ಬೆಸ್ಕಾಂ ನೌಕರರಿಂದ ಪ್ರತಿಭಟನೆ

Team Udayavani, Oct 6, 2020, 2:59 PM IST

ಬೆಸ್ಕಾಂ ನೌಕರರಿಂದ ಪ್ರತಿಭಟನೆ

ರಾಮನಗರ: ಸರ್ಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್‌ ಪ್ರಸರಣ ನಿಗಮಗಳನ್ನು (ಎಸ್ಕಾಂ) ಖಾಸಗಿಕರಣಗೊಳಿಸಲು ಮುಂದಾಗಿರುವ ಸರ್ಕಾರದ ನೀತಿ ಖಂಡಿಸಿ ನಗರದಲ್ಲಿ ಬೆಸ್ಕಾಂ ನೌಕರರು ಕಪ್ಪು ಪಟ್ಟಿಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ನಂತರ ಕರ್ತವ್ಯಕ್ಕೆ ತೆರಳಿದರು.

ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಜಮಾಯಿಸಿದ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಹಾಗೂ ಲೈನ್‌ಮೆನ್‌ ಗಳು ಎಸ್ಕಾಂಗಳನ್ನು ಖಾಸಗಿ ಸ್ವಾಮ್ಯಕ್ಕೆ ಒಪ್ಪಿಸಲು ಉದ್ದೇಶಿಸಿರುವುದು ಸರಿಯಲ್ಲ. ಎಸ್ಕಾಂಗಳು ಖಾಸಗಿಯವರ ಪಾಲಾದರೆ ಅನೇಕರ ನೌಕರಿಗೆ ಕತ್ತರಿ ಬೀಳುತ್ತದೆ. ಅನೇಕರು ಬೀದಿಗೆ ಬೀಳುತ್ತಾರೆ. ಅಲ್ಲದೆ ಸರ್ಕಾರದ ಭಾಗ್ಯಜ್ಯೋತಿ, ಕುಟಿರ ಜ್ಯೋತಿ, ರೈತರ ಪಂಪ್‌ಸೆಟ್‌ ಗಳಿಗೆ ಉಚಿತ ವಿದ್ಯುತ್‌ಗೆ ಸಂಚಕಾರ ಬರಲಿದೆ ಎಂದು ದೂರಿದರು.

50 ಸಾವಿರ ನೌಕರರ ಭವಿಷ್ಯದ ಪ್ರಶ್ನೆ!: ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಸ್ಕಾಂ ಎಒ ಸತೀಶ್‌, ಎಸ್ಕಾಂಗಳನ್ನು ಖಾಸಗಿಕರಣ ಮಾಡುತ್ತಿರುವುದು ದುರಾದೃಷ್ಟಕರ. ರಾಜ್ಯದ ಎಸ್ಕಾಂಗಳಲ್ಲಿ 50 ಸಾವಿರ ಮಂದಿ ಕಾರ್ಯನಿ ರ್ವಹಿಸುತ್ತಿದ್ದಾರೆ. 5 ಸಾವಿರ ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ಖಾಸಗಿಯಾದರೆ ಇವರೆಲ್ಲರ ಭವಿಷ್ಯ ಏನು ಎಂಬ ಪ್ರಶ್ನೆ ಎದ್ದಿದೆ ಎಂದರು.

ಖಾಸಗಿಯಾದರೆ ಭವಿಷ್ಯ ಘೋರ!: ಸಹಾಯಕ ಇಂಜಿನಿಯರ್‌ ಪ್ರಭಾಕರ್‌ ಮಾತನಾಡಿ, ವಿದ್ಯುತ್‌ ಸರಬರಾಜು ಸಂಸ್ಥೆಗಳು ಖಾಸಗಿಕರಣವಾದರೆ ಕೇವಲ ನೌಕರರಿಗೆ ಮಾತ್ರವಲ್ಲ ರೈತರಿಗೂ ತೊಂದರೆಯಾಗಲಿದೆ. ಪ್ರತಿಯೊಂದು ಕುಟುಂಬದ ಮೇಲೂ ಪರಿಣಾಮಬೀರಲಿದೆ. ಸದ್ಯಬಡ ಕುಟುಂಬಗಳಿಗೆ ವಿವಿಧ ಯೋಜನೆಗಳ ಮೂಲಕ ಮಾಸಿಕ 40 ಯೂನಿಟ್‌ವಿದ್ಯುತ್‌ ಉಚಿತವಾಗಿ ನೀಡಲಾಗುತ್ತಿದೆ. ರೇಷ್ಮೆ ಉದ್ಯಮದಲ್ಲಿ ತೊಡಗಿಸಿ ಕೊಂಡಿರುವ ಹುರಿ ಮಿಷಿನ್‌ ಮುಂತಾದ ಕಾರ್ಖಾನೆಗಳಿಗೆ ನೀಡು ತ್ತಿರುವ ಸಬ್ಸಿಡಿಗಳು ನಿಲ್ಲುತ್ತವೆ.

ಹೀಗಾಗಿ ನಾಗರಿಕರು ತಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘದಕೇಂದ್ರ ಸಮಿತಿ ಕಾರ್ಯಕಾರಣಿಸಮಿತಿ ಸದಸ್ಯಹಾಗೂ ಸ್ಥಳೀಯ ಘಟಕದ ಅಧ್ಯಕ್ಷ ಸೋಮಶೇ ಖರ್‌ ಮಾತನಾಡಿ, ಸರ್ಕಾರದ ಖಾಸಗಿಕರಣ ನೀತಿಯನ್ನು ವಿರೋಧಿಸಿದರು.

ಪ್ರತಿಭಟನೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಕಾರಣಿ ಸಮಿತಿ ಸದಸ್ಯ ಗೋಪಾಲಸ್ವಾಮಿ, ಪ್ರಮುಖರಾದ ಚಂದನಾ, ಮಹದೇವಮ್ಯ, ಶೀಲಾ,ನಾಗರಾಜ್‌ (ಗಾಂಧಿ), ಶಿವಲಿಂಗಯ್ಯ. ಕೆ.ಎನ್‌, ಸಿ.ವಿ.ಬಾಬು, ಪ್ರಕಾಶ್‌.ಸಿ.ಕೆ. ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.