ಯೋಗಾಥಾನ್‌ಗೆ ಸೂಕ್ತ ಸಿದ್ಧತೆ ಕೈಗೊಳ್ಳಿ 


Team Udayavani, Jul 20, 2022, 2:41 PM IST

ಯೋಗಾಥಾನ್‌ಗೆ ಸೂಕ್ತ ಸಿದ್ಧತೆ ಕೈಗೊಳ್ಳಿ 

ರಾಮನಗರ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜನಸಾಮಾನ್ಯರಲ್ಲಿ ಯೋಗದ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್‌28ರಂದು ರಾಮನಗರ ಜಿಲ್ಲೆಯಲ್ಲಿ ಯೋಗಾಥಾನ್‌ ಕಾರ್ಯಕ್ರಮ ಆಯೋಜನೆಗೆ ಸೂಕ್ತ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಜವರೇಗೌಡ.ಟಿ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಯೋಗಥಾನ್‌ ಕಾರ್ಯಕ್ರಮವನ್ನು ಆಯೋಜಿಸುವಕುರಿತು ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿ, ಯೋಗಥಾನ್‌ ಕಾರ್ಯಕ್ರಮಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆನಡೆಸಲಾಗಿದ್ದು, 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲು ಅಗತ್ಯ ಕ್ರಮ ವಹಿಸಬೇಕು. ಕಾರ್ಯಕ್ರಮದ ವೇದಿಕೆ, ಶಾಲೆ, ಕಾಲೇಜುವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು,ಉಪಹಾರ, ಸ್ವತ್ಛತೆ, ಭದ್ರತೆ, ಆ್ಯಂಬುಲೆನ್ಸ್‌ ವ್ಯವಸ್ಥೆಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಲು,ಸಂಬಂಧಪಟ್ಟ ಇಲಾಖೆಗಳಿಗೆ ಜವಬ್ದಾರಿಯನ್ನು ಹಂಚಿಕೆ ಮಾಡಿ, ಸಮರ್ಪಕವಾಗಿ ಯೋಗಥಾನ್‌ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ತಿಳಿಸಿದರು.

ರೋಗ ಮುಕ್ತ ರಾಷ್ಟ್ರ ನಿರ್ಮಾಣದ ಸಂಕಲ್ಪ: ಯೋಗವು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳುವುದರ ಮೂಲಕ ರೋಗ ಮುಕ್ತ ರಾಷ್ಟ್ರ ನಿರ್ಮಾಣದ ಸಂಕಲ್ಪದ ಮುಖ್ಯ ಉದ್ದೇಶದಿಂದ ಯೋಗಾಥಾನ್‌ ಕಾರ್ಯಕ್ರಮದಲ್ಲಿ ಸುಮಾರು 15ಸಾವಿರ ಜನರು ಏಕಕಾಲದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಲಿಮ್ಕಾ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ಮತ್ತು ವಿಶ್ವದಾಖಲೆ ಮಾಡಲು ಸರ್ಕಾರ ಉದ್ದೇಶಿಸಿದೆ. ಅದರ ಭಾಗವಾಗಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ ಮತ್ತು ಆಯುಷ್‌ ಇಲಾಖೆ, ನೆಹರೂ ಯುವ ಕೇಂದ್ರ, ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನಾ (ಎನ್‌.ಎಸ್‌.ಎಸ್‌) ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಯೋಗಥಾನ್‌ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಯುವಜನತೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಸಂಘ- ಸಂಸ್ಥೆಗಳ ಸಹಕಾರ ಪಡೆಯಿರಿ: ಯುವಕ, ಯುವತಿಯರು, ಯೋಗಾಪಟುಗಳು, ಕಾಲೇಜುವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ,ಸಾರ್ವಜನಿಕರು ಜಿಲ್ಲೆಯ ಯೋಗ ಸಂಸ್ಥೆಗಳುಭಾಗವಹಿಸಲು ಅನುಕೂಲವಾಗುವಂತೆ ಸ್ವಯಂ ಸೇವಾ ಸಂಘಟನೆಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಉಚಿತ ಯೋಗ ತರಬೇತಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಮಾತನಾಡಿ, ಯೋಗಾಥಾನ್‌ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಗ್ಗೆ ಉಚಿತವಾಗಿ ಯೋಗ ತರಬೇತಿಯನ್ನು ಈಗಾಗಲೇ ನೀಡಲಾಗುತ್ತಿದೆ ಎಂದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಥಾನ್‌ ಕಾರ್ಯಕ್ರಮದಲ್ಲಿ ನೋಂದಣಿಮಾಡಿಸಿಕೊಳ್ಳಲು ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದ್ದು, ಕುಶಲ ಕೋಶ ತಂತ್ರಾಂಶದ ಮೂಲಕನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌ ಬಾಬು ಟಿ.ಜಿ, ಜಿಲ್ಲಾಕೌಶಲ್ಯಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಸಿ.ಎನ್‌. ಲತಾ, ಜಿ.ಪಂ ಎ.ಎಸ್‌ ಮಮತಾ, ನೆಹರು ಯುವ ಕೇಂದ್ರದ ಶ್ರೀವಾಣಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಯೋಗಾಥಾನ್‌ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಗ್ಗೆ ಉಚಿತವಾಗಿ ಯೋಗ ತರಬೇತಿಯನ್ನುಈಗಾಗಲೇ ನೀಡಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಥಾನ್‌ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. -ಜಯಲಕ್ಷ್ಮೀ, ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಟಾಪ್ ನ್ಯೂಸ್

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

Electric

Belagavi: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ದುರ್ಮರಣ

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

1-bahga

K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

police crime

Bidar; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagar: ನೀರಿಲ್ಲದೇ ಜಿಲ್ಲೆಯ ಕೆರೆಗಳು ಖಾಲಿ ಖಾಲಿ!

Ramanagar: ನೀರಿಲ್ಲದೇ ಜಿಲ್ಲೆಯ ಕೆರೆಗಳು ಖಾಲಿ ಖಾಲಿ!

Sweet Pumpkin: ಮಳೆ ನೀರಿನಿಂದಲೇ ಸಿಹಿ ಕುಂಬಳಕಾಯಿ ಬೆಳೆದ ರೈತ

Sweet Pumpkin: ಮಳೆ ನೀರಿನಿಂದಲೇ ಸಿಹಿ ಕುಂಬಳಕಾಯಿ ಬೆಳೆದ ರೈತ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

BJPBJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

BJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

arest

Puttur: ವಂಚನೆ ಪ್ರಕರಣದ ಆರೋಪಿ ತೆಲಂಗಾಣದಲ್ಲಿ ಬಂಧನ

accident

Kundapura: ಬೈಕ್‌ಗಳ ಮುಖಾಮುಖೀ ಢಿಕ್ಕಿ ಒಬ್ಬ ಸಾವು, ಇಬ್ಬರು ಗಂಭೀರ

cow

Kundapura: ರಿಕ್ಷಾದಲ್ಲಿ ಬಂದು ಗೋ ಕಳ್ಳತನ

Untitled-1

Kundapura: ಹೈದರಾಬಾದ್‌ನಲ್ಲಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.