ಸೋಲೂರು ಹಾಲು ಉತ್ಪಾದಕರ ಪ್ರತಿಭಟನೆ

ಹಾಲು ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ: ಡೇರಿ ಅವ್ಯವಹಾರ ಬೆಳಕಿಗೆ

Team Udayavani, Oct 16, 2021, 4:58 PM IST

ಹಾಲು ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ- ಡೇರಿ ಅವ್ಯವಹಾರ ಬೆಳಕಿಗೆ

ಮಾಗಡಿ: ಹಾಲು ಉತ್ಪಾದಕ ಮಹಿಳೆಯರು ಹಾಲಿನ ನಷ್ಟದ ಅನ್ಯಾಯದ ವಿರುದ್ಧ ಪ್ರತಿಭಟನಾ ಧರಣಿ ನಡೆಸಿದ್ದರಿಂದ ಡೇರಿಯ ಕಾರ್ಯದರ್ಶಿ ಅವರ ಅವ್ಯವಹಾರ ಬೆಳಕಿಗೆ ಬಂತು. ಕಾರ್ಯದರ್ಶಿ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಂಡರೆ ಮಾತ್ರ ಸಮಸ್ಯೆ ಬಗೆ ಹರಿಯುತ್ತದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ತಾಲೂಕಿನ ಸೋಲೂರು ಬಳಿ ಇರುವ ಹಾಲು ಶಿಥಲೀಕೇಂದ್ರದ ಬಳಿ ಹಾಲು ಖರೀದಿಸದೆ ತಡೆಹಿಡಿದಿರುವುದರ ವಿರುದ್ಧ ಬಸವನಪಾಳ್ಯದ ಹಾಲು ಉತ್ಪಾದಕ ಮಹಿಳಾ ಸಂಘದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ತಿಪ್ಪಸಂದ್ರ ಹೋಬಳಿ ಬಸವನಪಾಳ್ಯದಲ್ಲಿ 15 ವರ್ಷಗಳ ಹಿಂದೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಪ್ರಾರಂಭಿಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಹಾಲು ಉತ್ಪಾದಕರಿಗೆ ಡೇರಿ ಆಡಳಿತ ಮಂಡಳಿ ಯಾವುದೇ ಸವಲತ್ತು ಕೊಟ್ಟಿಲ್ಲ.

ಕಾರ್ಯ ದರ್ಶಿ ಧನಲಕ್ಷ್ಮೀ ಮಾಹಿತಿ ಕೊಟ್ಟಿಲ್ಲ, ಸಂಸ್ಥೆಯಿಂದ ಪಡೆದ ಪೀಡ್ಸ್‌ನ ಸುಮಾರು 3.80ಲಕ್ಷ ರೂ.ಹಣ ಸಂದಾಯ ಮಾಡದೆ ಬಾಕಿ ಉಳಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಡೇರಿಯಲ್ಲಿ ಕಾರ್ಯದರ್ಶಿ ಪತಿಯದ್ದೇ ದರ್ಬಾರ್‌. ಹತ್ತಾರು ವರ್ಷಗಳಿಂದ ಜಮಾ ಖರ್ಚು ಕೊಟ್ಟಿಲ್ಲ, ಭಾರಿ ಅವ್ಯವಹಾರ ನಡೆಸಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ. ಡೇರಿಯಲ್ಲಿ ವ್ಯವಹಾರಿಕ ಲೆಕ್ಕ ದಾಖಲಿಸಿಲ್ಲ.

ಇದನ್ನೂ ಓದಿ:- ಬಾಳಗಾರಿನ  ಪಂಚವಟಿಯಲ್ಲಿ ಮಾಯಾಮೃಗ!

ಕೇಳಿದರೆ ಅವ್ಯಾಚವಾಗಿ ನಿಂಧಿಸುತ್ತಾರೆ. ಜಮಾ ಖರ್ಚು ದಾಖಲಿಸದಿದ್ದರೆ ಅಧಿಕಾರಿಗಳಿಗೂ ಸಂಬಳ ನಿಲ್ಲಿಸುವಂತೆ ಸಂಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಲೆಕ್ಕ ಕೇಳಲು ಹೋದ ಅಧಿಕಾರಿಗಳ ವಿರುದ್ಧ ಕಾರ್ಯದರ್ಶಿ ಪತಿ ಇತರರು ತಿರುಗಿಬಿದ್ದು, ಮೊಬೈಲ್‌ ಕಸಿದು ಹಲ್ಲೆ ನಡೆಸಿದ್ದಾರೆ. ಹಾಲು ಖರೀದಿಸದಂತೆ ತಡೆಹಿಡಿದಿದ್ದಾರೆ. ಡೇರಿ ಕಾರ್ಯದರ್ಶಿ ಧನಲಕ್ಷ್ಮೀ ಅವರಿಂದ ಹಾಲು ಪೂರೈಕೆ ಮಾಡುವ ಡೇರಿ, ರೈತ ಮಹಿಳೆಯರಿಗೆ, ಸಂಸ್ಥೆಗೆ ಅನ್ಯಾಯವಾಗಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಪ್ರತಿ ಭಟನಾಕಾರರಿಗೆ ಮನವರಿಕೆ ಮಾಡಿದರು.

ಹಲವು ಭಾರಿ ನ್ಯಾಯ ಪಂಚಾಯ್ತಿ ನಡೆಸಿದರೂ ಕಾರ್ಯದರ್ಶಿ ಪತಿ ತಿದ್ದುಕೊಂಡಿಲ್ಲ ಎಂದರು. ಸೋಲೂರು ಪ್ರತಿಭಟನಾ ಸ್ಥಳಕ್ಕೆ ಶಾಸಕ ಎ.ಮಂಜುನಾಥ್‌ ಭೇಟಿ ನೀಡಿ ಅಧಿಕಾರಿಗಳು, ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ರೈತ ಮಹಿಳೆಯರೊಂದಿಗೆ ಡೇರಿ ಸಮಸ್ಯೆ ಕುರಿತು ಚರ್ಚಿಸಿದರು.ಸಮಸ್ಯೆ ಬಗೆಹರಿಸಿ ಡೇರಿಯಲ್ಲಿ ಹಾಲು ಶೇಖರಣೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಎ.ಮಂಜುನಾಥ್‌ ಅವರಿಗೆ ಡೇರಿಯ ಅವ್ಯವಹಾರದ ಬಗ್ಗೆ ಶಿಥಲೀಕೇಂದ್ರದ ಉಪ ವ್ಯವಸ್ಥಾಪಕ ಜವರಯ್ಯ ಮಾಹಿತಿ ನೀಡಿದರು.

ರಾಜಕೀಯ ತಿರುವು: ಬಸನಪಾಳ್ಯದ ಡೇರಿ ವಿಚಾರ ರಾಜಕೀಯ ತಿರುವು ಪಡೆದುಕೊಂಡು ಪ್ರತಿಭಟನಾ ಧರಣಿ ತಾರಕ್ಕೇರಿತ್ತು. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾ ಧರಣಿ ನಡೆಯಿತು.

ಆರೋಪ: ರೈತ ಮುಖಂಡ ಗಂಗೋನಹಳ್ಳಿ ಲಿಂಗೇಗೌಡ ಮಾತನಾಡಿ, ಡೇರಿಯಲ್ಲಿ ಆಗಿರುವ ಅವ್ಯವಹಾರ ಬಮೂಲ್‌ ಅಧ್ಯಕ್ಷ ಮತ್ತು ಅಧಿಕಾರಿಗಳ ಗಮನಕ್ಕೆ ಬಂದರೂ ಏಕೆ ರೈತ ಮುಖಂಡರಿಗೆ ತಿಳಿಸಲಿಲ್ಲ, ಕಾರ್ಯದರ್ಶಿ ಧನಲಕ್ಷ್ಮೀ ಅವರ ವಂಚನೆ ಬಗ್ಗೆ ರೈತರ ಗಮನಕ್ಕೆ ತಂದಿಲ್ಲ. ಹಾಲಿನ ಗುಣಮಟ್ಟ ಸರಿಯಿಲ್ಲ ಎಂದು ವಾಪಸ್ಸು ಕಳಿಸಿದ್ದಾರೆ ಎಂದು ಆರೋಪಿಸಿದರು. ಬಮೂಲ್‌ ನಿರ್ದೇಶಕ ಕೆ.ಬಿ.ರಾಜಣ್ಣ, ಕೆಡಿಪಿ ಸದಸ್ಯ ನಾಗರಾಜು, ಸಾಗರ್‌, ನೂರಾರು ರೈತ ಮುಖಂಡರು, ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.