ಅನುದಾನ ತಾರತಮ್ಯ ವಿರೋಧಿಸಿ ಪ್ರತಿಭಟನೆ
Team Udayavani, Nov 22, 2022, 2:52 PM IST
ರಾಮನಗರ: ಕೇಂದ್ರದಲ್ಲಿ ಮೋದಿ ಇದ್ದ ಹಾಗೇ ಮಾಗಡಿಯಲ್ಲಿ ಶಾಸಕ ಎ. ಮಂಜುನಾಥ್ ಇಬ್ಬರ ಹೇಳಿಕೆಗಳೂ ಒಂದೇ ಆಗಿದೆ. ಇಬ್ಬರು ಸುಳ್ಳಿನಲ್ಲಿ ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ಕೂಡಲೇ ಅದನ್ನ ಸರಿಪಡಿಸಿಕೊಳ್ಳದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಬರುತ್ತಿದೆ. ಜನರು ತೀರ್ಮಾನಿ ಸುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.
ಬಿಡದಿ ಪುರಸಭೆಯಲ್ಲಿ ಅನುದಾನ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಮತ್ತು ಶಾಸಕರ ವರ್ತನೆ ವಿರೋಧಿಸಿ ಕಾಂಗ್ರೆಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಯಾವುದೇ ಶಾಸಕ ಅಥವಾ ಪ್ರತಿನಿಧಿ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡರೆ ಅದು ಅವರ ಸ್ವಂತದ್ದಲ್ಲ, ಸರ್ಕಾರದ ಹಣ. ಜನರು ಕಟ್ಟಿದ ತೆರಿಗೆಯಿಂದ ಬಂದ ಹಣವೇ ಆಗಿದೆ. ಆದರೂ, ಸರ್ಕಾರದಲ್ಲಿ ದುಡ್ಡಿಲ್ಲ, ಕೇವಲ ಬಾಯಿ ಮಾತಿಗೆ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ. ಹೊಸ ಯೋ ಜನೆಗಳೇನಾದರೂ ಇದ್ದರೆ ಹೇಳಲಿ, ಜೊತೆಗೆ 3 ಕೋಟಿ ಅನುದಾನ ಅವರೇನು ವಿಶೇಷವಾಗಿ ತಂದಿಲ್ಲ. ಎಲ್ಲಾ ಶಾಸಕರಿಗೆ ನೀಡಿದಂತೆ ಅವರಿಗೂ ನೀಡಿದ್ದಾರೆ. ಆದ್ದರಿಂದ ಎ. ಮಂಜುನಾಥ್ ಸುಳ್ಳು ಹೇಳುವುದನ್ನ ನಿಲ್ಲಿಸಬೇಕು ಎಂದರು.
ಸಾರ್ವಜನಿಕವಾಗಿ ಹೇಳಿ: ಸಂಪರ್ಕ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ವಿವರ ನೀಡುವುದಾಗಿ ಹೇಳಿದ್ದರು, ಆದರೆ, ತುಟಿಬಿಚ್ಚಲಿಲ್ಲ ಏಕೆ?. ಯಾವುದೇ ಜನಪ್ರತಿನಿಧಿಗಳು ಪೂಜೆ ಮಾಡಿ ಹೋಗುವುದಲ್ಲ. ಜನತೆಗೆ ಗೊತ್ತಾಗಬೇಕು ಏನೆಲ್ಲಾ ಕೆಲಸ ಮಾಡುತ್ತಿದ್ದಾರೆ ಎಂದು, ಬನ್ನಿ ಸಾರ್ವಜನಿಕವಾಗಿ ಹೇಳಿ ಎಂದು ಶಾಸಕರಿಗೆ ಸವಾಲು ಹಾಕಿದರು.
ಶಾಸಕರು ಮತ್ತು ಬಿಡದಿ ಪುರಸಭೆ ಆಡಳಿತಾ ಧಿಕಾರಿಗಳಾಗಿ ರುವ ಉಪವಿಭಾಗಾಧಿಕಾರಿಗಳಿಗೆ ಕನಿಷ್ಠ ಜ್ಞಾನವಿಲ್ಲ. ಎಲ್ಲಾ ಚುನಾಯಿತ ಪ್ರತಿನಿಧಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ ಬೇಕು ಎಂಬ ಬಗ್ಗೆ ತಿಳುವಳಿಕೆ ಇಲ್ಲ. ಬಿಡದಿ ಪುರ ಸಭೆಯಲ್ಲಿ ಪ್ರತಿನಿಧಿಗಳ ತಂಡ ಇಲ್ಲದಿರುವುದು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಅರ್ಧ ದಿನಕ್ಕೆ ಜಾಗ ಖಾಲಿ: ರಾಮನಗರ ಉಪ ವಿಭಾಗಾಧಿಕಾರಿಗಳು ವಾರದಲ್ಲಿ ಎರಡು ದಿನ ಮಾತ್ರ ಕಚೇರಿಗೆ ಬರುತ್ತಾರೆ. ಅದೂ ಅರ್ಧ ದಿನಕ್ಕೆ ಜಾಗ ಖಾಲಿ ಮಾಡುತ್ತಾರೆ. ಯಾವಾಗ ಕೇಳಿ ದರೂ, ಕೋರ್ಟ್ ಎನ್ನುತ್ತಾರೆ. ಅವರ ಕೋರ್ಟ್ ಇರೋದು ಪದ್ಮನಾಭನಗರದ ಅಶೋಕ್ ಮನೆ ಯಲ್ಲಿ. ಅವರ ಸ್ವಂತ ಕೆಲಸ ಮಾಡಿಕೊಡುವುದ ಕ್ಕಾಗಿ ಇವರನ್ನ ಇಲ್ಲಿಗೆ ವರ್ಗಾವಣೆ ಮಾಡಿಸಿದ್ದಾರೆ. ನಾವು ಕೂಡ 1965ರಿಂದ ಅದೆಷ್ಟು ಎಸಿಗಳನ್ನು ಕಂಡಿದ್ದೇವೆ. ಇಂತಹ ಉಪವಿಭಾಗಾಧಿಕಾರಿಗಳು ಯಾರೂ ಇರಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಾವು ಎಲ್ಲದಕ್ಕೂ ಸಿದ್ಧ: ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಬಿಡದಿ ಪುರಸಭೆಗೆ ಬರುವ ಹಣ ಸರ್ಕಾರದ್ದು. ಶಾಸಕರ ಸ್ವಂತ ಹಣವಲ್ಲ. ಅವರು ಎಲ್ಲೋ ಕುಳಿತು ತೀರ್ಮಾನ ಮಾಡಲು ಬರಲ್ಲ. ಆದರೆ, ಅದನ್ನು ಮುಂದು ವರಿಸಿ, ಮತ್ತಷ್ಟು ಅವಾಂತರ ಸೃಷ್ಟಿಸಿದ್ದಾರೆ. ಶಾಸಕರೇ ನಾನು ನಿಮಗಿಂತ ಮೊದಲೇ ಎರಡು ಭಾರಿ ಜೆಡಿಎಸ್‌ನಲ್ಲೇ ಶಾಸಕನಾಗಿದ್ದೇನೆ. ನೀವು ಕ್ಷೇತ್ರದ ಪ್ರತಿಯೊಬ್ಬರಿಗೂ ಶಾಸಕರಾಗಿರಬೇಕು. ಕಾಂಗ್ರೆಸ್ ಪುರಸಭಾ ಸದಸ್ಯರು ಇರುವ ವಾರ್ಡ್ ನ ನ ಜನರು ನಿಮಗೆ ಮತ ನೀಡಿಲ್ಲವೆ?. ಶಾಸಕ ಮಂಜುನಾಥ್ ಉತ್ತರ ಕುಮಾರ ಇದ್ದಹಾಗೆ. ತಾಕತ್ತಿನ ಬಗ್ಗೆ ಮಾತನಾಡಿದ್ದಾರೆ. ಅವರು ಅಭಿವೃದ್ಧಿ ವಿಚಾರಗಳ ಚರ್ಚೆಗೆ ಬರಲ್ಲ. ಅವರದ್ದು ಪಲಾಯನವಾದ. ಅಂತಹ ತಾಕತ್ತನ್ನು ನಾವು ಕಂಡಿದ್ದೇವೆ. ವೇದಿಕೆಗೆ ಬನ್ನಿ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಕ್ರಮ ಕೈಗೊಳ್ಳುವ ಭರವಸೆ: ಬಿಡದಿ ಪುರಸಭೆ ಬಳಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯಕ್ಕೆ ಉತ್ತರಿಸುವಲ್ಲಿ ಚೀಫ್ ಆಫೀಸರ್ ಗೊಂದಲದ ಹೇಳಿಕೆ ನೀಡಿದ್ದರಿಂದ ಅವರ ವಿರುದ್ಧ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಮಂಜುನಾಥ್ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ, ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಂಡು ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ಮುಖಂಡ ಚಂದ್ರಶೇಖರ್.ಎಲ್ ಸೇರಿದಂತೆ ಬಿಡದಿ ಪುರಸಭೆ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.
ಎಲ್ಲರೂ ತೆರಿಗೆ ಕಟ್ಟುತ್ತಾರೆ. ಬಿಡದಿ ಪುರಸಭೆ ವಾರ್ಡ್‌ಗಳಿಗೆ ಸಮಾನ ಹಂಚಿಕೆಯಾಗಬೇಕಿದ್ದ ಹಣ, ಕೇವಲ ಜೆಡಿಎಸ್ ಸದಸ್ಯರು ಪ್ರತಿನಿಧಿಸಿ ಜಯ ಗಳಿಸಿರುವ ವಾರ್ಡ್‌ಗಳಿಗೆ ಮಾತ್ರ ನೀಡಿದ್ದು, ಅಕ್ಷಮ್ಯವಾಗಿದೆ. ಕೂಡಲೇ ಸರಿಪಡಿಸಬೇಕು. ಇಲ್ಲವಾದರೆ ಕೈ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಲು ಬಿಡಲ್ಲ. – ಸಿ.ಎಂ.ಲಿಂಗಪ್ಪ, ವಿಧಾನ ಪರಿಷತ್ ಸದಸ್ಯ
ಸರ್ಕಾರದ ಅನುದಾನ ಹಂಚಿಕೆ ಯಲ್ಲಿ ಶಾಸಕರ ಒತ್ತಡಕ್ಕೆ ಅಧಿಕಾರಿ ಗಳು ಮಣಿದಿದ್ದಾರೆ. ಕೂಡಲೇ ವ್ಯತ್ಯಾಸ ಸರಿಪಡಿಸಬೇಕು. ಇಲ್ಲವಾದರೆ ಪ್ರತಿಭ ಟನೆ ತೀವ್ರಸ್ವರೂಪ ಪಡೆಯುತ್ತದೆ. ಅಲ್ಲದೆ, ಯಾವ ವಾರ್ಡ್‌ಗೆ ಅನುದಾನ ನೀಡಿಲ್ಲ, ಅಂತಹ ವಾರ್ಡ್‌ಗಳ ಜನ ತೆರೆಗೆ ಕಟ್ಟದಂತೆ ಮಾಡಿ ಹೋರಾಟ ಮಾಡುತ್ತೇವೆ. – ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.