ಮರಾಠ ಪ್ರಾಧಿಕಾರ ವಿರೋಧಿಸಿ 9ರಂದು ರೈಲ್ ರೋಕೋ
Team Udayavani, Jan 5, 2021, 3:26 PM IST
ರಾಮನಗರ: ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಸಂಚು, ಪಿತೂರಿ ಮಾಡಿ ಸ್ಥಾಪಿಸಿರುವ ಮರಾಠಿ ಪ್ರಾಧಿಕಾರವನ್ನು ವಿರೋಧಿಸಿ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಜ.9ರಂದು ರೈಲ್ ರೋಕೋ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.
ನಗರದ ಐಜೂರು ವೃತ್ತದಲ್ಲಿ ಮರಾಠ ಪ್ರಾಧಿಕಾರ ವಿರೋಧಿಸಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪರ ರಾಜೀನಾಮೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.ಚುನಾವಣೆಗಳಲ್ಲಿ ತಮ್ಮವರನ್ನು ಗೆಲ್ಲಿಸಿಕೊಳ್ಳಲುಮರಾಠ ಪ್ರಾಧಿಕಾರ ಸ್ಥಾಪನೆಯ ಸಂಚುರೂಪಿಸಿದ್ದಾರೆ. ಪ್ರಾಧಿಕಾರವನ್ನು ವಿರೋಧಿಸಿ ಈಗಾಗಲೆ ರಾಜ್ಯ ಬಂದ್ ಮಾಡಿ ಹೋರಾಟ ಮಾಡಲಾಗಿದೆ. ಇದೀಗ ರೈಲ್ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕು ಎಂಬ ಚಿಂತನೆ ಯಾವ ಸರ್ಕಾರಕ್ಕೂ ಇರಲಿಲ್ಲ. ಈಸರ್ಕಾರಕ್ಕೆ ಬಂದಿದೆ. ಬಸವಕಲ್ಯಾಣ ಕ್ಷೇತ್ರವನ್ನು ಇಲ್ಲಿಯವರೆಗೂ ಮರೆತಿದ್ದ ಮುಖ್ಯಮಂತ್ರಿಗಳಿಗೆ ಅಲ್ಲಿ ಚುನಾವಣೆ ಎದುರಾಗುತ್ತಿದ್ದಂತೆ ನೆನೆಪಾಗಿ ಬಿಟ್ಟಿದೆ. ಅಲ್ಲಿ ಜ.6ರಂದು ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸುತ್ತಾರಂತೆ. ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡುತ್ತಿರುವುದು ಅಲ್ಲಮ ಪ್ರಭುಗಳ ಅನುಭವ ಮಂಟಪ ಅಲ್ಲ, ಯಡಿಯೂರಪ್ಪನವರ ಅನುಭವ ಮಂಟಪ ಎಂದು ಟೀಕಾ ಪ್ರಹಾರ ನಡೆಸಿದರು.
ಬಿಎಸ್‌ವೈ ನಿರ್ಮಿಸಲು ಹೊರಟಿರುವ ಅನುಭವ ಮಂಟಪಬಸವಣ್ಣನಿಗೆ, ಅಲ್ಲಮ ಪ್ರಭುಗಳಿಗೆ ಮಾಡುತ್ತಿರುವ ಅಪಚಾರ ಹೀಗಾಗಿ ಈ ಅಪಚಾರವನ್ನು ವಿರೋಧಿಸಿ ಜ.6ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಬಸವಣ್ಣನವರ ಪ್ರತಿಮೆಯ ಮುಂಭಾಗ ಮಲಗಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ಅನುಭವನ ಮಂಟಪದಲ್ಲಿ ಅಲ್ಲಮಪ್ರಭುಗಳು, ಅಕ್ಕಮಹಾದೇವಿಯವರು, ಬಸವಣ್ಣನವರು ಎಲ್ಲಿ ಕುಳಿತುಕೊಳ್ಳುತ್ತಿದ್ದರು ಎಂಬುದು ಗೊತ್ತೆ ಎಂದು ಯಡಿಯೂರಪ್ಪರನ್ನು ಪ್ರಶ್ನಿಸಿದರು.
ಬಸವಣ್ಣನವರ ಬಗ್ಗೆ ಯಡಿಯೂರಪ್ಪರಿಗೆ ಏನೂ ಗೊತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ 100 ಕೋಟಿ ಬಿಡುಗಡೆ ಮಾಡಿದ್ದಾರೆ. ರಾಜ್ಯಕ್ಕೆ ಅಪಚಾರಮಾಡುವ ಈ ನಾಟಕ ನಿಲ್ಲಿಸಿ ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಗ್ರಾಪಂಗಳು ಪ್ರಜಾಪ್ರಭುತ್ವದ ಬೇರುಗಳು.ಆದರೆ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ವೇತನ ನಾಚಿಕೆಯಾಗುವಂತಹದ್ದು, ಅಧ್ಯಕ್ಷರಿಗೆ ಮಾಸಿಕ 3 ಸಾವಿರ, ಉಪಾಧ್ಯಕ್ಷರಿಗೆ 2 ಮತ್ತು ಸದಸ್ಯರಿಗೆ 1 ಸಾವಿರ ವೇತನ. ಸದಸ್ಯರಿಗೆ ಸಿಗುವ ವೇತನ ದಿನಕ್ಕೆ ಕೇವಲ 33 ರೂಪಾಯಿ. ಈ ದುಡ್ಡಿನಲ್ಲಿ ಸದಸ್ಯರು ತಮ್ಮ ಕುಟುಂಬಕ್ಕೆ ಕಡುಬು ಕೊಳ್ಳಲು ಸಹ ಆಗೋಲ್ಲ ಎಂದರು.
ಪೌರಕಾರ್ಮಿಕರ ವೇತನಕ್ಕೆ ಹೋಲಿಸಿದರೆ ಇದು ನಾಚಿಕೆಯಾಗುತ್ತೆ ಹರಿಹಾಯ್ದರು. ಗ್ರಾಪಂ ಅಧ್ಯಕ್ಷರಿಗೆ ಮಾಸಿಕ ಕನಿಷ್ಠ 20 ಸಾವಿರ ಕೊಡಬೇಕು. ಅದರಂತೆ ಉಪಾಧ್ಯಕ್ಷರಿಗೂ, ಸದಸ್ಯರಿಗೂ ವೇತನ ದೊರೆಯಬೇಕು ಎಂದರು.ಪ್ರತಿಭಟನೆಯಲ್ಲಿ ಸ್ಥಳೀಯ ಪ್ರಮುಖರಾದ ಜಗದೀಶ್, ಜಯಕುಮಾರ್,ಸುರೇಶ್‌ಜಯರಾಂ, ತ್ಯಾಗರಾಜ್, ಚಂದ್ರಶೇಖರ್, ಭಾಸ್ಕರ್, ಪಾರ್ಥಸಾರಥಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.