ಮೇಕೆದಾಟು: ಶೀಘ್ರ ಬಿಎಸ್‌ವೈ ಜತೆ ದೆಹಲಿಗೆ ಭೇಟಿ
ಕೇಂದ್ರ ಅರಣ್ಯ-ಜಲಸಂಪನ್ಮೂಲ ಸಚಿವರ ಜತೆ ಚರ್ಚೆ: ರಮೇಶ್ ಜಾರಕಿಹೊಳಿ
Team Udayavani, Sep 15, 2020, 12:28 PM IST
ರಾಮನಗರ/ಕನಕಪುರ: ಮೇಕೆದಾಟು ಯೋಜನೆಗೆ ಶೇ.92 ಅರಣ್ಯ ಬಳಕೆಯಾಗಲಿದ್ದು ಯೋಜನೆಗೆ ಅನು ಮೋದನೆ ನೀಡುವಂತೆ ಇದೇ ಬುಧವಾರ ಅಥವಾ ಗುರುವಾರ ಕೇಂದ್ರ ಅರಣ್ಯ ಸಚಿವರಾದ ಪ್ರಕಾಶ್ ಜಾವೇಡ್ಕರ್, ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಸಿಎಂ ಬಿಎಸ್‌ವೈ ಅವರೊಡನೆ ಭೇಟಿ ಮಾಡಿ ಒತ್ತಡ ಹೇರುವುದಾಗಿ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಕನಕಪುರ ತಾಲೂಕಿನ ಒಂಟಿಗುಂಡ್ಲು ಬಳಿ ಮೇಕೆ ದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆಗುರಿತಿಸಿರುವ ಸ್ಥಳ ಪರಿಶೀಲನೆ ನಂತರಸುದ್ದಿಗಾರರೊಂದಿಗೆ ಮಾತನಾಡಿದರು.
ಪರಿಷ್ಕೃತ ಪ್ರಸ್ತಾವನೆ: ಕೇಂದ್ರ ಸಚಿವರ ಭೇಟಿಗೆ ಈಗಾಗಲೇ ಸಮಯಾವಕಾಶ ಕೇಳಲಾಗಿದೆ. ಮೇಕೆದಾಟು ಯೋಜನೆಗೆ ಸುಮಾರು ಶೇ.97 ಅರಣ್ಯ ಬಳಕೆಯಾಗುತ್ತಿದೆ. ಈ ಸಂಬಂಧ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ಯೋಜನೆ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಅನುಮತಿ ನೀಡುವಂತೆ ಒತ್ತಾಯಿಸುವೆ. ಅಲ್ಲದೇ, ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ತಮಿಳುನಾಡಿನ ಮನವೊಲಿಸಬೇಕು: ಈ ಯೋಜನೆಗೆ ತಮಿಳುನಾಡು ರಾಜ್ಯ ಕ್ಯಾತೆ ತೆಗೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಾವೇರಿ ನ್ಯಾಯಾಧೀಕರಣ ಘೋಷಿಸಿರುವ ಪ್ರಮಾಣದ ನೀರನ್ನು ಆ ರಾಜ್ಯಕ್ಕೆ ಹರಿಸಿ, ಹೆಚ್ಚುವರಿ ನೀರನ್ನು ಜಲಾಶಯದಲ್ಲಿ ಹಿಡಿದಿಟ್ಟುಕೊಳ್ಳುವುದು ಯೋಜನೆ ಮೂಲ ಉದ್ದೇಶ. ವಾರ್ಷಿಕ ತಮಿಳುನಾಡಿಗೆ ಹರಿಯಬೇಕಾದ ನೀರಿನ ಪ್ರಮಾಣ ಹರಿಸಲು ಈ ಯೋಜನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ವಿರೋಧ ಸಹಜ: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿಕೊಂಡಿದೆ. ಶೀಘ್ರ ನಮ್ಮ ಸರ್ಕಾರ ವಕೀಲರ ಮೂಲಕ ಉತ್ತರಕೊಡುವುದಾಗಿ, ಕೇಂದ್ರ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸುವುದಾಗಿ ಪ್ರತಿಕ್ರಿಯಿಸದರು.ಮೇಲಾಗಿಮುಂದಿನವರ್ಷ ತಮಿಳುನಾಡಿನಲ್ಲಿ ಚುನಾವಣೆ ಎದುರಾಗುವುದರಿಂದ ಮೇಕೆದಾಟು ಯೋಜನೆಗೆ ವಿರೋಧ ಸಹಜ ಎಂದರು.
ಮನವರಿಕೆ: ಮೇಕೆದಾಟು ಯೋಜನೆಯಿಂದ ನೈಸರ್ಗಿಕವಾಗಿ ತನಗೆ ದೊರೆಯುತ್ತಿದ್ದ ನೀರಿಗೆ ತೊಂದರೆಯಾಗಲಿದೆ (ಕಾವೇರಿ ಟ್ರಿಬ್ಯುನಲ್ ಅವಾರ್ಡ್ ನೀರಿನ ಪ್ರಮಾಣ ಹೊರತುಪಡಿಸಿ) ಎಂದು ತಮಿಳುನಾಡು ಸರ್ಕಾರ ವಾದಮಂಡಿಸಿದೆ ಎಂದು ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು,ಆರಾಜ್ಯ ತನ್ನ ಹಿತದೃಷ್ಟಿಯಿಂದ ಮಾತನಾಡುತ್ತಿವೆ. ಆದರೆ,ನಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ನಾವು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಇಲ್ಲಿನ ನೀರಿನ ಅವಶ್ಯಕತೆಯನ್ನು ಆ ರಾಜ್ಯದ ಜಲಸಂಪನ್ಮೂಲ ಇಲಾಖೆ ಎಇಇಯಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಮೇಕೆದಾಟು ವಿಚಾರದಲ್ಲಿ ತಾವು ತಮಿಳುನಾಡು ಸರ್ಕಾರದೊಡನೆ ಮಾತನಾಡಲೂ ಸಿದ್ಧವೆಂದರು.
ಕೃಷಿಗೆ ಬಳಕೆ ಮಾಡಲ್ಲ: ಕಾವೇರಿ ನದಿ ಉಗಸ್ಥಾನ ದಿಂದ ಇಲ್ಲಿಗೆ (ಮೇಕೆದಾಟು) 350 ಕಿ.ಮೀ. ದೂರವಿದೆ. ರಾಜ್ಯಕ್ಕೆ ಸಲ್ಲಬೇಕಾದ ಸಾಕಷ್ಟು ನೀರು ಹೀಗೆ ಹರಿದು ಹೋಗುತ್ತಿದೆ. ಕುಡಿಯುವ ನೀರು:ಇಲ್ಲಿಂದ ಮೆಟ್ರೋ ಜಲಾಶಯ 90ಕಿ.ಮೀ. ದೂರವಿದೆ. ಮೇಕೆದಾಟು ಸಮತೋಲನ ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುವ ನೀರನ್ನು ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಅಲ್ಲದೇ, ಬೆಂಗಳೂರು ನಗರಕ್ಕೆ 4.75 ಟಿಎಂಸಿನೀರು ಇಲ್ಲಿಂದ ಪೂರೈಕೆ ಮಾಡಬಹುದು. ಬೆಂಗಳೂರು ನಗರದ ಮುಂದಿನ 30 ವರ್ಷಗಳ ಭವಿಷ್ಯದ ದೃಷ್ಟಿಯಿಂದ ಈ ಯೋಜನೆ ಅಗತ್ಯವಾಗಿದೆ ಎಂದರು. ಈ ವೇಳೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.