ಗಲಭೆಕೋರರ ಸೇವೆಗೆ ಕೈದಿಗಳ ಬಳಕೆ: ಆರೋಪ
ಐವರು ಗಲಭೆ ಆರೋಪಿಗಳಿಗೆ ಕೋವಿಡ್ ; 17 ಕುಟುಂಬಕ್ಕೆ ಆತಂಕ: ಬಾಲಕೃಷ್ಣ
Team Udayavani, Apr 27, 2020, 5:26 PM IST
ಸಾಂದರ್ಭಿಕ ಚಿತ್ರ
ರಾಮನಗರ: ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳ ಪೈಕಿ 17 ಮಂದಿ ಇಲ್ಲೇ ಉಳಿಸಿಕೊಂಡು ಪಾದರಾಯನಪುರ ಗಲಭೆ ಆರೋಪಿಗಳ ಸೇವೆಗೆ ಬಳಸಿಕೊಳ್ಳಲಾಗಿತ್ತೆ?.. ಹೌದು ಅಂತಾರೆ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ! ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಹಿರಂಗಗೊಳಿಸಿದರು. ಸೇವೆಗೆ ಬಳಸಿಕೊಂಡಿದ್ದು, ಈ ಅಮಾಯಕರಿಗೂ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ. ಸರ್ಕಾರ ತಕ್ಷಣ ಈ ವಿಚಾರದಲ್ಲಿ ತನಿಖೆ ನಡೆಸಬೇಕು. 17 ಮಂದಿ ವಿಚಾರಣಾಧೀನ ಕೈದಿಗಳ ಕುಟುಂಬಗಳಿಗೆ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಗಲಭೆ ಆರೋಪಿಗಳನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವ ಮುನ್ನ ರಾಮನಗರದಲ್ಲಿದ್ದ 177 ಕಾರಾಗೃಹ ವಾಸಿಗಳ ಪೈಕಿ 17 ಮಂದಿಯನ್ನು ಉಳಿಸಿಕೊಂಡು ಮಿಕ್ಕವರನ್ನು ಪರಪ್ಪನ
ಅಗ್ರಹಾರಕ್ಕೆ ಸ್ಥಳಾರಂತರಿಸಲಾಗಿದೆ. ಆರೋಪಿಗಳಿಗೆ ಅಡುಗೆ ಮಾಡುವುದು ಇತ್ಯಾದಿ ಸೇವಾ ಕಾರ್ಯಗಳಿಗೆ ಅವರನ್ನು ಬಳಸಿಕೊಳ್ಳಲಾಗಿದೆ. ಗಲಭೆ ಆರೋಪಿಗಳ ಪೈಕಿ ಐವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದೀಗ ಈ 17 ಮಂದಿಯ ಕುಟುಂಬಗಳಿಗೂ ಆತಂಕ ಆರಂಭವಾಗಿದೆ. ಜಿಲ್ಲಾಡಳಿತ ತಕ್ಷಣ ಈ 17 ಮಂದಿಯ ಹೆಸರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತ ನಾಡಿದರು. ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಗಂಗಾಧರ್, ಪ್ರಮುಖ ಕೆ.ರಮೇಶ್, ಗಾಣಕಲ್ ನಟರಾಜ್, ನರಸಿಂಹಮೂರ್ತಿ, ಸಿ.ಎನ್.ವೆಂಕಟೇಶ್, ಎ.ಬಿ.ಚೇತನ್ ಕುಮಾರ್, ಮಂಜು (ಬಿಳಗುಂಬ ವಿಎಸ್‌ಎಸ್‌ಎನ್) ಮತ್ತಿತರರಿದ್ದರು.
ವ್ಯಾಪಾರಿಗಳ ನಷ್ಟ ಭರಿಸಲು ಆಗ್ರಹ
ರಾಮನಗರ ಹಸಿರು ವಲಯದಲ್ಲಿತ್ತು. ಹಸಿರು ವಲಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಡಿಲಿಕೆ ಮಾಡಿದ್ದವು. ಅದರಿಂದ ನಮಗೂ ಲಾಭವಾಗಲಿದೆ
ಎಂದು ಕೂಲಿ ಕಾರ್ಮಿಕರು, ವೃತ್ತಿಪರ ಕಾರ್ಮಿಕರು, ವ್ಯಾಪಾರಿಗಳು, ಕಾದು ಕುಳಿತಿದ್ದರು. ಆದರೆ ಗಲಭೆ ಆರೋಪಿಗಳನ್ನು ಜಿಲ್ಲೆಯ ಕಾರಾಗೃಹಕ್ಕೆ ತಂದು ಬಿಟ್ಟು. ಸರ್ಕಾರ ಇಲ್ಲೂ ಸೋಂಕಿನ ಭೀತಿ ಮೂಡಿಸಿದೆ. ಕೆಂಪು ವಲಯನ್ನಾಗಿ ಪರಿವರ್ತಿಸಿದೆ. ಅದರಿಂದ ಲಾಕ್ ಡೌನ್ ವಿನಾಯ್ತಿಯಿಂದ ಜನ ವಂಚಿತರಾಗಿದ್ದಾರೆ. ಬಡವರ ಬದುಕು ಶೋಚನೀಯ ಸ್ಥಿತಿ ತಲುಪುತ್ತಿದೆ. ಅದಕ್ಕೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ ಹೊಣೆ ಹೊರಬೇಕು. ಸರ್ಕಾರ, ವೈಯಕ್ತಿಕವಾಗಲಿ ಈ ಮಂದಿಗೆ ಆಗುತ್ತಿರುವ ನಷ್ಟ ಭರಿಸಿ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.