ತೋಟಗಾರಿಕೆ ಕುರಿತು ಆನ್‌ಲೈನ್ ತರಬೇತಿ
Team Udayavani, Aug 8, 2020, 11:02 AM IST
ಮಾಗಡಿ: ತಾಲೂಕಿನ ಚಂದುರಾಯನಹಳ್ಳಿಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ತರಕಾರಿ ಬೆಳೆಗಳಿಗೆ ಲಘು ಪೋಷಕಾಂಶಗಳ ಮಿಶ್ರಣ ತರಕಾರಿ ಸ್ಪೆಷಲ್‌ನ ಬಳಕೆ ಬಗ್ಗೆ ಆನ್‌ಲೈನ್ ತರಬೇತಿಯನ್ನು ಕೆವಿಕೆ ಕೇಂದ್ರದ ಮಣ್ಣು ವಿಜ್ಞಾನಿ ಪ್ರೀತು ಅವರ ನೇತೃತ್ವದಲ್ಲಿ ಹಮ್ಮಿ ಕೊಳ್ಳಲಾಗಿತ್ತು.
ವಿಜ್ಞಾನಿ ಪ್ರೀತು ರೈತರನ್ನು ಉದ್ದೇಶಿಸಿ ಮಾತನಾಡಿ, ಸಸ್ಯಗಳು ಕೇವಲ ಬೇರು ಗಳಿಂದಲೇ ಪೋಷಕಾಂಶ ಮತ್ತು ನೀರನ್ನು ಮಣ್ಣಿನಿಂದ ಹೀರಿಕೊಳ್ಳುತ್ತವೆ ಎಂಬುದು ನಮ್ಮ ನಂಬಿಕೆ. ಆದರೆ ವಾಸ್ತವದಲ್ಲಿ ಸಸ್ಯಗಳು ಎಲೆಗಳ ಮೇಲೆ ಸಿಂಪಡಿಸಿದ ಪೋಷಕಾಂಶ ಗಳನ್ನು ಸಹ ಹೀರಿಕೊಳ್ಳಬಲ್ಲವು ಎಂದರು.
ಐಐಹೆಚ್‌ಆರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ತರಕಾರಿ ಸ್ಪೆಷಲ್ (ವೆಜಿಟೆಬಲ್ ಸ್ಪೆಷಲ್) ಲಘು ಪೋಷಕಾಂಶಗಳ ಮಿಶ್ರಣವನ್ನು ಎಲೆ ಮತ್ತು ಕಾಯಿಗಳ ಮೇಲೆ ಸಿಂಪಡಣೆ ಮಾಡುವುದರಿಂದ ಉತ್ತಮ ಸಸ್ಯಗಳ ಬೆಳವಣಿಗೆ, ಗುಣಮಟ್ಟದ ಕಾಯಿಗಳು ಹಾಗೂ ಶೇ.20-25ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು.
ತರಕಾರಿ ಸ್ಪೆಷಲ್: ಐಐಹೆಚ್‌ಆರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ತರಕಾರಿ ಸ್ಪೆಷಲ್ (ವೆಜಿಟೆಬಲ್ ಸ್ಪೆಷಲ್ ) ನ್ನು 2-5ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ತರಕಾರಿ ಬೆಳೆಗಳಿಗೆ ಸಸಿ ನೆಟ್ಟ 45 ದಿನಗಳು ಅಥವಾ ನಾಟಿ ಮಾಡಿದ 30 ದಿನಗಳಿಗೆ ಮುಂಜಾನೆ 6 ರಿಂದ 9 ಗಂಟೆ ಅಥವಾ ಸಂಜೆ 4 ರಿಂದ 7 ಗಂಟೆ ಸಮಯದಲ್ಲಿ ಸಿಂಪಡಣೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ 22 ಮಂದಿ ರೈತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.