H. D. Kumaraswamy: ಎಚ್ಡಿಕೆ ಕ್ಷೇತ್ರದಲ್ಲಿ ಆಪರೇಷನ್ ಹಸ್ತಕ್ಕೆ ಸಿದ್ಧತೆ
Team Udayavani, Aug 17, 2023, 12:05 PM IST
ರಾಮನಗರ: ದಳಪತಿಯ ಕೋಟೆಯಲ್ಲಿ ಶಿಕಾರಿ ಮಾಡಲು ಟ್ರಬಲ್ ಶೂಟರ್ ಮುಂದಾಗಿದ್ದು, ತನ್ನನ್ನೂ ಸೇರಿದಂತೆ ಕಾಂಗ್ರೆಸ್ ಸರ್ಕಾರವನ್ನು ತನ್ನ ವಾಗ್ಬಾಣದ ಮೂಲಕ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಸ್ವಂತ ಜಿಲ್ಲೆ ಯಲ್ಲೇ ಟಾಂಗ್ ನೀಡಲು ಡಿ.ಕೆ.ಶಿವಕುಮಾರ್ ಇದೀಗ ಆಪ ರೇಷನ್ ಹಸ್ತ ಆರಂಭಿಸಿದ್ದಾರೆ.
ಚುನಾವಣೆಗೆ ಮುನ್ನಾ ಎಚ್‌ಡಿಕೆ ಆಪ್ತವಲಯ ದಲ್ಲಿದ್ದ ಕನಕಪುರ ತಾಲೂಕಿನ ದುಂತೂರು ವಿಶ್ವನಾಥ್, ನಾರಾಯಣಗೌಡ, ರಾಮನಗರದ ಮಾಜಿ ಶಾಸಕ ಕೆ.ರಾಜು, ಗುತ್ತಿಗೆದಾರ ಜಗದೀಶ್ ಸೇರಿದಂತೆ ಕೆಲ ಪ್ರಮು ಖರನ್ನು ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ಗೆ ಸೆಳೆದಿದ್ದರು. ಲೋಕಸಭಾ ಚುನಾವಣೆ ಸಮೀಪಿ ಸುತ್ತಿರುವ ಹಿನ್ನೆಲೆ ಯಲ್ಲಿ ಜಿಲ್ಲೆಯಲ್ಲಿ ಇನ್ನೊಂದು ಸುತ್ತಿನ ಆಪರೇಷನ್ ಅನ್ನು ಡಿಕೆಎಸ್ ಸಹೋದರರು ಜಿಲ್ಲೆಯಲ್ಲಿ ಆರಂಭಿಸಿದ್ದಾರೆ.
ಚನ್ನಪಟ್ಟಣವೇ ಟಾರ್ಗೆಟ್: ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ತನ್ನ ಭದ್ರನೆಲೆಯನ್ನು ಕಂಡು ಕೊಂಡಿದೆ. ಆದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಠೇವಣಿಯನ್ನು ಉಳಿಸಿಕೊಳ್ಳದಂತ ದಯನೀಯ ಸ್ಥಿತಿಯಲ್ಲಿದ್ದು, ಈ ಕ್ಷೇತ್ರದಲ್ಲಿ ಕೋಮಾಸ್ಥಿತಿಯಲ್ಲಿರುವ ಕೈ ಪಕ್ಷಕ್ಕೆ ಆಕ್ಸಿಜನ್ ನೀಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದಳಪತಿಯ ಭದ್ರಕೋಟೆಯಾಗಿ ಚನ್ನಪಟ್ಟಣ ಮಾತ್ರ ಉಳಿದಿದ್ದು, ಈ ಕ್ಷೇತ್ರದಲ್ಲಿ ಕೈ ಪಾಳಯ ಸಂಘಟನೆ ಯಲ್ಲಿ ವೀಕ್ ಆಗಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತದ ಮೂಲಕ ಪಕ್ಷವನ್ನು ಬಲಪಡಿಸಿ, ದಳಪತಿಗೆ ಟಾಂಗ್ ನೀಡುವುದು ಡಿ.ಕೆ.ಶಿವಕುಮಾರ್ ತಂತ್ರವಾಗಿದೆ. ಈಗಾಗಲೇ ಕೆಲ ಮುಖಂಡರ ಜೊತೆಗೆ ಮಾತುಕತೆ ನಡೆಸಿರುವ ಡಿ.ಕೆ.ಶಿವಕುಮಾರ್ ಈ ತಿಂಗಳ ಕೊನೆಯ ವಾರದಲ್ಲಿ ಕಾರ್ಯಕ್ರಮ ನಡೆಸಿ ಬೃಹತ್ ಸೇರ್ಪಡೆ ಕಾರ್ಯಕ್ರಮ ನಡೆಸಲಿರುವ ಬಗ್ಗೆ ಕಾಂಗ್ರೆಸ್ ಮೂಲಗಳು ಮಾಹಿತಿ ಇತ್ತಿವೆ.
ಡ್ಯಾಮೇಜ್ ಕಂಟ್ರೋಲ್‌ಗೆ ತಂತ್ರ: ಚನ್ನಪಟ್ಟಣದಲ್ಲಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಸಜ್ಜುಗೊಳಿಸಲು ಮುಂದಾ ಗಿರುವ ಡಿ.ಕೆ.ಶಿವ ಕುಮಾರ್, ಇದಕ್ಕಾಗಿ ಆಪರೇಷನ್ ಹಸ್ತಕ್ಕೆ ಮುಂದಾಗಿ ದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬದ್ದ ವೈರಿಗಳಾದ ಕುಮಾರಸ್ವಾಮಿ ಮತ್ತು ಯೋಗೇಶ್ವರ ಒಗ್ಗೂಡಲಿದ್ದಾರೆ. ಬಿಜೆಪಿ- ಜೆಡಿಎಸ್ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ, ಯೋಗೇ ಶ್ವರ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇಬ್ಬರು ಎದುರಾಳಿಗಳನ್ನು ಮಟ್ಟಹಾಕಲು ಚನ್ನಪಟ್ಟಣದಿಂದಲೇ ಆಪರೇಷನ್ ಆರಂಭಿಸಿದ್ದಾರೆ.
ಮಾಗಡಿಯಲ್ಲೂ ಆಪರೇಷನ್: ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ಗೆಲುವು ಸಾಧಿಸಿ ದ್ದರೂ ಲೋಕಸಭಾ ಚುನಾ ವಣೆಯನ್ನು ಗುರಿ ಯಾಗಿಸಿಕೊಂಡು ಮತ್ತಷ್ಟು ಬಲಪಡಿಸಲು ಖುದ್ದು ಸಂಸದ ಡಿ.ಕೆ.ಸುರೇಶ್ ಮುಂದಾಗಿ ದ್ದಾರೆ. ಈಗಾ ಗಲೇ ಕೆಲ ಜೆಡಿಎಸ್ ಮುಖಂಡರನ್ನು ಸಂಸದ ಡಿ.ಕೆ.ಸುರೇಶ್ ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನ ನೀಡಿ ರುವ ಬಗ್ಗೆ ಮಾಹಿತಿ ಇದ್ದು, ಮಾಗಡಿ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆ ಯಾಗುತ್ತಿದೆ. ಈ ಬಗ್ಗೆ ಮಾಜಿ ಶಾಸಕ ಎ.ಮಂಜು ನಾಥ್ ಸುದ್ದಿಗೋಷ್ಠಿ ನಡೆಸಿ ನಮ್ಮ ಪಕ್ಷದಿಂದ ಯಾರೂ ಹೋಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದೂ ಆಗಿದೆ. ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಸಮಯದಲ್ಲಿ ಕೆಲಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್ ಬಾವುಟವನ್ನೂ ಹಿಡಿದಿದ್ದಾರೆ.
ಹೊರೆ ಇಳಿಸಿ ಕೈ ಹಿಡಿಯುವರೇ ಮಾಜಿ ಶಾಸಕ:
ಜಿಲ್ಲೆಯಲ್ಲಿ ಆಪರೇಷನ್ ಹಸ್ತದ ಸುದ್ದಿ ಸದ್ದು ಮಾಡುತ್ತಿರುವಾಗಲೇ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಹೊರೆ ಇಳಿಸಿ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ಬಲವಾಗಿ ಹರಿದಾಡುತ್ತಿದ್ದು, ಈಗಾಗಲೇ ಡಿ.ಕೆ.ಶಿವಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಅಧಿಕೃತ ಸೇರ್ಪಡೆಯಷ್ಟೇ ಬಾಕಿ ಉಳಿದಿದೆ.
2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಮಾಡಿದ ಅಶ್ವತ್ಥ್ ಎರಡು ಬಾರಿ ಪರಾಜಿತಗೊಂಡರು. 2009ರಲ್ಲಿ ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆ ಗೊಂಡಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾ—ಸಿದ ಅಶ್ವತ್ಥ್, 2010ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕಸ್ಥಾನ ತ್ಯಜಿಸಿ, ಬಿಜೆಪಿಗೆ ಸೇರ್ಪಡೆ ಗೊಂಡು ನಿಗಮ ಮಂಡಳಿ ಹುದ್ದೆಯನ್ನೂ ಪಡೆದರು. 2013ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ಗೆ ಬರಲು ಉತ್ಸಾಹ ತೋರಿದರಾದರೂ ಅದಕ್ಕೆ ಎಚ್.ಡಿ.ಕುಮಾರಸ್ವಾಮಿ ಒಪ್ಪಲಿಲ್ಲ. ಈ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಪರಾಜಿತಗೊಂಡರು. ಅದುವರೆಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ನಗರ ಪ್ರದೇಶದಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗಿತ್ತು. ಇದಕ್ಕೆ ಅಶ್ವತ್ಥ್ ಮತ್ತವರ ಸಹೋದರ ಕರಿಯಪ್ಪ ಕಾರಣ ಎಂದು ವ್ಯಾಖ್ಯಾನಿಸಲಾಗಿತ್ತು. 2013ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅಶ್ವತ್ಥ್ ಜೆಡಿಎಸ್ ಸೇರ್ಪಡೆಗೊಂಡರು. ಅಂದಿನಿಂದ ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಎರಡು ಚುನಾವಣೆಯಲ್ಲಿ ಕುಮಾರಸ್ವಾಮಿಪರವಾಗಿ ಕೆಲಸ ಮಾಡಿದ್ದರು. ಆದರೂ ಪಕ್ಷದಲ್ಲಿ ನನ್ನನ್ನು ಗುರುತಿಸುತ್ತಿಲ್ಲ, ಸೂಕ್ತ ಸ್ಥಾನಮಾನ ಇಲ್ಲ ಎಂದು ತಮ್ಮ ಆಪ್ತರೊಂದಿಗೆ ಬೇಸರ ವ್ಯಕ್ತಪಡಿಸುತ್ತಲೇ ಇದ್ದ ಅಶ್ವತ್ಥ್ ಇದೀಗ ಜೆಡಿಎಸ್ ತೊರೆಯುವ ಸಾಧ್ಯತೆ ನಿಚ್ಚಳಗೊಂಡಿದೆ.
ಇನ್ನು ಇವರ ನಿವಾಸಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದ್ದು, ಇವರೊಂದಿಗೆ ಇವರ ಸಹೋದರ ಎಂ.ಸಿ.ಕರಿಯಪ್ಪ ಮತ್ತು ಕೆಲ ಜೆಡಿಎಸ್ ಮುಖಂಡರನ್ನು ಕರೆದೊಯ್ಯಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಜಿಲ್ಲೆಯಲ್ಲಿ ಪಕ್ಷವನ್ನು ಸದೃಢಗೊಳಿಸು ವುದು ಎಲ್ಲರ ಜವಾಬ್ದಾರಿಯಾಗಿ ದೆ. ನಮ್ಮ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ವಿದೆ. ನಾನು ಕೆಲ ಮುಖಂಡರನ್ನು ಪಕ್ಷಕ್ಕೆ ಆಹ್ವಾ ನಿಸಿದ್ದೇನೆ. ಗ್ರಾಪಂ ಚುನಾವಣೆ ಮುಗಿಯಲ್ಲಿ ಎಂದು ಕಾಯಲಾಗುತಿತ್ತು. ಈ ತಿಂಗಳ ಅಂತ್ಯದೊಳಗೆ ಡಿಸಿಎಂ ಡಿ.ಕೆ.ಶಿವ ಕುಮಾರ್ ದಿನಾಂಕ ನೀಡಲಿದ್ದು, ಪಕ್ಷಕ್ಕೆ ಸೇರ್ಪಡೆಗೊಳ್ಳು ವವರನ್ನು ಕಾರ್ಯ ಕ್ರಮ ದಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು-ಎಸ್.ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ನಾನು ಕ್ಷೇತ್ರದಲ್ಲಿ ಪಕ್ಷವನ್ನು ಬಲಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನಾನು ಮತ್ತು ನನ್ನ ಸಹೋ ದರ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದರೂ ನಮ್ಮನ್ನು ಸೈಡ್‌ಲೈನ್ ಮಾಡಲಾಗುತ್ತಿದೆ. ನಮ್ಮ ಮಾತಿಗೆ ಬೆಲೆ ನೀಡಿ ಪಕ್ಷಕ್ಕೆ ದುಡಿದ ಹಲವಾರು ಬೆಂಬಲಿ ಗರಿಗೆ ನಾವು ಏನೂ ಮಾಡಲಾಗುತ್ತಿಲ್ಲ ಎಂಬ ಕೊರಗಿದೆ. ನನ್ನ ರಾಜಕೀಯ ಭವಿಷ್ಯಕ್ಕಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದ್ದು, ಕಾಂಗ್ರೆಸ್ ಉನ್ನತ ನಾಯ ಕರು ನನ್ನ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ನನ್ನ ಆಪ್ತರು, ಹಿತೃಷಿಗಳು ಮತ್ತು ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.-ಎಂ.ಸಿ.ಅಶ್ವತ್ಥ್, ಮಾಜಿ ಶಾಸಕ, ಚನ್ನಪಟ್ಟಣ
– ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.