Ramnagar: ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ಎಸ್‌ಟಿಆರ್‌ಆರ್‌ ರಸ್ತೆ


Team Udayavani, Sep 12, 2024, 5:24 PM IST

Ramnagar: ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ಎಸ್‌ಟಿಆರ್‌ಆರ್‌ ರಸ್ತೆ

ರಾಮನಗರ: 20 ವರ್ಷದ ಬಳಿಕ ನಿರ್ಮಾಣಕ್ಕೆ ಸಜ್ಜಾಗಿರುವ ಸ್ಯಾಟಲೈಟ್‌ ಸಿಟಿ ರಿಂಗ್‌ ರೋಡ್‌(ಎಸ್‌ ಟಿಆರ್‌ಆರ್‌) ಜಿಲ್ಲೆಯಲ್ಲಿ ಸುಮಾರು 70 ಕಿಮೀ ದೂರು ಹಾಯ್ದು ಹೋಗಲಿದೆ. ಇದರಿಂದಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಸಂಪರ್ಕ ಮತ್ತಷ್ಟು ಸುಗಮ ಗೊಳ್ಳಲಿದೆ.

ಹೌದು, ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ಸ್ಯಾಟ್‌ ಲೈಟ್‌ ರಿಂಗ್‌ ರಸ್ತೆ 144 ಕಿಮೀ ನಿರ್ಮಾಣಕ್ಕೆ 4750 ಕೋಟಿ ರೂ.ಅಂದಾಜು ವೆಚ್ಚದಲ್ಲಿ 5 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿದೆ. ಇದರಲ್ಲಿ ಮೂರು ಪ್ಯಾಕೇಜ್‌ಗಳು ರಾಮನಗರ ಜಿಲ್ಲೆಯಲ್ಲಿ ಹಾಯ್ದು ಹೋಗಲಿದ್ದು, ಮಾಗಡಿಯಿಂದ ರಾಮನಗರ ಮೂಲಕ ಕನಕಪುರ ತಾಲೂಕಿನವರೆಗೆ ಸುಮಾರು 70 ಕಿಮೀ ದೂರ ರಾಮನಗರ ಜಿಲ್ಲೆಯಲ್ಲಿ ಎಸ್‌ಟಿಆರ್‌ಆರ್‌ ರಸ್ತೆ ಎನ್‌ ಎಚ್‌ 948 ಎ ಹಾಯ್ದು ಹೋಗಲಿದೆ.

ಸಂಚಾರಕ್ಕೆ ಅನುಕೂಲ: ಜಿಲ್ಲೆಯಲ್ಲಿ ಹಾಯ್ದು ಹೋಗಲಿರುವ ಎಸ್‌ಟಿಆರ್‌ಆರ್‌ ರಾಮನಗರ ಜಿಲ್ಲೆಯ ಜನತೆಗೆ ಮಾತ್ರವಲ್ಲದೇ ಮಂಡ್ಯ, ಮೈಸೂರು, ಮಡಿಕೇರಿ ಭಾಗದಿಂದ ಬರುವ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು, ಕೋಲಾರ, ಚಿಕ್ಕಬಳ್ಳಾಪುರ ಕಡೆಗೆ ಹೋಗಲು ಹಾಗೂ ಹೊಸೂರು ರಸ್ತೆ ಸಂಪರ್ಕಿಸಲು ಬೆಂಗಳೂರು ನಗರವ್ರವೇಶಿಸುವುದು ತಪ್ಪಲಿದೆ. ಇದ ರಿಂದಾಗಿ ಪ್ರಯಾಣಿಕರು ಅನವಶ್ಯಕವಾಗಿ ಬೆಂಗಳೂರು ನಗರದ ಸಂಚಾರ ಕಿರಿಕಿರಿ ಅನುಭವಿಸುವುದನ್ನು ತಪ್ಪಿಸಲಿದೆ.

6ಲೇನ್‌ ರಸ್ತೆ ಆಕ್ಸೆಸ್‌ ಕಂಟ್ರೋಲ್‌ ರಸ್ತೆ: ಹೊಸದಾಗಿ ನಿರ್ಮಾಣವಾಗಲಿರುವ ಎಸ್‌ಟಿಆರ್‌ಆರ್‌ ರಸ್ತೆ 6ಪಥಗಳ ಆಕ್ಸೆಸ್‌ ಕಂಟ್ರೋಲ್‌ ರಸ್ತೆಯಾಗಿದ್ದು, 100 ಕಿಮೀ ವೇಗದ ಗರಿಷ್ಠ ಮಿತಿಯನ್ನು ಒಳಗೊಂಡಿದೆ. ಕನಕಪುರ ತಾಲೂಕಿನ ತಟ್ಟೆಕೆರೆ ಗ್ರಾಮದಿಂದ ಆನೇಕಲ್‌ ತಾಲೂಕಿನ ಬಗ್ಗನದೊಡ್ಡಿ ವರೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ರಸ್ತೆ ಸಾಗುವ ಹಿನ್ನೆಲೆಯಲ್ಲಿ 8.34 ಕಿಮೀ ದೂರ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡಲಾಗುವುದು. ಜಿಲ್ಲೆಯಲ್ಲಿ ಸಂಪರ್ಕ ಕ್ರಾಂತಿಯ ಜೊತೆಗೆ ಹೊಸ ಉದ್ಯಮ, ಕೈಗಾರಿಗಳ ವಿಸ್ತರಣೆಗೆ ಈ ಹೆದ್ದಾರಿ ಅನುಕೂಲವಾಗಲಿದೆ.

7 ರಾಷ್ಟ್ರೀಯ, 15 ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ: ಹೊಸದಾಗಿ ನಿರ್ಮಾಣವಾಗುತ್ತಿರುವ ಎಸ್‌ಟಿಆರ್‌ ಆರ್‌ ರಸ್ತೆ ರಾಷ್ಟ್ರೀಯ ಹೆದ್ದಾರಿಗಳಾ ಗಿರುವ 48,75,275,648,844,44,75 ಗಳಿಗೆ ಲಿಂಕ್‌ ಆಗಲಿದೆ. ಇದರೊಂದಿಗೆ ರಾಜ್ಯ ಹೆದ್ದಾರಿ ಗಳಾದ 3/94,112,03, 35,178,85,17,95, 05,99,82,104,96,09,74 ಗೆ ಸಂಪರ್ಕ ಕಲ್ಪಿಸ ಲಿದೆ. ಇಷ್ಟೂ ರಸ್ತೆಗಳ ವ್ಯಾಪ್ತಿಗೆ ಬರುವ ಪಟ್ಟಣಗಳಿಗೆ ಸುತ್ತಿ ಬಳಸಿ ಹೋಗುವುದು ತಪ್ಪಲಿದ್ದು, ಹಲವು ನಗರಗಳಿಗೆ ನೇರವಾಗಿ ಸಂಪರ್ಕ ಮಾಡಲು ಎಸ್‌ಟಿಆರ್‌ಆರ್‌ ಸಹಕಾರಿಯಾಗಲಿದೆ.

20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ: ಬೆಂಗಳೂರು ನಗರದ ಸುತ್ತಾ 11 ನಗರಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಎಸ್‌ಟಿಆರ್‌ಆರ್‌ ಯೋಜನೆಗೆ ಸಂಬಂಧಿ ಸಿದಂತೆ ಮೊದಲು ಪ್ರಸ್ತಾಪವಾಗಿದ್ದು 2005ರಲ್ಲಿ. ಈ ಯೋಜನೆಗೆ ರೂಪಿಸಲಾಗಿತ್ತಾದರೂ 2017ರ ವರೆಗೆ ಇದು ಕೇವಲ ಪ್ರಸ್ತಾವನೆಯಾಗೇ ಉಳಿದಿತ್ತು. 2017ರಲ್ಲಿ ಭಾರತ್‌ ಮಾಲಠಾ ಯೋಜನೆಯಡಿ ಮತ್ತೆ ಈ ರಸ್ತೆಯ ನಿರ್ಮಾಣಕ್ಕೆ ಜೀವ ಬಂದಿತು. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದ ಎಸ್‌ಟಿಆರ್‌ ಆರ್‌ ರಸ್ತೆಗೆ ಚಾಲನೆ ನೀಡಿ ದರು. 2024ರ ಮಾರ್ಚ್ ನಲ್ಲಿ 80 ಕಿಮೀ ದೂರದ ದಾಬಸ್‌ ಪೇಟೆ-ದೊಡ್ಡಬಳ್ಳಾಪುರ ರಿಂಗ್‌ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಸೆ.5ರಂದು 144 ಕಿಮೀ ಕಾಮಗಾರಿಗೆ ಎನ್‌ಎಚ್‌ಎಐ ಟೆಂಡರ್‌ ಕರೆದಿದೆ. ‌

2 ರಾಷ್ಟ್ರೀಯ ಹೆದ್ದಾರಿಗಳ ಜೋಡಣೆ: ಬೆಂಗಳೂರು ಸ್ಯಾಟಲೈಟ್‌ ಸಿಟಿ ಔಟರ್‌ ರಿಂಗ್‌ ರೋಡ್‌ ಯೋಜನೆಗೆ ಎರಡು ಹಾಲಿ ರಾಷ್ಟ್ರೀಯ ಹೆದ್ದಾರಿ ಯನ್ನು ಜೋಡಣೆ ಮಾಡಲು ಎನ್‌ಎಚ್‌ ಎಐ ಮುಂದಾಗಿದೆ. ಬೆಂಗಳೂರು ಸುತ್ತಾ ನಿರ್ಮಾಣ ಮಾಡಿರುವ ದಾಬಸ್‌ಪೇಟೆಯಿಂದ ಹೊಸೂರು ವರೆಗೆ ಎನ್‌ಎಚ್‌ 207 ಹೊಸದಾಗಿ ಎನ್‌ಎಚ್‌ 648 ಆಗಿಬದಲಾಗಿದೆ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಿದ್ದು, ಇದರೊಂದಿಗೆ ಈ ರಸ್ತೆಗೆ ದಾಬಸ್‌ಪೇಟೆಯಿಂದ ಮಾಗಡಿ, ಕನಕಪುರ ಮೂಲಕ ಆನೇಕಲ್‌ ಹಾಯ್ದು ಹೊಸೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 948ಎ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದೆ.( ಹಿಂದೆ ಎನ್‌ಎಚ್‌205 ಬೆಂಗಳೂರು-ದಿಂಡಿಗಲ್‌ ರಸ್ತೆಯನ್ನು ಎನ್‌ ಎಚ್‌948 ಆಗಿ ಬದ ಲಾಯಿಸಲಾಗಿದೆ.) ಈ ಎರಡೂ ರಸ್ತೆಗಳು ಬೆಂಗಳೂರು ಸುತ್ತಾ ಹಾಯ್ದು ಹೋಗುವ ಎಸ್‌ಟಿಆರ್‌ಆರ್‌ ರಸ್ತೆಯಲ್ಲಿ ಸೇರ್ಪಡೆಯಾಗಿದೆ. ಎಸ್‌ಟಿಆರ್‌ಆರ್‌ ರಸ್ತೆಯ ಒಟ್ಟು ಉದ್ದ 288 ಕಿಮೀ ಇದ್ದು ನಮ್ಮ ರಾಜ್ಯದಲ್ಲಿ 243 ಕಿಮೀ, ತಮಿಳುನಾಡಿನಲ್ಲಿ 45 ಕಿಮೀ ಉದ್ದ ಈ ರಸ್ತೆ ಇರಲಿದೆ. ಪ್ರಸ್ತುತ ರಸ್ತೆ ಕಾಮಗಾರಿ ನಮ್ಮ ರಾಜ್ಯದಲ್ಲಿ 80 ಕಿಮೀ (ದಾಬಸ್‌ಪೇಟೆ-ಹೊಸಕೋಟೆ) ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸಂಚಾರ ಮುಕ್ತಗೊಂಡಿದೆ. ಇದೀಗ ಕೈಗೊಂಡಿರುವ 144 ಕಿಮೀ ಕಾಮಗಾರಿ ಪೂರ್ಣಗೊಂಡರೆ ಶೇ.95 ರಷ್ಟು ಎಸ್‌ಟಿಆರ್‌ಆರ್‌ ಕಾಮಗಾರಿ ನಮ್ಮ ರಾಜ್ಯದಲ್ಲಿ ಪೂರ್ಣವಾಗಲಿದೆ.

ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಎಸ್‌ಟಿಆರ್‌ಆರ್‌ ಕಾಮಗಾರಿಗೆ ಚಾಲನೆ ನೀಡುವ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೂಡಿ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತೀನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಅವರು 45 ದಿನಗಳ ಒಳಗೆ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದ್ದರು. ಇದೀಗ 30 ದಿನಗಳಲ್ಲಿ ಕಾಮಗಾರಿಗೆ ಟೆಂಡರ್‌ ಕರೆದಿದ್ದಾರೆ. ಇದರಿಂದಾಗಿ ಬೆಂಗಳೂರು ನಗರದ ಮೇಲಿನ ಸಂಚಾರ ದಟ್ಟಣೆ ಕಡಿಮೆಯಾಗುವ ಜೊತೆಗೆ ಸುತ್ತಲಿನ 11 ನಗರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯೋಜನೆಗೆ ಅನುಮೋದನೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತೀನ್‌ಗಡ್ಕರಿ ಅವರಿಗೆ ನಮ್ಮ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. -ಡಾ.ಸಿ.ಎನ್‌.ಮಂಜುನಾಥ್‌, ಸಂಸದ  

-ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

CM–Chennapatana

Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ

HDD–BSY

By Election: ಸಿ.ಪಿ.ಯೋಗೇಶ್ವರ್‌ ಬಾಯಿ ಮಾತಿನ ಭಗೀರಥ: ಎಚ್‌.ಡಿ.ದೇವೇಗೌಡ ವಾಗ್ದಾಳಿ

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.