ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಲಿದ್ದಾನೆ ಹಣ್ಣಿನ ರಾಜ


Team Udayavani, Feb 7, 2022, 12:47 PM IST

ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಲಿದ್ದಾನೆ ಹಣ್ಣಿನ ರಾಜ

ಕನಕಪುರ: ಈ ಬಾರಿ ಮಾವಿನ ಫ‌ಸಲು ನಿಗದಿಗಿಂತ ವಿಳಂಬವಾಗಿ ಮಾರುಕಟ್ಟೆ ಪ್ರವೇಶಿಸಲಿದ್ದು ಮಾವು ಕೃಷಿ ಬೆಳೆಗಾದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಮಾವಿನ ಹಣ್ಣು ಮಾರುಕಟ್ಟೆಗೆ ಒಮ್ಮೆಗೆ ಲಗ್ಗೆ ಇಟ್ಟರೆ ವ್ಯಾಪಾರ ಕುಂಠಿತಗೊಳ್ಳುತ್ತದೆ. ಅಂತಹ ಮಾವಿನ ಫ‌ಸಲು ಈ ಬಾರಿ ಒಂದೂವರೆ ತಿಂಗಳು ವಿಳಂಬವಾಗಿ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂಬುದು ಅಧಿಕಾರಿಗಳ ಮಾತು.

ಪ್ರತಿ ವರ್ಷ ನವಂಬರ್‌ ಅಂತ್ಯದಲ್ಲಿ ಅಥವಾ ಡಿಸೆಂಬರ್‌ ತಿಂಗಳಲ್ಲಿ ಮಾವಿನ ಗಿಡದಲ್ಲಿ ಹೂ ಬಿಡಲು ಆರಂಭವಾಗುತ್ತಿತ್ತು. ಮಾರ್ಚ್‌ ತಿಂಗಳಲ್ಲಿ ಮಾವು ಮಾರುಕಟ್ಟೆ ಪ್ರವೇಶ ಮಾಡಿ ಜನರ ಬಾಯಿ ಸಿಹಿಮಾಡುತ್ತಿತು. ಈ ಬಾರಿ ಫೆಬ್ರವರಿಗೆ ತಿಂಗಳಿಗೆ ಕಾಲಿಟ್ಟರು ಮಾವಿನ ಮರಗಳಲ್ಲಿ ಶೇ.50ರಷ್ಟು ಮಾತ್ರ ಹೂ ಬಿಟ್ಟಿದೆ. ಈ ಬಾರಿ ಮಾವಿನಹಣ್ಣು ಏಪ್ರಿಲ್‌ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಮಾವಿನ ದರ ಕುಸಿತ ಭೀತಿ: ರಾಜ್ಯಕ್ಕೆ ಹೋಲಿಸಿದರೆ ಕನಕಪುರ ತಾಲೂಕಿನ ರೈತರು ಬೆಳೆದ ಮಾವು ಮೊದಲು ಮಾರುಕಟ್ಟೆ ಪ್ರವೇಶ ಮಾಡುತ್ತಿತ್ತು. ತಾಲೂಕಿನ ಸಾತನೂರು ಹೋಬಳಿಯ ಉದಾರಹಳ್ಳಿ ಮತ್ತು ವೆಂಕಟರಾಯನದೊಡ್ಡಿ ಸುತ್ತಮುತ್ತಲ ರೈತರು ಬೆಳೆದ ಮಾವು ಮೊದಲು ಮಾರುಕಟ್ಟೆ ಯಲ್ಲಿ ಮಾರಾಟವಾಗುತ್ತಿತ್ತು. ರೈತರಿಗೆ ಆದಾಯವೂ ಹೆಚ್ಚಿತ್ತು. ಪ್ರತಿವರ್ಷ ಕನಕಪುರ ತಾಲೂ ಕಿನಿಂದ ಮಾವು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕವೇ ಕೋಲಾರ, ಚಿಕ್ಕಬಳ್ಳಾಪುರದ ಭಾಗದ ಲ್ಲಿ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಕಾಟದಿಂದ ಕೋಲಾರ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಯ ಮಾವು ಒಂದೇ ಬಾರಿಗೆ ಕಟಾವಾಗುವ ಸಾಧ್ಯತೆ ಇದ್ದು, ಮಾವಿನ ದರಕುಸಿಯಬಹುದು ಎಂದು ಅಂದಾಜಿಸಲಾಗಿದೆ.

ಬೂದುರೋಗದಿಂದ ಬೆಳೆ ರಕ್ಷಣೆ: ಪ್ರತಿ ವರ್ಷ ಚಳಿಗಾಲದಲ್ಲಿ ಬಿಡುತ್ತಿದ್ದ ಮಾವಿನ ಹೂವಿಗೆ ಬೂದುರೋಗದ ಬಾಧೆ ಕಾಡುತ್ತಿತ್ತು. ಇದರಿಂದ ಹೂ ಕಾಯಾಗುವ ಮೋದಲೇ ಉದುರಿ ಇಳುವರಿಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಹೂ ಬಿಡುವುದು ವಿಳಂಬವಾಗಿರುವುದು ಬೂದಿ ರೋಗದಿಂದ ಪಾರಾಗುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ಮಾತು.

ಜೋನಿ ರೋಗದ ಆತಂಕ: ಆದರೆ ಹೂ ಬಿಡುವಾಗ ಉಷ್ಣಾಂಶ ಹೆಚ್ಚಾದರೂ ಮಾವಿಗೆ ಕಂಟಕವೇ ಜೋನಿ ರೋಗ ಕಾಡುವ ಆತಂಕ ಎದುರಾಗಲಿದೆ. ಈಗಾಗಲೇ ಚಳಿಗಾಲ ಮುಗಿಯುತ್ತ ಬಂದಿದೆ ಉಷ್ಣಾಂಶ ಹೆಚ್ಚಾದರೆ ಜೋನಿ ರೋಗ ಜಿಗಿಹುಳ ರೋಗಬಾಧೆ ಹೆಚ್ಚಾಗಿಹೂವಿನ ಮೇಲೆ ದಾಳಿ ಮಾಡಲಿದೆ. ಮಾರ್ಚ್‌ ತಿಂಗಳಲ್ಲಿ ಇದರ ಬಾಧೆ ಹೆಚ್ಚು. ಈಗಾಗಲೇ ಮಾವು ಕೃಷಿ ರೈತರು ಔಷಧಿ ಸಿಂಪಡನೆಗೆ ಮುಂದಾಗಿದ್ದಾರೆ. ಈ ಬಾರಿ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಇದ್ದುದರ ಕುಸಿತ ಕಾಣಬಹುದು ಎಂದು ಹೇಳಲಾಗುತ್ತಿದೆ

ಸಾತನೂರಿನಲ್ಲಿ ಹೆಚ್ಚು ಮಾವು: ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್‌ ತಾಲೂಕಿನಲ್ಲಿ ನಾಲ್ಕೂವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. ಕಸಬಾ ಮತ್ತು ಸಾತನೂರು ಭಾಗದಲ್ಲಿ ಅತಿ ಹೆಚ್ಚು ಮಾವುಬೆಳೆಯುವ ರೈತರಿದ್ದಾರೆ. ನೇರ ಮಾರುಕಟ್ಟೆ ವ್ಯವಸ್ಥೆಗೆ ರೈತರನ್ನು ತರಲುಇಲಾಖೆ ಮಾವಿನ ಮೇಳ ಹಮ್ಮಿಕೊಳ್ಳಲಿದೆ. ಇದು ರೈತರಿಗೆ ಹೆಚ್ಚುಲಾಭ ತರಲಿದೆ. ಕೆಲವು ರೈತರು ಮಾವಿನ ಕಾಯಿಯನ್ನು ಹಣ್ಣು ಮಾಡುವ ತರಬೇತಿ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇಲಾಖೆ ಅಧಿಕಾರಿಗಳು ಮಾರ್ಚ್‌ ತಿಂಗಳಒಳಗಾಗಿ ತರಬೇತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಾವಿನ ತಳಿ ಎಷ್ಟು ದಿನಕ್ಕೆ ಬೆಳೆ? ಶೇ.25 ರಷ್ಟು ಕಾಯಿ ಕಟ್ಟಿದೆ ಶೇ.75 ರಷ್ಟು ಈಗಷ್ಟೆ ಹೂ ಬಿಟ್ಟಿದೆ. ಪ್ರತಿವರ್ಷ ಏಪ್ರಿಲ್‌ ನಲ್ಲಿ ಕಟಾವು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ, ಜೂನ್‌ಗೆ ಕಟಾವಿಗೆಬರಲಿದೆ. ನಮ್ಮ ಜಿಲ್ಲೆಯಲ್ಲಿ ಸೇಂದೂರ 70 ದಿನಗಳಿಗೆಕಟಾವಾಗುತ್ತಿತ್ತು. ಆದರೆ ಈ ಬಾರಿ ನಿರೀಕ್ಷೆಯಂತೆ ಹೂ ಬಿಟ್ಟಿಲ್ಲ.ಶೇ.50ರಷ್ಟು ಇಳುವರಿ ಕುಂಟಿಠವಾಗಿದೆ. ಬಾದಾಮಿ 120ದಿನ,ರಸಪೂರಿ 90ದಿನಗಳಲ್ಲಿ ಕಟಾವಾಗಲಿದೆ. ಈ ಬಾರಿ ಸ್ವಲ್ಪ ವಿಳಂಬವಾಗಲಿದೆ.

ಬಾದಾಮಿ ಬೆಳೆಯ ಕೇಂದ್ರ: ಮಾವಿನಲ್ಲಿ ಹಲವಾರು ವಿಧಗಳಿವೆ. ರಾಮನಗರ ಜಿಲ್ಲೆಯಲ್ಲಿ ಶೇ.80ರಷ್ಟು ಬಾದಾಮಿ ಬೆಳೆಯುವ ರೈತರಿದ್ದಾರೆ. ಉಳಿದ ಶೇ.20ರಷ್ಟು ರಸಪೂರಿ ನೀಲಂ ಸೇಂದೂರ,ತೋತಾಪುರಿ ಬೆಳೆಯಿದೆ ಆದರೆ ಅತಿ ಹೆಚ್ಚು ಬೇಡಿಕೆ ಮತ್ತು ಆದಾಯಬರುವುದು ಬಾದಾಮಿ ತಳಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಮಾವಿಗೆ ನೆರೆಯ ರಾಜ್ಯಗಳಲ್ಲಿ ಬೇಡಿಕೆ ಇದೆ. ನಮ್ಮ ಜಿಲ್ಲೆಯಲ್ಲಿಬೆಳೆಯುವ ಬಾದಾಮಿಗೆ ಮಹಾರಾಷ್ಟ್ರ ,ಡೆಲ್ಲಿ, ಹೈದರಾಬಾದ್‌, ಕೇರಳರಾಜ್ಯಗಳಲ್ಲೂ ಮಾರುಕಟ್ಟೆ ಇದೆ. ರೇಷ್ಮೆ ನಗರಿ ಎಂದುಖ್ಯಾತಿಪಡೆದಿರುವ ರಾಮನಗರ ಜಿಲ್ಲೆ ಮಾವು ಕೃಷಿಯಲ್ಲೂ ಮುಂದಿರುವುದು ಜಿಲ್ಲೆಗೆ ಮತ್ತೂಂದು ಹೆಗ್ಗಳಿಕೆಯಾಗಿದೆ.

ಶೇ.25 ರಷ್ಟು ಕಾಯಿ ಕಟ್ಟಿದೆ ಶೇ.75 ರಷ್ಟು ಈಗಷ್ಟೆ ಹೂ ಬಿಟ್ಟಿದೆ. ಪ್ರತಿವರ್ಷ ಏಪ್ರಿಲ್‌ನಲ್ಲಿ ಕಟಾವುಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ, ಜೂನ್‌ಗೆ ಕಟಾವಿಗೆ ಬರಲಿದೆ. ಚಿಕ್ಕಬಳ್ಳಾಪುರ ಕೋಲಾರಭಾಗದಲ್ಲಿರುವ ತಳಿಗಳೆ ಬೇರೆ ನಮ್ಮ ಜಿಲ್ಲೆಯಲ್ಲಿರುವತಳಿಗಳೆ ಬೇರೆ. ನಮ್ಮ ಜಿಲ್ಲೆ ಮಾವಿಗೆ ಹೆಚ್ಚು ಬೇಡಿಕೆ ಇದೆ ಹಾಗಾಗಿ ವಿಳಂಬವಾದರೂ ಬೆಲೆ ಕುಸಿತದ ಆತಂಕವಿಲ್ಲ -ಮಂಜು, ಉಪಾಧ್ಯಕ್ಷರು ಮಾವು ಬೆಳೆಗಾರರ ಸಂಘ

ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ಮಾವುಕಟಾವಾಗುತ್ತಿತ್ತು. ಆದರೆ ನಿರಂತರವಾಗಿಸುರಿದ ಮಳೆಯಿಂದಾಗಿ ಶೀತ ಹೆಚ್ಚಾಗಿ ಫೆ.ಕಾಲಿಟ್ಟಿದ್ದರು ಈಗಷ್ಟೆ ಶೇ.50ರಷ್ಟು ಮಾವುಹೂ ಬಿಟ್ಟಿದೆ. ಈ ಬಾರಿ ಮಾವು ಮಾರುಕಟ್ಟೆಪ್ರವೇಶ ಮಾಡುವುದು ವಿಳಂಬವಾಗಲಿದೆ. ಹೆಚ್ಚು ಇಳುವರಿ ಬರುವ ನೀರಿಕ್ಷೆಯೂ ಇದೆ. -ಹರೀಶ್‌ , ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ

-ಬಿ.ಟಿ.ಉಮೇಶ್‌, ಬಾಣಗಹಳ್ಳಿ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

HDD-CHP

By Election: ಕಾಂಗ್ರೆಸ್‌ನಿಂದ ಮೇಕೆದಾಟು ಕಾರ್ಯಗತ ಅಸಾಧ್ಯ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.