ಕೋವಿಡ್-19 ವಿರುದ್ಧ ಹೋರಾಟಕ್ಕೆ ಸನ್ನದ್ಧ
ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ವ್ಯವಸ್ಥೆ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಸಿದ್ಧ
Team Udayavani, Apr 13, 2020, 5:57 PM IST
ರಾಮನಗರ: ಕೋವಿಡ್ 19 ವೈರಸ್ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಕುಟುಂಬಗಳ ಆಹಾರಕ್ಕೆ ತೊಂದರೆಯಾಗಬಾರದು ಎಂದು ರಾಜ್ಯ ಸರ್ಕಾರ ಹಲವಾರು ಉಪಕ್ರಮ ಕೈಗೊಂಡಿದೆ. ಉಚಿತ ಅಕ್ಕಿ, ಗೋದಿ, ಹಾಲು ಪೂರೈಕೆ, ಆರೋಗ್ಯ ಸಮಸ್ಯೆಗಳಿಗೆ ಫಿವರ್ ಕ್ಲೀನಿಕ್‌ಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಿವೆ.
ತಪ್ಪೆಸಗಿದ ಡಿಪೋ ಮಾಲಿಕರ ಪರವಾನಿಗಿ ಅಮಾನತು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಿಪಿಎಲ್ ಪಡಿತರ ಕುಟುಂಬಗಳಿಗೆ ತಲಾ ಒಬ್ಬ ವ್ಯಕ್ತಿ ಎರಡು ತಿಂಗಳಿಗೆ ತಲಾ 10 ಕೇಜಿ ಅಕ್ಕಿ ಮತ್ತು ಪಡಿತರ ಚೀಟಿವೊಂದಕ್ಕೆ 4 ಕೇಜಿ ಗೋಧಿ ಕೊಡಲು ಆದೇಶಿಸಿದೆ. ಸರ್ಕಾರದ ಆದೇಶದಂತೆ ಜಿಲ್ಲಾದ್ಯಂತ ಶೇ.75ರಷ್ಟು ವಿತರಣೆಯಾಗಿದೆ. ಉಚಿತ ಪಡಿತರ ವಿತರಿಸುವಾಗ 20ರಿಂದ 40 ರೂ. ಹಣ ಪಡೆಯುವುದು. ಸೋಪು, ಎಣ್ಣೆ ಖರೀದಿ ಸುವಂತೆ ಒತ್ತಾಯಿಸಿದ ಪ್ರಕರಣಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಬೆರೆಳೆಣಿಕೆಯಷ್ಟು ಡಿಪೋ ಮಾಲಿಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಪ್ಪೆಸಗಿರುವ ನ್ಯಾಯಬೆಲೆ ಅಂಗಡಿಗಳ ಮಾಲಿಕರ ಪರವಾನಿಗಿ ಅಮಾನತು ಗೊಳಿಸಲಾಗಿದೆ. ಕೆಲವರಿಗೆ ಮೌಖೀಕ ಎಚ್ಚರ ಕೊಟ್ಟಿರುವುದಾಗಿ ಗೊತ್ತಾಗಿದೆ.
ಅಂತರ ಕಾಯ್ದುಕೊಳ್ಳದ ಜನತೆ: ತರಕಾರಿ, ಹಣ್ಣು ಕೊಳ್ಳಲು ಜನತೆ ಈಗಲೂ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಖರೀದಿಗೆ ಅವಕಾಶವಿದೆ. ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ರಾತ್ರಿ 8ರವರೆಗೆ ಅವಕಾಶ ವಿದ್ದರೂ, ಜನತೆ ಮುಗಿಬಿದ್ದು ಖರೀದಿ
ಮಾಡುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ದಿನಸಿ ಅಂಗಡಿಗಳಲ್ಲಿ ಗ್ರಾಹಕರು ಅಂತರ ಕಾಯ್ದು ಕೊಳ್ಳಲು ಗುರುತು ಹಾಕಿದ್ದರೂ ಕೆಲವೆಡೆ
ಪಾಲೆನಯಾಗುತ್ತಿದೆ. ಬಹುತೇಕ ಕಡೆ ಪಾಲನೆಯಾಗುತ್ತಿಲ್ಲ. ಇದು ವ್ಯಾಪಾರಿ ಗಳ ತಲೆ ನೋವಿಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ 10 ಸಾವಿರ ಲೀ. ಉಚಿತ ಹಾಲು: ಜಿಲ್ಲಾದ್ಯಂತ ಒಟ್ಟು 10 ಸಾವಿರ ಲೀಟರ್ ನಂದಿನಿ ಹಾಲು ಅರ್ಹ ಕುಟುಂಬಗಳಿಗೆ ವಿತರಣೆಯಾಗುತ್ತಿದೆ. ರಾಮನಗರಕ್ಕೆ 3000 ಲೀಟರ್, ಚನ್ನಪಟ್ಟಣಕ್ಕೆ 2000 ಲೀಟರ್, ಮಾಗಡಿಗೆ 1200 ಲೀಟರ್, ಕನಕಪುರಕ್ಕೆ 2000 ಲೀಟರ್ ಮತ್ತು ಬಿಡದಿಗೆ
1100 ಲೀಟರ್ ಮತ್ತು ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿಯ ಕಾರ್ಮಿಕರಿಗೆ 700 ಲೀಟರ್ ಹಾಲು ಪೂರೈಕೆಯಾಗುತ್ತಿದೆ.
ಐಸೋಲೇಷನ್‌ನಲ್ಲಿ 47 ಮಂದಿ…
ಜಿಲ್ಲಾ ಕೇಂದ್ರ ರಾಮನಗರದಲ್ಲಿ 100 ಹಾಸಿಗೆಗಳ ಕೋವಿಡ್-19 ಆಸ್ಪತ್ರೆ ಸ್ಥಾಪನೆಯಾಗಿದ್ದು, ಇಲ್ಲಿ 16 ಐಸಿಯು, 3 ವೆಂಟಿಲೇಟರ್‌ಗಳು ಆರೋಗ್ಯ ಸೇವೆಗೆ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಕೋವಿಡ್-19 ಆಸ್ಪತ್ರೆಯಲ್ಲದೆ ತಾಲೂಕು ಆಸ್ಪತ್ರೆಗಳಲ್ಲೂ ಕ್ವಾರಂಟೈನ್ ಮತ್ತು ಐಸೋಲೇಷನ್ ಕೇಂದ್ರಗಳು ಸ್ಥಾಪನೆಯಾಗಿವೆ. ಆರೋಗ್ಯ ಇಲಾಖೆಯ ಕ್ವಾರಂಟೈನ್ ಕೇಂದ್ರಗಳಲ್ಲಿ 19 ಮಂದಿ, ಹೋಂ ಕ್ವಾರಂಟೈನ್‌ನಲ್ಲಿ 114 ಮಂದಿ ಇದ್ದಾರೆ. ಐಸೋಲೇಷನ್ ಕೇಂದ್ರಗಳಲ್ಲಿ 47 ಮಂದಿ ದಾಖಲಾಗಿದ್ದಾರೆ. 40 ಮಂದಿ ಫಲಿತಾಂಶ ಬಂದಿದ್ದು ಎಲ್ಲವೂ ನೆಗಟಿವ್ ಆಗಿದೆ. ಜಿಲ್ಲೆಯಲ್ಲಿ 9 ಫಿವರ್ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.