ಆಸ್ತಿ ಸರ್ವೆ ಮಾಡಿ ತೆರಿಗೆ ವಸೂಲಿ ಮಾಡಿ
Team Udayavani, Jan 15, 2022, 12:44 PM IST
ಕನಕಪುರ: ಸ್ವಯಂಪ್ರೇರಿತರಾಗಿ ನಾಗರಿಕರು ತೆರಿಗೆ ಕಟ್ಟಲು ಮುಂದಾದರು ನಗರಸಭೆ ಅಧಿಕಾರಿಗಳುತೆರಿಗೆ ನಿರಾಕರಿಸುತ್ತಿದ್ದಾರೆ ಎಂದು ನಗರಸಭೆ ಉಪಾಧ್ಯಕ್ಷ ರಾಮದುರ್ಗಯ್ಯ ನಗರ ಸಭೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ನಗರದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ನಗರಸಭೆಯಿಂದ ಎಲ್ಲ ಸವಲತ್ತು ಪಡೆಯುವ ನಾಗರಿಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶವಿದೆ. ಮನೆ ಕಟ್ಟಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿ ಮಾಡಲು ಬಂದರು ಅಧಿಕಾರಿಗಳು ಆಸ್ತಿ ತೆರಿಗೆ ನಿರಾಕರಿಸುತ್ತಿದ್ದಾರೆ. ತೆರಿಗೆಪಾವತಿಯಾದರೆ ಮನೆಗಳಿಗೆ ಇ-ಖಾತೆ ನೀಡಬೇಕು ಎಂಬ ಕಾರಣಕ್ಕೆ ನಗರ ಸಭೆ ಆದಾಯದ ಮೂಲವನ್ನು ನಿರಾಕರಿಸುತ್ತಿರುವ ಕ್ರಮ ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತೆರಿಗೆ ವಸೂಲಿಗೆ ತಾಕೀತು: ಮನೆ ನಿರ್ಮಾಣ ಅಧಿಕೃತವೋ ಅನಧಿಕೃತವೋ ಇ-ಖಾತೆ ಕೊಡುವವಿಚಾರ ಬಂದಾಗ ಅದನ್ನು ಪರಿಶೀಲನೆ ಮಾಡಿ ನಂತರಇ-ಖಾತೆ ಕೊಡಿ. ಅದಕ್ಕೂ ಮೊದಲು ಸ್ವಯಂಪ್ರೇರಿತರಾಗಿ ಬಂದು ತೆರಿಗೆ ಕಟ್ಟುವ ನಾಗರಿಕರ ಬಳಿ ತೆರಿಗೆವಸೂಲಿ ಮಾಡುವ ಕೆಲಸ ಮಾಡಿ ಎಂದು ತಾಕೀತುಮಾಡಿದರು.
ಮೊದಲು ಸರ್ವೆ ಮಾಡಿ: ನಗರದಲ್ಲಿರುವ ಮನೆಗಳಸರ್ವೆ ಮಾಡಿ ಡಿಮ್ಯಾಂಡ್‌ನಲ್ಲಿ ಸೇರ್ಪಡೆ ಮಾಡಿ ಎಂದು ಸಂಸದರು ಎರಡು ಮೂರು ಬಾರಿ ಸೂಚನೆ ಕೊಟ್ಟರು. ಅಧಿಕಾರಿಗಳು ಈ ವರೆಗೂ ಮನೆಗಳ ಸರ್ವೆಮಾಡಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ಮನೆಗಳಿವೆ? ಎಷ್ಟು ರೆಸಿಡೆನ್ಸಿಯಲ್ ಮನೆಗಳಿವೆ? ಕಮರ್ಷಿಯಲ್ ಕಟ್ಟಡಗಳೆಷ್ಟು? ಕಾರ್ಖಾನೆ ಕಟ್ಟಡಗಳುಎಷ್ಟಿವೆ? ಅದನ್ನು ಮೊದಲು ಸರ್ವೆ ಮಾಡಿ, ಕಂದಾಯ ವಸೂಲಿ ಮಾಡಿ. ಸರ್ಕಾರದ ಅನುದಾನಕ್ಕೆಕಾಯದೆ ತೆರಿಗೆ ಸಂಗ್ರಹದಲ್ಲಿ ಅಭಿವೃದ್ಧಿ ಮಾಡಿ ಎಂದು ಸಂಸದರು ಅನೇಕ ಬಾರಿ ಸೂಚನೆ ಕೊಟ್ಟಿದ್ದಾರೆ. ಈವರೆಗೂ ಅಧಿಕಾರಿಗಳು ಒಂದು ದಿನ ಸರ್ವೆ ಕಾರ್ಯ ನಡೆಸಿಲ್ಲ. ಕಚೇರಿಯಲ್ಲಿ ಕಾಲಹರಣ ಮಾಡಿಕೊಂಡು ಕುಳಿತಿದ್ದಾರೆ ಎಂದು ಕೆಲವು ಸದಸ್ಯರು ಕಟುವಾಗಿಯೇ ಸಿಡುಕಿದರು ಕೂಡ ಅಧಿಕಾರಿಗಳ ಬಳಿ ಉತ್ತರವಿಲ್ಲ.
ಇ ಖಾತೆ: ಇ-ಖಾತೆ ನೀಡಲು ಇಲ್ಲದ ದಾಖಲೆ ಕೇಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.ಅಧಿಕಾರಿಗಳು ಬದಲಾದಂತೆ ಇ-ಖಾತೆಗೆ ಬೇಕಾದ ದಾಖಲಾತಿಗಳು ಬದಲಾವಣೆ ಮಾಡುತ್ತಿದ್ದಾರೆ. ಇ-ಖಾತೆಗೆ ಯಾವ ದಾಖಲೆ ಕೊಡಬೇಕು ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ. ಇನ್ನು ಕೆಲವರಿಗೆ ಇ-ಖಾತೆಗೆ ಇಸಿ ಕೇಳುತ್ತಿದ್ದೀರಿ. ಪಿತ್ರಾರ್ಜಿತ ಆಸ್ತಿಗಳಿಗೆ ಇಸಿ ಸಿಗುವುದಿಲ್ಲ. ಟ್ರಾನ್ಸಾಕ್ಷನ್ ಆಗಿರುವ ಆಸ್ತಿಗಳಿಗೆ ಮಾತ್ರ ಇಸಿ ನೋಂದಣಿ ಆಗುತ್ತದೆ. ಇಲ್ಲದ ದಾಖಲೆ ಕೇಳಿದರೆ ನಾಗರಿಕರು ಎಲ್ಲಿಂದ ತಂದು ಕೊಡುತ್ತಾರೆ ? ಇ- ಖಾತೆಗೆ ದಾಖಲೆ ಸಲ್ಲಿಸಿದವರಿಗೆ ಮಾಡಿಕೊಡಿ. ತಕರಾರು ಇದ್ದರೆ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುತ್ತಾರೆ. ಅದನ್ನು ಬಿಟ್ಟು ನೀವು ನ್ಯಾಯಾಧೀಶರಂತೆ ಅದನ್ನು ಪರಿಶೀಲನೆ ಮಾಡುವ ಅಧಿಕಾರ ನಮಗೆ ಯಾರೂ ನಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇ ಖಾತೆಗೆ ಅಧಿಕಾರಿಗಳ ವಿಳಂಬ: ನಗರಸಭೆ ಸದಸ್ಯ ಜಯರಾಮು ಮಾತನಾಡಿ, ನಾನು ಒಬ್ಬ ನಗರಸಭೆ ಸದಸ್ಯ ಇ-ಖಾತೆಗಾಗಿ ಅರ್ಜಿ ಸಲ್ಲಿಸಿದ್ದೇನೆ. ಆರು ತಿಂಗಳು ಕಳೆದರೂ ನನಗೆ ಇನ್ನು ಇ- ಖಾತೆ ಮಾಡಿಕೊಟ್ಟಿಲ್ಲ. ಸಾರ್ವಜನಿಕರಿಗೆ ಹೇಗೆ ಇ ಖಾತೆ ಕೊಡುತ್ತೀರಿ? ನಗರದ ಲ್ಲಿರುವ ಶಿರಾ ಹಳ್ಳ ಮತ್ತು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುತ್ತಿದ್ದಾರೆ. ರಾಜಕಾಲುವೆ ಪಕ್ಕದಲ್ಲೇ ಮನೆ ನಿರ್ಮಾಣ ಮಾಡುತ್ತಿರುವ ಕೆಲವರು 20×30ಕ್ಕೆ
ಅನುಮತಿ ಪಡೆದು 60×80ಕ್ಕೆ ಮನೆ ನಿರ್ಮಾಣ ಮಾಡಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನಮಾಡದೆ ಅನುಮತಿ ಕೊಟ್ಟಿದ್ದಾರೆ. ನಗರದಲ್ಲಿ ಎಷ್ಟು ಶಿರ ಹಳ್ಳ ಮತ್ತು ರಾಜ ಕಾಲುವೆಗಳಿವೆ. ಅವುಗಳವಿಸ್ತೀರ್ಣ ಎಷ್ಟು ಮಾಹಿತಿ ಕೊಡಿ ಎಂದರು.
6500 ಇ-ಖಾತೆ ಬಾಕಿ: ನಗರಸಭೆ ಪೌರಾಯುಕ್ತೆ ಶುಭ ಮಾತನಾಡಿ, ನಗರಸಭೆ ವ್ಯಾಪ್ತಿಯ ಲ್ಲಿ 6500ಇ-ಖಾತೆ ಆಗಬೇಕಿದೆ. ವಾರ್ಡ್‌ವಾರು ಸಭೆ ನಡೆಸಿ ಬಾಕಿ ಇರುವ ಖಾತೆಗಳನ್ನು ಸ್ಥಳದಲ್ಲಿ ಮಾಡಿಕೊಡು ವಂತೆ ಯೋಜನೆ ರೂಪಿಸಲಾಗಿದೆ. ವಾರ್ಡ್‌ಗಳಲ್ಲಿಇ-ಖಾತೆ ಜೊತೆಗೆ ನೀರಿನ ತೆರಿಗೆ ಮತ್ತು ಕಂದಾಯವಸೂಲಿ ಮಾಡಲು ಚಿಂತನೆ ನಡೆಸಲಾಗಿದೆ. ಬ್ಯಾಂಕಿನಲ್ಲಿ ಚಲನ್ ಕಟ್ಟಲು ಅಲೆದಾಡುವ ಬದಲನಗರಸಭೆಯ ಲ್ಲಿ ಹಣ ಪಾವತಿ ಮಾಡಿ ಸ್ಥಳದಲ್ಲಿ ಇ-ಖಾತೆ ಕೊಡಬಹುದು. ಇವೆಲ್ಲವನ್ನು ಸುಧಾ ರಣೆ ಮಾಡಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಬೇಕು.ಬಾಕಿಯಿರುವ 6500 ಇ-ಖಾತೆ ಮಾಡುವುದು ನಮ್ಮಧ್ಯೇಯೋದ್ದೇಶ. ವಾರ್ಡ್‌ವಾರು ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಸಭೆಯಲ್ಲಿ ಅಧ್ಯಕ್ಷ ವೆಂಕಟೇಶ್, ಪರಿಸರ ಇಲಾಖೆ ಪಾರ್ವತಿ, ಲೆಕ್ಕಾಧಿಕಾರಿ ನಟರಾಜ್, ಎಂಜಿನಿಯರ್ ವಿಜಯ್ ಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಮಕ್ಬುಲ್ ಪಾಷಾ, ಸದಸ್ಯರಾದ ಸ್ಟುಡಿಯೋ ಚಂದ್ರು,ನಾಗರಾಜು, ಕೃಷ್ಣಪ್ಪ, ರಾಮ ದಾಸು, ಕಿರಣ್, ಮಾಲತಿಸೇರಿದಂತೆ 31 ಸದಸ್ಯರು ನಗರಸಭೆ ಅಧಿಕಾರಿಗಳು ಹಾ ಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಲೈಸೆನ್ಸ್ ದರ ಏರಿಕೆ :
ನಗರಸಭೆ ವ್ಯಾಪ್ತಿಯಲ್ಲಿರುವ ಆಟೋಮೊಬೈಲ್ಸ್, ಬೇಕರಿ, ಕಾಂಡಿಮೆಂಟ್ಸ್, ಹೋಟೆಲ್, ಉದ್ದಿಮೆ,ವಸತಿಗೃಹ, ಅಂಗಡಿ ಮಳಿಗೆ, ಬಾರ್ ಅಂಡ್‌ರೆಸ್ಟೋರೆಂಟ್, ಬುಕ್ ಸ್ಟಾಲ್, ಬೆಳ್ಳಿ-ಬಂಗಾರದ ಅಂಗಡಿ, ಬಾಳೆಮಂಡಿ, ಬೀಡಿ ತಯಾರಿಕೆ ಮತ್ತುಮಾರಾಟ, ಬ್ಯೂಟಿ ಪಾರ್ಲರ್, ಸೆಲೂನ್, ಬಟ್ಟೆಅಂಗಡಿ, ಶಾ ಮಿಲ್, ಕಲ್ಯಾಣ ಮಂಟಪ, ಸಭಾಂಗಣ, ಆಯಿಲ್ ಮಿಲ್ ಸೇರಿದಂತೆ 175 ಉದ್ದಿಮೆ ಪರವಾನಗಿ ಶುಲ್ಕ ಏರಿಕೆ ಮಾಡಲು ಸಭೆಯಲ್ಲಿ ಅನುಮೋದನೆ ಪಡೆಯ ಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.