನಾಥ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆ ಸದಸ್ಯರು, ತಾಪಂ ಸದಸ್ಯರು, ವರ್ತಕರು, ಹೋಟೆಲ್ ಮಾಲಿಕರು, ವಿವಿಧ ಅಂಗಡಿಗಳ ಮಾಲಿಕರು ವಿವಿಧ ಸಂಘ ಸಂಸ್ಥೆಗಳ ಪದಾಧಿ ಕಾರಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಚರ್ಚಿಸಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.