ಮಿಟ್ಸುಬಿಷಿ ಕಂಪನಿ ಬಂದ್: ಕಾರ್ಮಿಕರು ಕಂಗಾಲು
Team Udayavani, Nov 8, 2022, 4:16 PM IST
ರಾಮನಗರ: ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ಮಿಟ್ಸುಬಿಷಿ ಕಂಪನಿಯನ್ನು ಬಂದ್ ಮಾಡಲಾಗಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿಮಿಟೆಡ್ ಕಂಪನಿ ಏಕಾಏಕಿ ಲಾಕ್‌ಔಟ್ ಮಾಡಿದ್ದು, ಕಾರ್ಮಿಕರನ್ನು ಅಂತಂತ್ರಗೊಳಿಸಿದ್ದಾರೆ. ಇಲ್ಲಿಂದ ಬೆಮೆಲ್, ಮೆಟ್ರೋಗೆ ಅಗತ್ಯವಾದ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನ ಸರಬರಾಜು ಮಾಡುವ ಕಂಪನಿ ಇದಾಗಿತ್ತು. ಪ್ರತಿ ದಿನದಂತೆ ಶುಕ್ರವಾರ 54 ಕಾಯಂ ಕಾರ್ಮಿಕರು ಕೆಲಸ ಮುಗಿಸಿ, ಸಂಜೆ ಮನೆಗೆ ತೆರಳಿದ್ದಾರೆ. ಶನಿವಾರ 54 ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 4 ಲಕ್ಷ ರೂ. ಹಣ ಕಂಪನಿ ಕಡೆಯಿಂದ ಜಮಾವಣೆಯಾಗಿದೆ. ಯಾವಉದ್ದೇಶಕ್ಕಾಗಿ ಹಣ ಬಂದಿದೆ ಎಂದು ವಿಚಾರಿಸಲು ಕಂಪನಿಯ ಎಚ್.ಆರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ, ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಎನ್ನುತ್ತಾರೆ ಉದ್ಯೋಗಿಗಳು.
ಜೊತೆಗೆ ಸೋಮವಾರ ಕಾರ್ಮಿಕರನ್ನು ಪಿಕಪ್ ಮಾಡಲು ಕಂಪನಿಯಿಂದ ಕ್ಯಾಬ್ ಕೂಡ ಬಂದಿರಲಿಲ್ಲ. ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲೇ ಕಂಪನಿಗೆ ಆಗಮಿಸಿದ್ದಾರೆ. ಆದರೆ, ಕಾರ್ಮಿಕರು ಒಳ ಬರುತ್ತಿದ್ದಂತೆ ಗೇಟ್‌ನಿಂದ ಒಳಗೆ ಬಿಡದ ಭದ್ರತಾಸಿಬ್ಬಂದಿ, ಗೇಟ್ ಲಾಕ್ ಮಾಡಿ, ಎಲ್ಲರನ್ನೂ ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಕಾರ್ಮಿಕರು ಕಂಗಾಲು: ನಮ್ಮ ಪೂರ್ವಾನುಮತಿಯಿಲ್ಲದೆ ಯಾವುದೇ ವ್ಯಕ್ತಿಗಳು ಕಂಪನಿಯ ಆವರಣಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂಬುದಾಗಿ ಗೇಟ್ ಬಳಿ ಕಂಪನಿ ವತಿಯಿಂದ ನೋಟಿಸ್ ಅಂಟಿಸಲಾಗಿದೆ. ಇದನ್ನು ಕಂಡ ಕಾರ್ಮಿಕರು ಕಂಗಾಲಾಗಿದ್ದು, ದಿಕ್ಕುಕಾಣದಂತಾಗಿದೆ. ಇದು ಪ್ರತಿಷ್ಠಿತ ಕಂಪನಿಗಳಲ್ಲೊಂದಾಗಿದ್ದು, ಈ ಕಂಪನಿಯಲ್ಲಿ ಬೆಳಗಾವಿ, ಬಿಜಾಪುರ, ಮಂಡ್ಯ, ಹಾಸನ ಸೇರಿ ಹಲವು ಹೊರ ಜಿಲ್ಲೆಗಳಿಂದ ಬಂದು ಕೆಲಸಕ್ಕೆ ಸೇರಿದ್ದ ಕಾರ್ಮಿಕರು ದುಡಿಯುತ್ತಿದ್ದರು.
ಆದರೆ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಲಾಕ್‌ಔಟ್ ಮಾಡಿರುವುದನ್ನ ನೋಡಿ ಕಾರ್ಮಿಕರಿಗೆ ಆಘಾತವಾಗಿದೆ. ಸೋಮವಾರ ಸಂಜೆ ವೇಳೆಗೆ ಕಂಪನಿಪರವಾಗಿ ಅಧಿಕಾರಿಗಳು ಬಂದು ಮಾತನಾಡುವುದಾಗಿ ಕಾರ್ಮಿಕರಿಗೆ ಸೂಚಿಸಲಾಗಿತ್ತು. ಆದರೂ, ಮಾತುಕತೆಗೆ ಯಾವೊಬ್ಬ ಅಧಿಕಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ.
ಯಾವುದೇ ಮುನ್ಸೂಚನೆ ನೀಡಿಲ್ಲ: ನಮ್ಮ ಬದುಕು ಕಟ್ಟಿಕೊಳ್ಳಬೇಕೆಂಬ ಮಹದಾಸೆಯಿಂದ ಕಂಪನಿಯಲ್ಲಿ ಸೇರಿದ್ದೆವು. ಆದರೆ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಂದ್ ಮಾಡಿ, ನಮ್ಮ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ ನಡೆಸಿದ್ದಾರೆ. ಕಂಪನಿಯಲಾಕ್‌ಔಟ್ ನಿರ್ಧಾರಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅದೇನೇ ಇದ್ದರೂ,ನಮಗೆ ನ್ಯಾಯ ಸಿಗಬೇಕು. ಕಂಪನಿಯಲ್ಲಿ ಕೆಲಸ ಬೇಕು ಎಂದು ಕಂಪನಿಯ ನೊಂದ ಕಾರ್ಮಿಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.