ಸಚಿವ ಮುನಿರತ್ನ ಭ್ರಮೆಯಿಂದ ಆಚೆ ಬರಲಿ
Team Udayavani, Apr 11, 2023, 2:22 PM IST
ರಾಮನಗರ: ನಾನು ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿ ದ್ದೇನೆ. ಒಬ್ಬೊಬ್ಬರು ಒಂದೊಂದು ದೃಷ್ಟಿಯಿಂದ ನೋಡು ತ್ತಾರೆ. ನನಗೆ ಯಾರ ಮೇಲೆಯೂ ವೈಯಕ್ತಿಕವಾಗಿ ಏನೂ ಇಲ್ಲ, ಪಕ್ಷದ ಪರವಾಗಿ ಕೆಲಸ ಮಾಡ್ತೇನೆ. ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಬಗ್ಗೆ ಗಮನಹರಿಸಿದ್ದೀನಿ ಅಷ್ಟೆ. ಆದರೆ, ಸಚಿವ ಮುನಿರತ್ನ ಅವರಿಗೆ ಏನಾಗಿದೆಯೋ ನನಗೆ ಗೊತ್ತಿಲ್ಲ. ಅವರು ಭ್ರಮೆಯಲ್ಲಿದ್ದಾರೆ. ಭ್ರಮೆಯಿಂದ ಆಚೆ ಬಂದರೆ ಎಲ್ಲಾ ಸರಿ ಹೋಗುತ್ತೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ನಗರದಲ್ಲಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಸಚಿವ ಮುನಿರತ್ನ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಅದರಿಂದ ನನಗೇನೂ ಆಗಬೇಕಿಲ್ಲ. ನನ್ನ ಸಂಸತ್ ಸದಸ್ಯ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡ್ತೇನೆ. ನನಗೆ ನನ್ನ ಪಕ್ಷ ವಹಿಸಿದ ಜವಾಬ್ದಾರಿ ನಿಭಾಯಿಸುವುದಷ್ಟೆ ಕೆಲಸ. ಆದರೆ ಅವರಿಗೆ ಯಾಕೆ ಅಳಕು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸ್ಥಳೀಯರ ಅಭಿ ಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ಕಳುಹಿಸಿ ದ್ದೇವೆ. ಇನ್ನೆರಡು ದಿನದಲ್ಲಿ ಅಭ್ಯರ್ಥಿ ಆಯ್ಕೆ ಫೈನಲ್ ಆಗಲಿದೆ. ಕಾರ್ಯ ಕರ್ತರ ಒತ್ತಾಸೆ ಅಭಿಪ್ರಾಯವೇ ಅಂತಿಮವಾಗಿದ್ದು, ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲೂ ವಿಶೇಷ ಗಮನಹರಿಸಿದ್ದೇನೆ. ಡಿ.ಕೆ. ಶಿವಕುಮಾರ್ 224 ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿ ದ್ದಾರೆ. ಕೆಲವೊಂದು ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಇದೆ. ಹಾಗಾಗಿ, ಕೆಲವು ಕಡೆ ತಡವಾಗಬಹುದು ಎಂದರು.
ಚನ್ನಪಟ್ಟಣಕ್ಕೆ ಸ್ಥಳೀಯರೇ ಕಾಂಗ್ರೆಸ್ ಅಭ್ಯರ್ಥಿ : ಕಾಂಗ್ರೆಸ್‌ನಿಂದ 15ಕ್ಕೂ ಹೆಚ್ಚು ಮಂದಿ ಜೆಡಿಎಸ್‌ಗೆ ಬರ್ತಾರೆ ಎಂಬ ಎಚಿxಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ಹೋಗಬಹುದು, ಇಲ್ಲ ಅನ್ನೋಕೆ ಆಗಲ್ಲ. ಕುಮಾರಸ್ವಾಮಿ ಅವರಷ್ಟು ನನಗೆ ತಿಳಿವಳಿಕೆ ಇಲ್ಲ ಎಂದಷ್ಟೇ ಕುಟುಕಿದ ಅವರು, ಚನ್ನಪಟ್ಟಣದಲ್ಲಿ ಅಚ್ಚರಿ ಅಭ್ಯರ್ಥಿ ಸ್ಪರ್ಧೆ ಎನ್ನುವ ಮಾತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಅಚ್ಚರಿ ಅಭ್ಯರ್ಥಿ ಸ್ಪರ್ಧೆ ಮಾಡಲ್ಲ, ನಮ್ಮ ಜಿಲ್ಲೆಯ, ಅದೇ ತಾಲೂಕಿನವರು ಸ್ಪರ್ಧೆ ಮಾಡ್ತಾರೆ. ಕಳೆದ ಚುನಾವಣೆ ಬೇರೆ, ಈ ಚುನಾವಣೆ ಬೇರೆ. ನಮ್ಮ ಪಕ್ಷ ಚನ್ನಪಟ್ಟಣದಲ್ಲಿ ಸದೃಢವಾಗಿದೆ ಎನ್ನುವ ಮೂಲಕ ಸ್ಥಳೀಯರೇ ಅಭ್ಯರ್ಥಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ಘೋಷಿಸಿದರು.
ಕಾಂಗ್ರೆಸ್‌ಗೆ ಖರ್ಗೆನೇ ಸುಪ್ರೀಂ: ಸಂಸದ ಸುರೇಶ್ : ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಏಕೆ ಬರಬಾರದು. ಹಾಗಂತ ಎಲ್ಲಾದ್ರೂ ಇದೆಯಾ. ಈ ಬಗ್ಗೆ ಈಗಾಗಲೇ ಡಿಕೆಶಿವಕುಮಾರ್ ಮಾತನಾ ಡಿದ್ದಾರೆ. ಖರ್ಗೆ ಅವರು ನಮ್ಮ ಪಕ್ಷದ ಅಗ್ರ ನಾ ಯಕರು, ಅವರೇ ನಮಗೆ ಸುಪ್ರೀಂ. ಅವರ ಆದೇಶ ಪಾಲನೆ ಮಾಡುವುದು ನನ್ನ ಮತ್ತು ಡಿ.ಕೆ.ಶಿವಕುಮಾರ್ ಕರ್ತವ್ಯ. ನಾವು ಅವರ ಆದೇಶ ಪಾಲನೆ ಮಾಡ್ತೇವೆ. ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ನಾಯಕರು ಅವರ ಆದೇಶ ಪಾಲಿಸಬೇಕು. ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಸಂಸದ ಸುರೇಶ್ ಜಾಣ್ಮೆ ಉತ್ತರ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.