ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿ ಭೂ ಸ್ವಾಧೀನಕ್ಕೆ ಆಕ್ಷೇಪ
Team Udayavani, Feb 1, 2020, 5:31 PM IST
ರಾಮನಗರ: ಕೈಗಾರಿಕಾ ಪ್ರದೇಶ ಸ್ಥಾಪನೆಗೆಂದು ತಾಲೂಕಿನ ಬಿಡದಿ ಹೋಬಳಿ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಗ್ರಾಮದ ರೈತರು ಆಕ್ಷೇಪ ವ್ಯಕ್ತಪಡಿಸಿದ್ದು, ಕೆಐಎಡಿಬಿ ಅಧಿಕಾರಿಗಳು ಸಭೆ ಮುಂದೂಡಿದರು.
ಶುಕ್ರವಾರ ತಾಲೂಕಿನ ಕಂಚುಗಾರನಹಳ್ಳಿ ಗ್ರಾಪಂ ಕಚೇರಿಯಲ್ಲಿ ಸಭೆ ಆಯೋಜಿಸಿತ್ತು. ಗ್ರಾಪಂ ವ್ಯಾಪ್ತಿಯಲ್ಲಿ ಸ್ವಾಧೀನಕ್ಕೆ ಗುರುತಿಸಲಾಗಿರುವಭೂಮಿಯ ಮಾಲೀಕರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಕಂಚು ಗಾರನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಸುಮಾರು 500 ಎಕರೆ ಭೂಮಿಯ ಮಾಲಿಕರು ಮತ್ತು ರೈತರು ಸ್ವಾಧೀನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಕ್ಷೇಪಣೆ ಏಕೆ? ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಬಿಡದಿ ಸಮೀಪ ಉಪನಗರ(ಟೌನ್ ಶಿಫ್) ಮಾಡುವ ಉದ್ದೇಶದಿಂದ ಬೈರಮಂಗಲ ಮತ್ತು ಕಂಚುಗಾರನಹಳ್ಳಿಯ ಗ್ರಾಮಪಂಚಯ್ತಿಗಳ ವ್ಯಾಪ್ತಿಯಲ್ಲಿ 9600 ಎಕರೆ ಪ್ರದೇಶವನ್ನು ಕೆಂಪು ವಲಯ(ರೆಡ್ ಜೋನ್)ವೆಂದು ಘೋಷಿಸಿದೆ.
ವರ್ಷಗಳು ಉರುಳಿದರೂ ಟೌನ್‌ಶಿಪ್ ನಿರ್ಮಿಸುವ ಕಾರ್ಯ ನಡೆಯಲಿಲ್ಲ. ಇನ್ನೊಂದೆಡೆ ರೆಡ್ ಜೋನ್ ಎಂದು ಘೋಷಿಸಿದ್ದರಿಂದ ರೈತರು, ಭೂ ಮಾಲೀಕರು ಭೂಮಿಯ ಅಭಿವೃದ್ದಿ ಮಾಡುವು ದಾಗಲಿ, ಮಾರಾಟ ಮಾಡುವುದಾಗಲಿ ಸಾಧ್ಯವಾಗಿರಲಿಲ್ಲ. ಇದು ರೈತರಲ್ಲಿ ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿತ್ತು.
ಭೂ ಸ್ವಾಧೀನಕ್ಕೆ ಬಂದಿದ್ದ ಅಧಿಕಾರಿಗಳು: ಇದೀಗ ಬಿಡದಿ ಹೋಬಳಿ ಕಂಚುಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕಂಚುಗಾರನಹಳ್ಳಿ ಮತ್ತು ಕಂಚುಗಾರನಹಳ್ಳಿ ಕಾವಲ್ ಗ್ರಾಮಗಳು, ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಪಂ ವ್ಯಾಪ್ತಿಯ ಎರೆಹಳ್ಳಿ ಮತ್ತು ಮುಡೇನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸುವ ಸಲುವಾಗಿ 1118 ಎಕರೆ ಭೂಮಿಯ ಸ್ವಾಧೀನಕ್ಕೆ (ಈ ಭೂಮಿಯೂ ರೆಡ್ ಜೋನ್ ವ್ಯಾಪ್ತಿಗೆ ಒಳಪಟ್ಟಿದೆ) ಕೆಐಎಡಿಬಿ ಮುಂದಾಗಿದ್ದು, ಇದೇ ವಿಚಾರದಲ್ಲಿ ಭೂ ಮಾಲಿಕರೊಂದಿಗೆ ಚರ್ಚೆಗೆ ಅಧಿಕಾರಿಗಳು ಆಗಮಿಸಿದ್ದರು.
ಸಭೆಯಲ್ಲಿ ರೈತರ ಆಕ್ರೋಶದ ಕಟ್ಟೆ ಒಡೆಯಿತು. ಇಷ್ಟು ದಿನ ನಮಗೆ ಅನ್ಯಾಯವಾಗಿದೆ. ಮೊದಲು ರೆಡ್ ಜೋನ್ ನೋಟಫಿಕೇಷನ್ ತೆರವುಗೊಳಿಸಿ ನಂತರ ಭೂ ಸ್ವಾಧೀನಕ್ಕೆ ಬನ್ನಿ ಎಂದು ತಾಪಂ ಸದಸ್ಯ ಎಚ್.ಪ್ರಕಾಶ್, ಭೈರಮಂಗಲ ವಿಎಸ್‌ಎಸ್‌ಎನ್ ಅಧ್ಯಕ್ಷ ಎಚ್.ಎಸ್.ಸಿದ್ದರಾಜು ಹಾಗೂ ಗ್ರಾಪಂ ಸದಸ್ಯರಾದಿಯಾಗಿ ರೈತರು ಪಟ್ಟು ಹಿಡಿದರು. ಎಲ್ಲಾ 9600 ಎಕರೆ ಭೂಮಿಯನ್ನು ರೆಡ್ ಜೋನ್‌ನಿಂದ ತೆರವುಗೊಳಿಸಿ, ಇಲ್ಲವೇ ಟೌನ್ ಶಿಪ್ ಮಾಡಿ ಎಂದು ಆಗ್ರಹಿಸಿದರು.
ಇದೇ ವಿಚಾರದಲ್ಲಿ ಕೆಐಎ ಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಿ.ವೆಂಕಟೇಶ್ ಅವರಿಗೆ ಮನವಿ ಅರ್ಪಿಸಿದರು. ರೈತರ ಆಕ್ಷೇಪಕ್ಕೆ ಮಣಿದ ಅಧಿಕಾರಿಗಳು ಸಭೆ ಮುಂದೂಡಿ, ಹಾರೋಹಳ್ಳಿ ಎರೆಹಳ್ಳಿ ಮತ್ತು ಮುಡೇನಹಳ್ಳಿ ಗ್ರಾಮಗಳ ವ್ಯಾಪ್ತಿಯ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ನಡೆಸುವುದಾಗಿ, ಸಮಸ್ಯೆ ಬಗೆ ಹರಿದ ನಂತರ ಮತ್ತೂಮ್ಮೆ ನೋಟಿಸ್ ಜಾರಿ ಮಾಡಿ ಸಭೆ ಅಯೋಜಿ ಸುವುದಾಗಿ ಹೇಳಿ ಸಭೆ ಮುಂದೂಡಿದರು.
ಘಟಕದ ಗುತ್ತಿಗೆದಾರರು ಅವಧಿ ಮುಗಿದರೂ ಗ್ರಾಪಂ ವ್ಯಾಪ್ತಿಗೆ ಬರುವ ನೀರು ವಿತರಕರಿಗೆ ಘಟಕದ ಜವಾಬ್ದಾರಿ ಆಯಾ ಗ್ರಾಪಂಗೆ ನೀಡದೆ ಹಣದ ಆಸೆಗೆ ಅವರೇ ಮುಂದುವರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ತಾಲೂಕಿನ ಎಲ್ಲಾ ಗ್ರಾಪಂ ಅಧಿಕಾರಿಗಳು ಹಾಗೂ ಘಟಕದ ಗುತ್ತಿಗೆದಾರರಿಗೆ ನೋಟಿಸ್ ನೀಡುತ್ತೇನೆ. –ರಂಗಪ್ಪ, ಎಇಇ, ಕೊರಟಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.