“ನರೇಗಾ ಯೋಜನೆ ಸಾಮಗ್ರಿ ವೆಚ್ಚ ಫಲಾನುಭವಿಗಳಿಗೆ ನೀಡಿಲ್ಲ’
Team Udayavani, Jul 4, 2017, 8:45 AM IST
ಕನಕಪುರ: ತಾಲೂಕಿನ ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯತಿ ಅಧಿಕಾರಿಗಳು 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ದನದ ಕೊಟ್ಟಿಗೆ ಹಾಗೂ ಕೃಷಿ ಹೊಂಡಗಳ ಸಾಮಗ್ರಿ ವೆಚ್ಚವನ್ನು ಫಲಾನುಭವಿಗಳಿಗೆ ನೀಡದೇ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದಾಳಿಂಬ ಗ್ರಾಮದ ಜನತೆ ಆರೋಪಿಸಿದ್ದಾರೆ.
ತಾಲೂಕಿನ ಸಾತನೂರು ಹೋಬಳಿ ವ್ಯಾಪ್ತಿಯ ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯ್ತಿಯಲ್ಲಿ 2014-15ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ದನ ಕೊಟ್ಟಿಗೆ ಹಾಗೂ ಕೃಷಿ ಹೊಂಡಗಳನ್ನು ದಾಳಿಂಬ ಮತ್ತು ಕಚುವನಹಳ್ಳಿ ಗ್ರಾಮಸ್ಥರು ನಿರ್ಮಿಸಿಕೊಂಡಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ನೋವು: ದಾಳಿಂಬ ಗ್ರಾಮದ ಡಿ.ಎಚ್. ಕೃಷ್ಣೇಗೌಡ ಮಾತನಾಡಿ, 2014-15ನೇ ಸಾಲಿನಲ್ಲಿ 198 ಫಲಾನುಭವಿಗಳು ದನದ ಕೊಟ್ಟಿಗೆ ನಿರ್ಮಿಸಿಕೊಂಡಿದ್ದರು. ಅವರೆಲ್ಲರಿಗೂ ಕೂಲಿ ವೆಚ್ಚ ಮಾತ್ರ ಬಂದಿದ್ದು, ಉಳಿದ ಸಾಮಗ್ರಿ ವೆಚ್ಚ ಇಲ್ಲಿವರೆಗೆ ನೀಡಿಲ್ಲ. 256 ಮಂದಿ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ. ಅವರಿಗೂ ಸಾಮಗ್ರಿ ವೆಚ್ಚ ಕೊಟ್ಟಿಲ. ಫಲಾನುಭವಿಗಳು ಕೇಳಿದರೆ ಕಂದಾಯ ಹಾಗೂ ವಗೈರೆ ಸೇರಿದಂತೆ 200ರಿಂದ 300ರೂ.
ಗಳು ಉಳಿದಿದೆ. ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಕಟ್ಟುಕತೆ: ರೈತರಿಗೆ ಬರಬೇಕಿದ್ದ ಸಾಮಗ್ರಿ ವೆಚ್ಚವನ್ನು ಗುತ್ತಿಗೆದಾರರ ಹೆಸರಿಗೆ ಪಂಚಾಯತಿ ಅಧಿಕಾರಿ ಮತ್ತು ಅಧ್ಯಕ್ಷರು ಹಾಕಿಸಿದ್ದು ಆ ಹಣವನ್ನು ಎಲ್ಲರೂ ಸೇರಿ ಹಂಚಿಕೊಂಡಿದ್ದಾರೆ. ರೈತರು ಕೇಳಿದರೆ ಕಟ್ಟು ಕತೆ ಹೇಳಿ ವಂಚಿಸುತ್ತಿದ್ದಾರೆ ಎಂದು ದೂರಿದರು.
ತನಿಖೆ ನಡೆಸಿ: ಪ್ರತಿ ವರ್ಷವೂ ವರ್ಷದ ಅಂತ್ಯಕ್ಕೆ ಕೂಲಿ ಮೊತ್ತಕ್ಕೆ ಅನುಗುಣವಾಗಿ ಸಾಮಗ್ರಿ ವೆಚ್ಚವು ಬರಬೇಕು. ಆದರೆ, ಅರೆಕಟ್ಟೆದೊಡ್ಡಿ ಗ್ರಾಪಂನಲ್ಲಿ ಹಣ ಕೊಡದೆ ದುರುಪಯೋಗ ಮಾಡಿಕೊಂಡಿಕೊಂಡು ಮೋಸ ಮಾಡುತ್ತಿದ್ದಾರೆ.
ಹೀಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕಚುವನಹಳ್ಳಿ ಡಿ.ಶಿವಲಿಂಗೇಗೌಡ ಮಾತನಾಡಿ, ಅರೆಕಟ್ಟೆದೊಡ್ಡಿ ಗ್ರಾಪಂನಲ್ಲಿ ಸಾರ್ವಜನಿಕರಿಗೆ ವಂಚನೆಯಾಗುತ್ತಿದೆ. ದನದ ಕೊಟ್ಟಿಗೆ ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಅಸಕ್ತಿ ತೋರಿ ಕೆಲಸ ಮಾಡಿಸಿದ್ದಾರೆ. ಆದರೆ, ಪೂರ್ತಿ ಹಣ ಕೊಡುತ್ತಿಲ್ಲವೆಂದು ಆರೋಪಿಸಿದ್ದಾರೆ.
ಅಂದಾಜು ವೆಚ್ಚಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕಾಮಗಾರಿ ಬೋರ್ಡ್ ಹಾಕಲು 1200 ರೂ. ಖರ್ಚು ತೆಗೆದು ಸಾಮಗ್ರಿ ವೆಚ್ಚವನ್ನು ಸಂಪೂರ್ಣ ಹಿಡಿದುಕೊಳ್ಳುತ್ತಿದ್ದಾರೆ. ಪಂಚಾಯತಿಯಲ್ಲಿ ಭಾರೀ ಅವ್ಯವಹಾರ
ನಡೆಯುತ್ತಿದ್ದು, ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳು ಇದರ ವಿರುದ್ಧ ದೂರು ದಾಖಲಿಸಿಕೊಂಡು ಅನ್ಯಾಯ ತಡೆಗಟ್ಟಬೇಕೆಂದು ಮನವಿ ಮಾಡಿದ್ದಾರೆ. ವಿಎಸ್‌ಎಸ್‌ಎನ್ ನಿರ್ದೇಶಕ ಡಿ.ಕೆ.ರವಿ, ಡಿ.ಎಂ.ಚಿಕ್ಕಸಿದ್ದೇಗೌಡ,
ವಿ.ಜಿ. ಶಂಕರ್, ಕೆ. ಬಸವೇಗೌಡ, ಕಾಳಿರೇಗೌಡ, ಶಿವಮರೀಗೌಡ, ಬೋರೇಗೌಡ, ಶಿವಣ್ಣ, ಬಸವಣ್ಣ, ಮಹೇಶ್, ರಾಮು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪರಿಶೀಲಿಸಲಾಗುವುದು: 2014ರಿಂದ ಇಲ್ಲಿವರಗೆ ನಡೆದಿರುವ ಎಲ್ಲಾ ಕಾಮಗಾರಿಗಳ ಸಾಮಗ್ರಿ ವೆಚ್ಚ ವೆಂಟರ್ ಅಕೌಂಟ್‌ಗೆ ಇನ್ನೂ ಬಂದಿಲ್ಲ. ನರೇಗಾ ಯೋಜನೆಯಡಿಯಲ್ಲಿ ಶೇ. 60:40ರಷ್ಟು ಅನುಪಾತವು ಪಾಲನೆಯಾಗದ
ಕಾರಣ ಜಿಲ್ಲಾ ಪಂಚಾಯತಿಯಲ್ಲಿ ಲಾಕ್ ಆಗಿದೆ. ಪಂಚಾಯತಿಯಿಂದ ಯಾವುದೇ ಮೋಸವಾಗಿಲ್ಲವೆಂದು ಪಿಡಿಒ ಲೋಕೇಶ್ ತಿಳಿಸಿದ್ದಾರೆ.
ನರೇಗಾ ಯೋಜನೆಯಲ್ಲಿ 60:40ರಷ್ಟು ಅನುಪಾತ ಪಾಲನೆಯಾಗದ ಹಿನ್ನೆಲೆಯಲ್ಲಿ ಹಣ ಸಂದಾಯ ಮಾಡುವುದು
ಸ್ವಲ್ಪ ವಿಳಂಬವಾಗುತ್ತದೆ. 2ರಿಂದ 3 ವರ್ಷಗಳ ವರೆಗೆ ವಿಳಂಬವಾಗುವುದಿಲ್ಲ. ಅರೆಕಟ್ಟೆದೊಡ್ಡಿ ಗ್ರಾಪಂನಲ್ಲಿ 2
ವರ್ಷದಿಂದ ಸಾಮಗ್ರಿ ವೆಚ್ಚ ನೀಡದಿರುವುದು ಇಲ್ಲಿವರೆಗೆ ತಿಳಿದಿಲ್ಲ. ಪರಿಶೀಲನೆ ನಡೆಸಲಾಗುವುದು.
ರಾಮಕೃಷ್ಣಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.