ನಾಗರಿಕರ ರಕ್ಷಣೆಯೇ ಪೊಲೀಸ್ ಇಲಾಖೆಯ ಕರ್ತವ್ಯ
ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್ ಚಂದ್ರ ಹೇಳಿಕೆ . ಪೊಲೀಸ್ ಇಲಾಖೆಯಿಂದ ಜನಸಂಪರ್ಕ ಸಭೆ
Team Udayavani, Feb 13, 2020, 4:17 PM IST
ಮಾಗಡಿ: ನಾಗರಿಕರ ರಕ್ಷಣೆಗೆ ಪೊಲೀಸರು ಸದಾ ಜಾಗೃತರಾಗಿರುತ್ತಾರೆ. ಅವರಿಗೆ ಪ್ರತಿಯೊಬ್ಬ ನಾಗರಿಕ ಸಹಕಾರ ನೀಡಿದರೆ, ಕಾನೂನು ಸುವ್ಯವಸ್ಥೆಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್ ಚಂದ್ರ ಮನವಿ ಮಾಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಆಹಾವಾಲು ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ ಠಾಣೆ ಎಂದರೆ ನಾಗರಿಕರು ಭಯ ಪಡುವ ಅಗತ್ಯವಿಲ್ಲ. ನಿಮ್ಮ ರಕ್ಷಣೆಯೇ ನಮ್ಮ ಕರ್ತವ್ಯವಾಗಿರುತ್ತದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾನೂನು ರಕ್ಷಣೆಗೆ ಪೊಲೀಸರು ಸೇವೆ ಮಾಡಲು ಸದಾ ಸಿದ್ದರಿರುತ್ತಾರೆ ಎಂದು ತಿಳಿಸಿದರು.
ಜನಸಂಖ್ಯೆಯ ಸ್ಫೋಟದಿಂದ ಹೆಚ್ಚುತ್ತಿರುವ ಅಪರಾಧ, ಕಳ್ಳತನ, ಮೋಸ, ವಂಚನೆಗಳನ್ನು ತಡೆಗಟ್ಟಲು ಪೊಲೀಸರು ಸದಾ ಜಾಗೃತರಾಗಿರುತ್ತಾರೆ. ಅದರೆ ಮಾಹಿತಿ ಕೊರತೆಯಿಂದಾಗಿ ಅಪರಾಧಿಗಳು ತಪ್ಪಿಸಿಕೊಳ್ಳುವ ಅವಕಾಶಗಳಿರುತ್ತವೆ. ಜಾಗೃತ ನಾಗರಿಕರು ನಿರ್ಭಯವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಅಪರಾಧಗಳನ್ನು ತಡೆಯಲು ಅನುಕೂಲವಾಗುತ್ತದೆ ಎಂದರು.
ಡಿವೈಎಸ್ಪಿ ಲಕ್ಷ್ಮೀನಾರಾಯಣ ಮಾತನಾಡಿ, ಸಾರ್ವಜನಿಕರ ಸಹಕಾರದಿಂದ ಪೊಲೀಸರು ತಮ್ಮ ಕರ್ತವ್ಯವನ್ನು ಯಶಸ್ವಿಗೊಳಿಸುವ ಪ್ರಯತ್ನದಲ್ಲಿ ಶ್ರಮಿಸುತ್ತಿದ್ದಾರೆ. ನಾಗರಿಕರ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆಗದಂತೆ ರಕ್ಷಣೆ ಮಾಡುವುದು. ಅಪಘಾತ ಮತ್ತು ಅಪರಾಧಗಳ ತಡೆಗೆ ಕಾನೂನು ಪಾಲನೆ ಬಹಳ ಮುಖ್ಯವಾಗಿರುತ್ತದೆ. ಪೊಲೀಸ್ ಠಾಣೆ ಕೊಲೆಗಡುಕರಿಗೆ, ಸಲುಗೆಕೋರರಿಗೆ, ಕಳ್ಳಕಾಕರಿಗೆ, ದುಷ್ಕರ್ಮಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ ಸಾರ್ವಜನಿಕರು ಕಾನೂನು ಕೈಗೆ ತ್ತಿಕೊಳ್ಳದೆ ಇಲಾಖೆ ನಿಯಮ ಪಾಲಿಸಿ ಎಂದರು.
ತಾಪಂ ಮಾಜಿ ಸದಸ್ಯ ಸಿ.ಜಯರಾಂ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಠಾಣಾ ವ್ಯಾಪ್ತಿ ಹಾಗೂ ಬೀಟ್ ವ್ಯವಸ್ಥೆ ಬದಲಾಗಬೇಕು. ಪೊಲೀಸರು ದೂರು ಬರೆದುಕೊಳ್ಳುವ ಬದಲಾಗಿ ವಿಡಿಯೋ ರೇಕಾರ್ಡ್ ದೂರು ದಾಖಲು ಮಾಡಿಕೊಳ್ಳಬೇಕು. ಮೇಲಾಧಿಕಾರಿಗಳು ಪೊಲೀಸರ ಸಮಸ್ಯೆಗಳ ನಿವಾರಣೆಗೂ ಮುಂದಾಗಬೇಕು. ಅವರ ಆರೊಗ್ಯವಾಗಿರಲು ಕ್ರೀಡಾ ಮತ್ತು ಮನೋ ರಂಜನಾ ಚಟುವಟಿಕೆಗೂ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ನೂರಾರು ನಾಗರಿಕರು ತಮ್ಮ ಆಹಾವಾಲುಗಳನ್ನು ಸಲ್ಲಿಸಿದರು. ಕಲ್ಕೆರೆ ಶಿವಣ್ಣ, ದಲಿತ ಮುಖಂಡರಾದ ದೊಡ್ಡಿ,ಲಕ್ಷ್ಮಣ್, ಮೂರ್ತಿ, ಡಿ.ಶಿವಕುಮಾರ್, ದೊಡ್ಡಯ್ಯ, ಪುರಸಭಾ ಸದಸ್ಯರಾದ ಎಂ.ಎನ್. ಮಂಜುನಾಥ್, ಕೆ.ವಿ.ಬಾಲರಘು, ಎಚ್.ಜೆ.ಪುರು ಷೋತ್ತಮ್, ರೇಖಾ, ಹೇಮಾವತಿ, ವಿಜಯ ಲಕ್ಷ್ಮೀ, ರೂಪೇಶ್, ಶಿವರುದ್ರಮ್ಮ, ರಿಯಾಜ್, ಮಹೇಶ್, ಜಯರಾಂ, ರಂಗನಾಥ್, ರಮೇಶ್, ಗೋಪಿ ವನಜಾ, ಎಎಸ್‌ಐ ಮಲ್ಲೇಶ್, ಪೊಲೀಸ್ ಸಿಬ್ಬಂದಿ ಅಪ್ಪರ್ ಸಾಬ್, ರಾಜಣ್ಣ, ಅರುಣ್, ಶಾಲಿನಿ, ರಾಧಾಮಣಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.