ಆಧಾರ್‌ಗಾಗಿ ರಾತ್ರಿಯಿಡೀ ರಸ್ತೇಲಿ ಮಲಗುವ ಜನ
ಪ್ರಭಾವಿ ಜನಪ್ರತಿನಿಧಿಗಳ ಕ್ಷೇತ್ರದಲ್ಲೇ ಪರದಾಟ | ಸಮಸ್ಯೆ ತಿಳಿದಿದ್ದರೂ ಪರಿಹರಿಸದ ತಾಲೂಕು ಆಡಳಿತ
Team Udayavani, Jun 17, 2019, 11:41 AM IST
ಕನಕಪುರ ನಗರದ ಪೊಲೀಸ್ ಠಾಣೆ ಬಳಿಯ ಕೆನರಾಬ್ಯಾಂಕ್‌ನ ಗೇಟ್ ಮುಂದೆ ಆಧಾರ್ ಕಾರ್ಡ್ ಗಾಗಿ ಸರದಿಯಲ್ಲಿ ನಿಲ್ಲಲು ರಾತ್ರಿಯಿಡೀ ಕಾದು ರಸ್ತೆಯಲ್ಲೇ ಮಲಗಿರುವ ಸಾರ್ವಜನಿಕರು.
ಕನಕಪುರ: ರಾಜ್ಯದ ಪ್ರಭಾವಿ ಮಂತ್ರಿಗಳು ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಆಧಾರ್ ಕಾರ್ಡ್‌ಗಾಗಿ ಜನರ ರಾತ್ರಿಯಿಡೀ ನಿದ್ದೆಗೆಟ್ಟರೂ ಆಧಾರ್ ಕಾರ್ಡ್ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುವ ಭೀತಿ ಎದುರಾಗಿದೆ.
ಸರ್ಕಾರದ ಅಥವಾ ಇನ್ಯಾವುದೇ ವ್ಯವಸ್ಥೆಯಲ್ಲೇ ಆಧಾರ್ ಕಾರ್ಡ್ ಪ್ರಧಾನವಾಗಿದ್ದು, ಅದಿಲ್ಲದಿದ್ದರೆ ಯಾವುದೂ ನಡೆಯದು. ಹೀಗಾಗಿ ಕನಕಪುರ ತಾಲೂಕಿನಲ್ಲಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸಮರ್ಪಕ ಸೇವೆ ಒದಗಿಸಲು ವಿಫಲವಾಗಿದ್ದು, ಕೆನರಾ ಬ್ಯಾಂಕಿನಲ್ಲಿ ಮಾಡುವ ಆಧಾರ್ ಕಾರ್ಡ್‌ಗೆ ರಾತ್ರಿಯಿಡೀ ಸಾರ್ವಜನಿಕರು ರಸ್ತೆಯಲ್ಲಿ ಮಲಗಿ ಕಾಲಕಳೆಯುವಂತಾಗಿದೆ.
ಜನರ ಸಮಸ್ಯೆ ಅರಿತು ಆಡಳಿತ ನಡೆಸಬೇಕಾದವರು ತಾಲೂಕಿಗೆ ಬರವುದೇ ಇಲ್ಲಿನ ಜನರ ಪುಣ್ಯ. ಬಂದರೂ ಜನಸಾಮಾನ್ಯರ ಕೈಗೆ ಸಿಗದಂತಾಗಿದ್ದು, ಇಲ್ಲಿನ ಅಧಿಕಾರಿಗಳೂ ಸಮಸ್ಯೆ ಕೇಳದೆ ತಾಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಭಿವೃದ್ಧಿ ಎಂದರೆ ಜನಸಾಮಾನ್ಯರ ತೆರಿಗೆ ಹಣದಲ್ಲಿ ಕಾಮಗಾರಿ ಮಾಡುವುದಲ್ಲ. ಸ್ಥಳೀಯವಾಗಿ ಜನಸಾಮಾನ್ಯರ ಕುಂದುಕೊರತೆಗಳನ್ನು ಕೇಳಿ ಅವುಗಳನ್ನು ಬಗೆ ಹರಿಸುವುದು. ಅಂತಹ ಯಾವುದೇ ಕೆಲಸ ಈವೆರೆಗೆ ಆಗುತ್ತಿಲ್ಲ ಎನ್ನುವುದು ಜನಸಾಮಾನ್ಯರ ಆರೋಪ.
ಟ್ರಬಲ್ಸೂಟರ್ ಕ್ಷೇತ್ರದಲ್ಲಿ ಟ್ರಬಲ್: ರಾಜ್ಯ ಸರ್ಕಾರದ ಟ್ರಬಲ್ ಸೂಟರ್ ಆಗಿರುವ ಪ್ರಭಾವಿ ಮಂತ್ರಿ ಡಿ.ಕೆ.ಶಿವಕುಮಾರ್‌ರಿಗೆ ರಾಜಕೀಯ ನೆಲೆಕೊಟ್ಟ ಕ್ಷೇತ್ರವಾಗಿರುವ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಕೋಟಿಗಟ್ಟಲೆ ಹಣ ತಾಲೂಕಿಗೆ ತಂದು ಅಭಿವೃದ್ಧಿ ಮಾಡಿದ್ದೇನೆ ಎನ್ನುವ ಅವರು, ಜನರ ಸಮಸ್ಯೆ ಕೇಳುತ್ತಿಲ್ಲ. ಇಲ್ಲಿನ ಸಣ್ಣ ಸಣ್ಣ ಸಮಸ್ಯೆಗಳೂ ಜನರ ನಿದ್ದೆಗೆಡಿಸುತ್ತಿದ್ದು ಪ್ರಭಾವಿ ಮಂತ್ರಿಗಳ ಕ್ಷೇತ್ರದಲ್ಲಿ ಆಧಾರ್ ಕಾರ್ಡ್ ಸಮಸ್ಯೆ ಅತ್ಯಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಜನರ ಪರದಾಟ: ಸರ್ಕಾರ ವಿತರಣೆ ಮಾಡುವ ಪಡಿತರಕ್ಕೂ ಆಧಾರ್ ಅಗತ್ಯವಾಗಿದ್ದು, ಈ ತಿಂಗಳ ಕೊನೆಯಲ್ಲಿ ಆಧಾರ್ ನೋಂದಣಿಯಾಗದಿದ್ದರೆ ಆ ಕುಟುಂಬಗಳಿಗೆ ಪಡಿತರ ವಿತರಣೆ ನಿಲ್ಲಿಸುವ ಆದೇಶ ಹೊರಬಿದ್ದಿದೆ. ಇನ್ನುಳಿದಂತೆ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲಾಗದ ಜನತೆ ಆಧಾರ್ ಕಾರ್ಡ್‌ಗಾಗಿ ದುಂಬಾಲು ಬಿದ್ದಿದ್ದು, ರಾತ್ರಿ-ಹಗಲು ಎನ್ನದೆ ಆಧಾರ್ ನೋಂದಣಿ ಕೇಂದ್ರದ ಮುಂದೆ ಕಾಲ ಕಳೆಯುವಂತಾಗಿದೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಟೆಕ್ಸ್ಟ್ ಮಾಡಿ: ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರನ್ನು ಮತನಾಡಿಸಲು ಕರೆ ಮಾಡಿದರೆ, ಕರೆ ಸ್ಥಗಿತಗೊಳಿಸಿ ಟೈಪ್(ಟೆಕ್ಸ್ಟ್) ಮಾಡಿ ಕಳುಹಿಸಿ ಎನ್ನುವ ಸಂದೇಶ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳಿಗೆ ಮಾಧ್ಯಮಗಳು ಜನರ ಸಮಸ್ಯೆ ಕೇಳಲು ಕರೆ ಮಾಡಿದರೆ ಈ ರೀತಿಯ ಉತ್ತರ ಪಡೆಯಬೇಕಿದೆ. ಟೆಕ್ಸ್ಟ್ ಸಂದೇಶದ ಮೂಲಕ ಜಿಲ್ಲಾಧಿಕಾರಿಗಳಿಗೆ ತಿಳಿ ಸಲು ಸಾಧ್ಯವಾಗದೆ ಇರುವಾಗ ಇನ್ನು ಜನಸಾಮಾನ್ಯರ ಪಾಡೇನು ಎಂಬುದು ಅಸಮಾಧಾನ ತರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.