ಕಾಂಗ್ರೆಸ್‌ಗೆ ಯಾರೇ ಬಂದರೂ ಸ್ವಾಗತ
Team Udayavani, Nov 5, 2022, 3:58 PM IST
ರಾಮನಗರ: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನ ಒಪ್ಪಿಕೊಂಡು ಯಾರಾದರೂ ಪಕ್ಷಕ್ಕೆ ಬರಬಹುದು ಎಂದು ಆಹ್ವಾನ ಕೊಟ್ಟಿದ್ದೇವೆ. ಇದಕ್ಕೆ ಅಂತ ನಮ್ಮ ಪಕ್ಷ ಒಂದು ಕಮಿಟಿ ಮಾಡಿದೆ. ಈ ಕಮಿಟಿಗೆ ಅರ್ಜಿ ಹಾಕಿ ಬರಬೇಕು. ಹಿರಿಯ ನಾಯಕರ ಸಮಿತಿ ಇದೆ. ರೆಹಮಾನ್ ಖಾನ್ ಅಧ್ಯಕ್ಷತೆಯಲ್ಲಿ ಸಮಿತಿ ಇದೆ. ಅವರು ಪರಿಶೀಲನೆ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳವ ಬಗ್ಗೆ ತೀರ್ಮಾನ ಆಗುತ್ತದೆ. ಅದರಲ್ಲಿ ಗೊಂದಲ ಬೇಡ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಪ್ರಧಾನ ಮಂತ್ರಿ ಸಂಸತ್ ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿರುವ ರಾಮನಗರ ತಾಲೂಕಿನ ಬೆತ್ತನಗೆರೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಕಾರ್ಯ ಕ್ಷೇತ್ರ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳನ್ನ ಈಗಾಗಲೇ ಆದರ್ಶ ಗ್ರಾಮಯೋಜನೆಗೆ ತಂದು ಅಭಿವೃದ್ಧಿ ಪಡಿಸಲಾಗಿದೆ. ಸಂಸದರ ಆದರ್ಶ ಗ್ರಾಮದಲ್ಲಿ ಆಯ್ಕೆಯಾಗುವ ಪ್ರತಿ ಗ್ರಾಮಕ್ಕೆ ಬೇಕಿರುವ ಮೂಲಭೂತ ಸೌಕರ್ಯ ಒದಗಿಸಿ ಮಾದರಿ ಗ್ರಾಮ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಹಲವು ಗ್ರಾಮಗಳನ್ನ ನೀತಿ ಆಯೋಗ ಈ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿದೆ. ಒಟ್ಟು 80 ಲಕ್ಷ ರೂ. ವೆಚ್ಚದಲ್ಲಿ ಈ ಗ್ರಾಮವನ್ನ ಅಭಿವೃದ್ಧಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರ 40 ಲಕ್ಷ ರೂ. ಗ್ರಾಮದ ಅಭಿವೃದ್ಧಿಗೆ ನೀಡುತ್ತದೆ. ಇದರ ಜತೆಗೆ ನರೇಗಾ ಯೋಜನೆಯಲ್ಲಿ 40 ಲಕ್ಷ ರೂ. ಬಳಸಿಕೊಂಡು ಹಲವು ಕಾಮಗಾರಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಪಕ್ಷ ಬೆಳೆಯಬೇಕು: ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ಇತಿಹಾಸ ಇದೆ. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆ ಆಗಬೇಕೆಂಬುದು ನಿಯಮ. ಇಲ್ಲಿ ಯಾರದ್ದು ವೈಯಕ್ತಿಕ ವಿಚಾರಗಳು ಇಲ್ಲ. ಸಿದ್ದರಾಮಯ್ಯನ ವರಾಗಲಿ, ಡಿ.ಕೆ.ಶಿವಕುಮಾರ್ ಅವರದ್ದಾಗಲಿ, ರಾಜ್ಯದ ಯಾವುದೇ ನಾಯಕರದ್ದಾಗಲಿ ಪ್ರತಿಷ್ಠೆಯ ಪ್ರಶ್ನೆ ಇಲ್ಲಿ ಇಲ್ಲ. ಪಕ್ಷ ಬೆಳೆಯಬೇಕು. ಸಮಗ್ರ ಭಾರತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತ ರಾಗುವ ಮೂಲಕ ಈ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ದುರಡಾಳಿತವನ್ನ ತೊಲಗಿಸಲು ಕಂಕಣ ಬದ್ಧರಾಗಬೇಕು. ಅದಕ್ಕಾಗಿಯೇ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಕ್ಕೆ ಹೆಚ್ಚಿನ ಅನುಕೂಲ: ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಎಐಸಿಸಿ ಅಧ್ಯಕ್ಷರಾಗಿರು ವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಅದರಲ್ಲೂ ವಿಶೇಷವಾಗಿ ನಮ್ಮ ರಾಜ್ಯದವರು ಎನ್ನುವ ಹೆಮ್ಮೆ ನಮಗಿದೆ. ಅವರ ನಿರಂತರ ಹೋರಾಟ ಮತ್ತು ಪರಿಶ್ರಮದಿಂದ ಅವರಿಗೆ ಪ್ರತಿಫಲ ಹಾಗೂ ಶಕ್ತಿ ನೀಡಿದೆ. ಖರ್ಗೆ ಅವರಿಂದ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ ಎಂಬ ನಿರೀಕ್ಷೆ ಇದೆ. ರಾಷ್ಟ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ 2023ಕ್ಕೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ದೃಢ ವಿಶ್ವಾಸ ನಮಗಿದೆ ಎಂದರು.
ಚುನಾವಣೆ ದಿನಾಂಕ ಘೋಷಣೆ: ಗುಜರಾತ್ ರಾಜ್ಯದ ಚುನಾವಣೆ ದಿನಾಂಕ ಘೋಷಣೆಯಾಗಿದೆ. ನಮ್ಮ ಪಕ್ಷ ಈಗಾಗಲೇ ಒಂದು ಹಂತದ ತಯಾರಿ ಮಾಡಿಕೊಂಡಿದೆ. ಅಲ್ಲಿ ಪಕ್ಷ ಸದೃಢವಾಗಿದೆ. ಆ ರಾಜ್ಯದಲ್ಲಿ ಹಲವು ಸವಾಲುಗಳು ಇವೆ. ಅವೆಲ್ಲವನ್ನು ಎದುರಿಸಿ ಚುನಾವಣೆ ಮಾಡಬೇಕಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸರ್ವ ಪ್ರಯತ್ನದಿಂದ ಚುನಾವಣೆ ಎದುರಿಸಲಿದೆ ಎಂದರು.
ಬಾಲಕೃಷ್ಣ ಏಳಿಗೆ ಸಹಿಸದೆ ಕೃತ್ಯ : ಕಳೆದ ಎರಡು ದಿನಗಳ ಹಿಂದೆ ಮಾಗಡಿ ಕ್ಷೇತ್ರದ ಒಂದು ಗ್ರಾಮದ ಹಾಲಿನ ಸಹಕಾರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಮಾಜಿ ಶಾಸಕರ ಕಾರಿನ ಮೇಲೆ ಹಾಗೂ ಬಮೂಲ್ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎಸೆದಿ ದ್ದಾರೆ. ಇದು ಅವರ ಕುಚೇಷ್ಟೆತನಕ್ಕೆ ಸಾಕ್ಷಿಯಾಗಿದೆ. ಬಾಲಕೃಷ್ಣ ಅವರ ಏಳಿಗೆ ಸಹಿಸದ ಕೆಲವರು ಇಂತಹ ಕೆಲಸ ಮಾಡಿದ್ದಾರೆ. ಸ್ವಾಭಾವಿಕವಾಗಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಶಾಸಕರನ್ನ ಕರೆದಿದ್ದಾರೆ. ಹಾಗಾಗಿ, ಬಾಲಕೃಷ್ಣ ಹೋಗಿದ್ದಾರೆ. ಕಾರ್ಯಕ್ರಮ ಮುಗಿಸಿ ಮರಳುವಾಗ ಇಂತಹ ಕೃತ್ಯವನ್ನು ಕೆಲವು ಕಿಡಿಗೇಡಿಗಳು ಮಾಡಿದ್ದಾರೆ. ಈ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲು ಹೋಗಲ್ಲ. ನಮಗೂ ಪ್ರತ್ಯುತ್ತರ ಕೊಡಲು ಬರುತ್ತೆ. ಆದರೆ, ಅದರ ಅವಶ್ಯಕತೆ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.