ಅತಿಯಾದ ಮಳೆಯಿಂದ ಮಾವು ಇಳುವರಿ ಕುಂಠಿತ
Team Udayavani, Apr 29, 2023, 2:49 PM IST
ಮಾಗಡಿ: ಹಣ್ಣುಗಳ ರಾಜ ಮಾವು. ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ನೋಡಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಖರೀದಿ ಮಾಡಿ ಒಂದು ಹಣ್ಣಾದರೂ ತಿನ್ನ ಬೇಕೆನಿಸುತ್ತದೆ. ಕಳೆದ ಬಾರಿ ರಾಜ್ಯದಲ್ಲಿ ಅತಿಯಾದ ಮಳೆಯಿಂದ ಈ ಬಾರಿ ಮಾವು ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದರೆ ರೈತರಿಗೆ ಹೆಚ್ಚು ಬೆಲೆ ಸಿಗುತ್ತದೆ. ಇಲ್ಲದಿದ್ದರೆ ಅನ್ನದಾತನ ಕೈಸುಡುವುದಂತೂ ಗ್ಯಾರಂಟಿ.
ತಾಲೂಕಿನಲ್ಲಿ ಸುಮಾರು 9 ಸಾವಿರದ ಹೆಕ್ಟೇರ್‌ನಲ್ಲಿ ರೈತರು ಮಾವು ಬೆಳೆದಿದ್ದಾರೆ. ಈ ಬಾರಿ ಮಾವಿನ ಮರಗಳಲ್ಲಿ ಸಾಧಾರಣ ಹೂವು ಬಿಟ್ಟಿದ್ದು. ಮಲ ಗೋವಾ, ರಸಪೂರಿ, ಸೇಂದೂರ, ಬಾದಾಮಿ, ರಾಮ ಗೋಲ್ಟ್ ಸೇರಿದಂತೆ ವಿವಿಧ ತಳಿಗಳನ್ನು ರೈತರು ಬೆಳೆದಿದ್ದಾರೆ. ರಸಭರಿತ ಮಾವು ಬೆಳೆಗೆ ಮಾಗಡಿ ಹೇಳಿ ಮಾಡಿಸಿದ ಭೂಮಿ. ಮಾಗಡಿ ಗುಡ್ಡಗಾಡು ಪ್ರದೇಶದವಾಗಿದ್ದು, ಕಡಿಮೆ ನೀರಿದ್ದರೂ ಸಹ ಮಾವಿನ ಗಿಡ ಬೆಳೆಸಲು ಉತ್ತಮ ಭೂಮಿಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮಾವು ಬೆಳೆ ಬಂದಿದೆ.
ಮಳೆ ಕೊರತೆಯ ನಡುವೆಯೂ ಸಾಧಾರಣ ವಾಗಿ ಮಾವು ಬೆಳೆ ಬಂದಿದ್ದು, ರೈತರಲ್ಲಿ ಆತಂಕ ಉಂಟು ಮಾಡಿದೆ. ಈಗ ಮಾವಿನ ಹಣ್ಣಿಗೆ ಸಕಾಲ. ರೈತರ ತೋಟಗಳ ಕಡೆ ಕಣ್ಣಾಯಿಸಿದರೆ ಸಾಕು. ಮಾವಿನ ಕಾಯಿಗಳು ಜೋತು ಬಿದ್ದಿವೆ. ಮಾವಿನ ಹಣ್ಣು ಗಮಗಮಿಸುತ್ತಿರುತ್ತದೆ. ಮಾವಿನ ಬೆಳೆ ಸಾಧಾರಣ ವಾಗಿದ್ದರೂ, ತಾಜಾ ಹಣ್ಣುಗಳ ಮಾರಾಟದಲ್ಲಿ ಲಾಭ ಗಳಿಯತ್ತ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಮಾರುಕಟ್ಟೆಯಲ್ಲಿ ತಾಜಾ ಮಾವಿನ ಹಣ್ಣು: ಮಾಗಡಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಲಗ್ಗೆಯಿಟ್ಟಿದ್ದು, ಕೆ.ಜಿ.ಗೆ 100ರಿಂದ 120 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಕೆ.ಜಿ.ಗೆ 70 ರಿಂದ 80 ರೂ.ಗೂ ಮಾ ರಾಟ ಮಾಡಲಾಗುತ್ತಿದೆ. ಈ ವಾರ ಕಳೆದರೆ ಇನ್ನೂ ಹೆಚ್ಚಿನ ಮಾವಿನ ಹಣ್ಣು ಮಾರುಕಟ್ಟೆಗೆ ಬರಲಿ ದ್ದು, ಬೆಲೆ ಕಡಿಮೆ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮಾವಿಗೆ ರೋಗಬಾಧೆ ಭೀತಿ: ಹಿಂಗಾರು ಮಳೆ ಬಿದ್ದ ಪರಿಣಾಮ ಸಾಧಾರಣವಾಗಿ ಮಾವಿನ ಹಣ್ಣಿನ ಬೆಳೆ ಬಂದಿದ್ದು, ಹೆಚ್ಚು ಬಿಸಿಲಿನ ತಾಪಮಾನಕ್ಕೆ ಬೇಗ ಹಣ್ಣಾಗುತ್ತಿವೆ. ಅಷ್ಟಾಗಿ ರೋಗದ ಬಾಧೆ ಇಲ್ಲದೆ ಇರುವುದರಿಂದ ತಾಜಾ ಹಣ್ಣುಗಳು ಬೆಳೆಗಾರರ ಬದುಕಿಗೆ ನೆರವಾಗುತ್ತದೆ ಎಂದು ರೈತರು ನಂಬಿಕೊಂಡಿದ್ದಾರೆ. ಮಾವಿನ ಮರದಲ್ಲಿ ಮಾವಿನ ಕಾಯಿಗಳ ಜೋತು ಬಿದ್ದಿದ್ದು ಕಾಯಿ, ಹಣ್ಣುಗಳು ಜನರ ಬಾಯಲ್ಲಿ ನೀರು ಬರಿಸುತ್ತದೆ.
ರೈತರಿಗೆ ಅಗತ್ಯ ಮಾರ್ಗದರ್ಶ: ಮಾವು ಬೆಳೆಗಾರರ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ವಿಜ್ಞಾನಿಗಳು ಭೇಟಿ ಕೊಟ್ಟು, ಮಾವಿನ ಗಿಡ, ಹೂ, ಹಣ್ಣುಗಳ ರಕ್ಷಣೆ, ರೋಗಬಾಧೆ ತಡೆಗೆ ಸೂಕ್ತ ಔಷಧ ವಿತರಣೆ, ಕಾಲ ಕಾಲಕ್ಕೆ ಸಿಂಪಡಣೆ ಮಾಡಿಸುವುದು. ತಾಂತ್ರಿಕವಾದ ಬೇಸಾಯ ಪದ್ಧತಿ ಹೀಗೆ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ವರ್ಷಕ್ಕೊಮ್ಮೆ ಮಾವು ಬೆಳೆ: ವರ್ಷಕ್ಕೊಮ್ಮೆ ಮಾತ್ರ ಮಾವು ಬೆಳೆ ಬರುವುದು. ಆದರೆ, ಅಕಾಲಿಕ ಮಳೆಯಿಂದಲೋ ಅಥವಾ ಹೊಸ ಹೊಸ ಆವಿಷ್ಕಾರದ ಹೈಬ್ರಿಡ್ ತಳಿಗಳು ಕೆಲವೊಮ್ಮೆ ಎರಡು ಬೆಳೆಗಳನ್ನು ನೀಡುತ್ತವೆ. ಆದರೂ, ವಸಂತ ಕಾಲದಲ್ಲಿ ಮಾತ್ರ ಮಾವು ಸಮೃದ್ಧ ಬೆಳೆ ಬರುವುದು. ಹೈಬ್ರಿಡ್ ತಳಿ ಮಾವು ಬೆಳೆಗಾರರು ಕಾಲ ಕಾಲಕ್ಕೆ ಗೊಬ್ಬರ, ಔಷಧ ಸಿಂಪಡಣೆ, ನೀರು ಹಾಕಿ ಮಾವಿನ ಮರಗಳನ್ನು ತಮ್ಮ ಮಕ್ಕಳಂತೆ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಮಾವು ಬೆಳೆಯೇ ಬಹುತೇಕ ರೈತರ ಜೀವನಾಧಾರವಾಗಿದೆ.
ಜಿಲ್ಲೆಯಲ್ಲಿ ಮಾವು ಮೇಳ: ರಾಮನಗರ ಜಿಲ್ಲೆಯಲ್ಲಿ ರಾಮಗೋಲ್ಟ್ ಮಾವಿನ ಹಣ್ಣಿಗೆ ಹೆಚ್ಚಿನ ಬಹುಬೇಡಿಕೆಯಿದೆ. ಮಾವಿನ ಹಣ್ಣಿನ ಕಾಲ ಆರಂಭಗೊಂಡಂತೆ ರಾಮನಗರದಲ್ಲಿ ಮಾವು ಮೇಳ ಸಹ ಏರ್ಪಡಿಸಲಾಗುತ್ತದೆ. ರಾಮಗೋಲ್ಟ್ ಮತ್ತು ಬಾದಾಮಿ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು, ಮಾವು ಖರೀದಿದಾರರು ದೂರದ ಊರುಗಳಿಂದ ಆಗಮಿಸಿ ಮಾವು ಖರೀದಿಯಲ್ಲಿ ತೊಡಗುತ್ತಾರೆ. ಸುಮಾರು ಒಂದು ವಾರಗಳ ಕಾಲ ನಡೆಯುವ ಈ ಮೇಳದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳ ಮಾರಾಟ ನಡೆಯುತ್ತದೆ. ರೈತರು ದಳ್ಳಾಳಿ ಮುಕ್ತ ಮಾರಾಟಕ್ಕೆ ಸರ್ಕಾರ ಸಹ ಸಹಕಾರ ನೀಡುತ್ತದೆ.
ತಾಲೂಕಿನಲ್ಲಿ 9 ಸಾವಿರ ಹೆಕ್ಟರ್‌ನಲ್ಲಿ ರೈತರು ಮಾವಿನಗಿಡ ನೆಟ್ಟಿದ್ದಾರೆ. ರೈತರ ಮಾವಿನ ತೋಟಗಳಿಗೆ ಕೆವಿಕೆ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ಮಾವು ಬೆಳೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಆಗತ್ಯ ಔಷಧಗಳನ್ನು ಶೇ. 50ರ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ. ಈ ಬಾರಿ ಬೆಳೆ ನಿರೀಕ್ಷೆಗಿಂತ ಕಡಿಮೆಯಾಗಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದರೆ ಮಾತ್ರ ರೈತರಿಗೆ ಕನಿಷ್ಠ ಲಾಭವೂ ಸಹ ನಿರೀಕ್ಷಿಸಬಹುದು. ರೈತರು ಆತಂಕ ಪಡುವುದು ಬೇಡ. ವಿಮೆ ಜಮಾ ಮಾಡಿದ್ದರೆ ನಷ್ಟದ ಮಾವು ವಿಮೆ ಪಡೆಯಬಹುದು. – ನಾಗರಾಜು, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಈ ಬಾರಿ ಮಾವಿನ ಮರಗಳು ಸಾಧಾರಣವಾಗಿ ಕಾಯಿ ಬಿಟ್ಟಿವೆ. ಈ ಬಾರಿ ಕಡಿಮೆ ಬೆಳೆಯಿದ್ದು, ಬೇಡಿಕೆ ಹೆಚ್ಚಿದರೆ ಮಾತ್ರ ಉತ್ತಮ ಬೆಲೆ ಸಿಗಬಹುದು. ಅಕಾಲಿಕ ಮಳೆ ಬೀಳದಿದ್ದರೆ ಮಾವು ಬೆಳೆಯಲ್ಲಿ ರೈತರ ಕೈಗೆ ಹಣ ಸಿಗುತ್ತದೆ. ಇಲ್ಲದಿದ್ದರೆ ನಷ್ಟದಿಂದ ಕೈಸುಟ್ಟುಕೊಳ್ಳುವವರೇ ಹೆಚ್ಚು. ಸಂಬಂಧಪಟ್ಟ ಅಧಿಕಾರಿಗಳು ಸಕಾಲಕ್ಕೆ ಔಷಧ ಪೂರೈಕೆ ಮಾಡಿದ್ದಾರೆ. ಮಾವಿನ ತೋಟಕ್ಕೆ ಸಿಂಪಡಿಸಿ ರೋಗಬಾಧೆಯಿಂದ ಮಾವಿನ ಹೂಗಳನ್ನು ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ. – ಗಂಗಣ್ಣ, ಪ್ರಗತಿಪರ ರೈತ, ಮಾವು ಬೆಳೆಗಾರರು
– ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.