ಕುದೂರಿನಲ್ಲಿ ನರೇಗಾ ಯೋಜನೆ ದುರ್ಬಳಕೆ
Team Udayavani, Jul 6, 2021, 11:23 AM IST
ಕುದೂರು: ಕುದೂರಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು (ನರೇಗಾ) ದುರುಪಯೋಗ ಪಡಿಸಿಕೊಳ್ಳಲಾಗಿದೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವುದುಕುದೂರು ಹೋಬಳಿಯಲ್ಲಿಕಂಡು ಬರುತ್ತಿದೆ.
ಉದ್ಯೋಗಖಾತ್ರಿ ಎಂದರೆ ಸೂಚಿಸುವಂತೆ ಕೂಲಿಇಲ್ಲದಬಡಜನರಿಗೆಸರ್ಕಾರದಿಂದಲೇ ಕೆಲಸ ನೀಡಿ ಹಣ ಕೊಡುವುದು ಈ ಯೋಜನೆಯ ಉದ್ದೇಶ. ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಿಸಿಕೊಳ್ಳಲು ಅವಕಾಶವಿದೆ. ಆದರೆ, ಆಗುತ್ತಿರುವುದೇ ಬೇರೆ, ಕೋವಿಡ್ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯನ್ನು ಬುಡಮೇಲು ಮಾಡುತ್ತಿರುವ ಪ್ರಕರಣಗಳುಕುದೂರು ಪಂಚಾಯಿತಿ ಮತ್ತು ಹೋಬಳಿಯಲ್ಲಿ ಯಥೇಚ್ಚಾಗಿ ನೆಡೆಯುತ್ತಿವೆ. ಕೂಲಿ ಕಾರ್ಮಿಕರ ಬದಲು ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ಕಾಮಗಾರಿ ಕೈಗೊಂಡಿದ್ದಾರೆ.
ಮಾನವನ ಕೂಲಿಗೆ ಕತ್ತರಿ: ಉದ್ಯೋಗಖಾತ್ರಿ ಯೋಜನೆಯಡಿ ಕುದೂರು ಗ್ರಾಪಂ ವ್ಯಾಪ್ತಿಯಲ್ಲಿ ಮುಖಂಡರು ಶಾಲೆಯ ಆಟದ ಮೈದಾನ ಅಭಿವೃದ್ಧಿ ಕಾಮಗಾರಿ, ಕೆಪಿಎಸ್ ಶಾಲಾ ಅವರಣದಲ್ಲಿ ಅಭಿವೃದ್ಧಿ ಕಾಮಗಾರಿ, ಕುದೂರು ಗ್ರಾಮದ ಭಾರತ್ ಪೆಟ್ರೋಲ್ ಬಂಕ್‌ನಿಂದ ಶಿವಗಂಗೆ ರಸ್ತೆವರೆಗೆ ರಾಜ ಕಾಲುವೆ ಅಭಿವೃದ್ಧಿ, ದುರಸ್ತಿ ಕಾಮಗಾರಿ ಮಾಡಿಸುತ್ತಿದ್ದಾರೆ. ಸದರಿ ಕಾಮಗಾರಿಯನ್ನು ಉದ್ಯೋಗ ಕಾರ್ಡ್ ಹೊಂದಿರುವ ಜನರಿಗೆ ಕೆಲಸ ನೀಡಿ ಗ್ರಾಪಂ ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು, ಕೆಲಸ ಮಾಡಿಸಬೇಕು. ಆದರೆ, ಗ್ರಾಪಂ ಅಧಿಕಾರಿಗಳು ಹಾಗೂ ಎಂಜಿನಿಯರ್ ನಿರ್ಲಕ್ಷ್ಯದಿಂದ ರಾಜಕಾಲುವೆ, ಶಾಲಾ ಅವರಣದ ಅಭಿವೃದ್ಧಿ ಕಾಮಗಾರಿಯನ್ನು ಜೆಸಿಬಿ, ಹಿಟಾಚಿ ಮೂಲಕ ಕೆಲಸ ನಿರ್ವಹಿಸುತ್ತಿದ್ದು ಮಾನವ ಕೂಲಿಗೆ ಕತ್ತರಿ ಹಾಕಿದಂತಾಗಿದೆ.
ಅನುದಾನ ದುರುಪಯೋಗ: ಕುದೂರು ಗ್ರಾಪಂ ವ್ಯಾಪ್ತಿಯ ಕೆಪಿಎಸ್ ಶಾಲೆ ಅವರಣ ದಲ್ಲಿ ಶಾಲೆ ಅಭಿವೃದ್ಧಿ ಕಾಮಗಾರಿ 3 ಲಕ್ಷ ರೂ., ಹಾಗೂ ಅದೇ ಕೆಪಿಎಸ್ ಶಾಸ್ತ್ರಿಯ ಅವರಣದಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿ 5 ಲಕ್ಷ ರೂ., ಎಂದು ನಾಮಫಲಕ ಹಾಕಲಾಗಿದೆ. ಕಾಮಗಾರಿಯು ಕಳಪೆಯಾಗಿದ್ದು, ಕಾಮಗಾರಿ ಪರಿಶೀಲಿಸದೆ ಅನುದಾನ ದುರ್ಬಳಕೆಗೆಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ರಾಜಕಾಲುವೆ ಅಭಿವೃದ್ಧಿಗೆ 40 ಲಕ್ಷ: ಕುದೂರು ಗ್ರಾಮದ ಪೆಟ್ರೋಲ್ ಬಂಕ್‌ನಿಂದ ಶಿವಗಂಗೆ ರಸ್ತೆಯವರೆಗೆ ರಾಜಕಾಲುವೆ ದುರಸ್ತಿ ಕಾಮಗಾರಿಗೆ 10 ಲಕ್ಷ ರೂ., ರಂಗ ನಾಥವೈನ್‌ನಿಂದ ದರಂಗಸ್ವಾಮಿತೋಟದವರೆಗೆ 10 ಲಕ್ಷ ರೂ.,ರಂಗಸ್ವಾಮಿ ತೋಟದಿಂದ ತುಮಕೂರು ರಸ್ತೆವರೆಗೆ ರಾಜಕಾಲುವೆ ಅಭಿವೃದ್ಧಿ ಮತ್ತು ದುರಸ್ತಿ 10 ಲಕ್ಷ ರೂ., ತುಮಕೂರು ರಸ್ತೆಯಿಂದ ಗುರುಕುಲ ಶಾಲೆಯವರೆಗೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ 10 ಲಕ್ಷ ರೂ., ಒಟ್ಟು ಕುದೂರು ಗ್ರಾಮದ ಪೆಟ್ರೋಲ್ ಬಂಕ್‌ನಿಂದ ಗುರುಕುಲ ಶಾಲೆಯವರೆಗೆ ರಾಜಕಾಲುವೆ ಅಭಿವೃದ್ಧಿ, ದುರಸ್ತಿ ಮಾಡುವುದ ಕ್ಕೆ 4 ಭಾಗಗಳಾಗಿ ವಿಂಗಡಿಸಿಕೊಂಡು ಒಟ್ಟು 40 ಲಕ್ಷ ರೂ. ಕಾಮಗಾರಿ ಮಾಡುತ್ತಿದ್ದಾರೆ. ಸಾರ್ವಜನಿಕರು ಪ್ರಶ್ನೆ ಮಾಡಿದರೆ ನಮಗೆ ಹೂಳು ತೆರವುಗೊಳಿಸಲು ಮಾತ್ರ 10 ಲಕ್ಷ ರೂ., ಕಾಮಗಾರಿ ಆಗಿರುವುದು ಎಂದು ಜನರನ್ನು ಯಾಮಾರಿಸುವಕೆಲಸ ಮಾಡುತ್ತಿದ್ದಾರೆ.
ವರ್ಷಕ್ಕೆ 150 ದಿನಗಳ ಕಾಲ ಬಡವರಿಗೆ ಕೂಲಿ ದೊರೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನರೇಗಾ ಯೊಜನೆಯನ್ನು ಜಾರಿಗೆ ತಂದು ಪಂಚಾಯಿತಿ ವತಿಯಂದ ಹಲವು ರೀತಿಯ ಕಾಮಗಾರಿಗಳನ್ನು ಮಾಡಲು ಅನುಕೂಲ ಮಾಡಿಕೊಟ್ಟಿದೆ. ಆದರೆ, ತಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯೋಗ ಖಾತ್ರಿ ಯೋಜನೆಯನ್ನು ಕೆಲ ಮುಖಂಡರು ದುರುಪಯೋಗಪಡಿಸಿಕೊಂಡು ಬಡವರಿಗೆ ಅನ್ಯಾಯ ಮಾಡುತ್ತಿರುವುದು ಹಲವು ಗ್ರಾಪಂಗಳಲ್ಲಿ ಕಂಡು ಬರುತ್ತಿರುವುದು ಬೇಸರದ ಸಂಗತಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ನರೇಗಾ ಪ್ರಕಾರ ಒತ್ತುವರಿ ತೆರವುಗೊಳಿಸದೆ ಕೆಲಸ ಮಾಡಿಸಬಹುದು. ಸರ್ವೆ ಮಾಡಿಸಬೇಕೆಂದರೆಕೆಲಸ ವರ್ಷಾನುಗಟ್ಟಲೇ ಹಿಡಿಯುತ್ತದೆ. ಸರ್ವೆ ಮಾಡಿಸುವುದು ಪಂಚಾಯಿತಿ, ನಮಗೆ ಬರುವುದಿಲ್ಲ.– ವಿನೋದ್, ನರೇಗಾ ಯೋಜನೆ ಎಂಜಿನಿಯರ್
ಉದ್ಯೋಗಖಾತ್ರಿ ಯೋಜನೆಯಡಿ ಕಾಮಗಾರಿಯನ್ನು ಜೆಸಿಬಿಯಂತ್ರ ಬಳಕೆ ಮಾಡಿ ಕೆಲಸ ಮಾಡುವುದು ಕಾನೂನು ಬಾಹಿರ. ಆದ್ದರಿಂದ ಕಾಮಗಾರಿ ಪರಿಶೀಲನೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸ್ಥಳೀಯ ಪಿಡಿಒ, ಗ್ರಾಪಂ ಅನ್ನೇ ಹೊಣೆ ಮಾಡಲಾಗುತ್ತದೆ. – ಪ್ರದೀಪ್, ಇಒ, ಮಾಗಡಿ
–ಕೆ.ಎಸ್.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.