ಮಾಗಡಿ: ಮಹದೇಶ್ವರಸ್ವಾಮಿ ಅಗ್ನಿಕೊಂಡೋತ್ಸವ
Team Udayavani, Mar 16, 2021, 11:31 AM IST
ಮಾಗಡಿ: ತಾಲೂಕಿನ ಮೋಟೇಗೌಡನಪಾಳ್ಯದ ಬೆಟ್ಟದ ಪ್ರಕೃತಿ ಮಡಿಲಲ್ಲಿ ನೆಲೆಸಿರುವಮಹದೇಶ್ವರಸ್ವಾಮಿ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ರಥೋತ್ಸವಹಾಗೂ ಅಗ್ನಿಕೊಂಡೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಸುತ್ತಮುತ್ತಲಿನಿಂದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಉಘೇ.. ಉಘೇ…ಮಹದೇಶ್ವರ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ರಥೋತ್ಸವದ ಹಾಗೂ ಅಗ್ನಿಕೊಂಡೊತ್ಸವದಪ್ರಯುಕ್ತ ಮೋಟೆಗೌಡನಪಾಳ್ಯ, ಕುರುಪಾಳ್ಯ, ಹನುಮಾಪುರ, ವಿಠಲಾಪುರ, ಚೆನ್ನಮ್ಮನಪಾಳ್ಯ,ಚಂದೂರಾಯನಹಳ್ಳಿ, ಹೂಜಿಗಲ್, ಮಾಯನಾಯಕನಹಳ್ಳಿ, ತಗ್ಗೀಕುಪ್ಪೆ ಹಾಗೂಸುತ್ತಮುತ್ತಲಿನ ಗ್ರಾಮಸ್ಥರಿಂದ ಆಗ್ನಿಕೊಂಡಕ್ಕೆ ಸೌದೆಭವ್ಯ ಮೆರವಣಿಗೆಯಲ್ಲಿ ತಂದು ಅಗ್ನಿಕೊಂಡಕ್ಕೆ ಹಾಕಿದರು. ಅರ್ಚಕ ಜಯಣ್ಣ, ದೇವರಾಜುವಿಧಿಬದ್ಧವಾಗಿ ಪೂಜೆ ಸಲ್ಲಿಸುವ ಮೂಲಕ ಕೊಂಡ ಹಾಯ್ದರು.
ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ತಂಬಿಟ್ಟಿ ನಾರತಿ ಹೊತ್ತು. ಮಹದೇಶ್ವರ ಸ್ವಾಮಿ ದೇವಸ್ಥಾನದಸುತ್ತಲು ಮೂರು ಪ್ರದಕ್ಷಣೆ ಹಾಕಿ ದೇವರಿಗೆ ಶ್ರದ್ಧಾಭಕ್ತಿಯಿಂದ ಆರತಿ ಬೆಳಗಿಸಿದರು. ಆರತಿಹೊತ್ತಮಹಿಳೆಯರು ಉತ್ಸವ ಮೂರ್ತಿಯೊಂದಿಗೆಅಗ್ನಿಕೊಂಡ ಸುತ್ತುಪ್ರದಕ್ಷಣೆ ಹಾಕಿ ಅಗ್ನಿಕೊಂಡಹಾಯ್ದರು. ರಥೋತ್ಸವದ ಪ್ರಯುಕ್ತ ಸಾರ್ವಜನಿಕಅನ್ನಸಂತರ್ಪಣೆ ನೆರವೇರಿತು.
ಟ್ರಸ್ಟ್ ಅಧ್ಯಕ್ಷ ಆರ್.ರಂಗಸ್ವಾಮಿ, ಕಾರ್ಯದರ್ಶಿಜಯರಂಗಯ್ಯ, ಉಪಾಧ್ಯಕ್ಷ ಎ.ಆರ್.ರಂಗಸ್ವಾಮಯ್ಯ, ಖಜಾಂಚಿ ಎಚ್.ಎಂ.ನಾಗರಾಜು,ಕಾನೂನು ಸಲಹೆಗಾರ ಆರ್.ಪುಟ್ಟಸ್ವಾಮಿ, ಧರ್ಮದರ್ಶಿ ರಂಗನಾಥ್, ಎಚ್.ಜಿ.ಚಿಕ್ಕಣ್ಣ, ಶ್ರೀನಿವಾಸ್,ಮಾರೇಗೌಡ, ಕುಮಾರ್, ಸೋಮಶೇಖರ್‌ಚೆನ್ನಮ್ಮಪಾಳ್ಯದ ಕೃಷ್ಣಪ್ಪ, ಜಯರಂಗಯ್ಯ, ವೆಂಕಟೇಶ್‌ಮೂರ್ತಿ, ನರಸಿಂಹಮೂರ್ತಿ, ಅರುಂಧತಿ, ಕೆಂಪಣ್ಣ,ಎಪಿಎಂಸಿ ನಿರ್ದೇಶಕ ಕೆ.ಟಿ.ಮಂಜುನಾಥ್, ರಂಗಪ್ಪ, ಶ್ರೀನಿವಾಸ್, ಮಲ್ಲಿಕಾರ್ಜನಸ್ವಾಮಿ, ರಂಗನಾಥ್, ಜಯಣ್ಣ, ದೇವರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.