ಜಿಲ್ಲೆಗೂ ರಾಜ್‌ಗೂ ಅವಿನಾಭಾವ ಸಂಬಂಧ

ಇಂದು ವರನಟ ಡಾ.ರಾಜ್‌ಕುಮಾರ್‌ ಜನ್ಮದಿನಾಚರಣೆ • ರಾಮನಗರದ ವಿವಿಧೆಡೆ ಚಿತ್ರ ಚಿತ್ರೀಕರಣ

Team Udayavani, Apr 24, 2019, 2:13 PM IST

ramnagar-tdy-3

ರಾಮನಗರ: ಏ.24 ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್‌ ಅವರ 91ನೇ ಜನ್ಮದಿನಾಚರಣೆ. ರಾಮನಗರಕ್ಕೂ ಡಾ.ರಾಜ್‌ ಕುಮಾರ್‌ ಅವರಿಗೂ ಇರುವ ಅವಿನಾಭಾವ ಸಂಬಂಧವಿದೆ ಎನ್ನುವುದಕ್ಕೆ ಅವರ ಚಲನಚಿತ್ರಗಳು, ವಿವಿಧ ಅಭಿವೃದ್ಧಿಗೆ ಸಹಕರಿಸಿದ ದಾಖಲೆಗಳು ಸಾಕ್ಷಿಯಾಗಿದೆ.

ಮುತ್ತೆತ್ತಿ ಆಂಜನೇಯನ ಭಕ್ತ: ಜಿಲ್ಲೆಯ ಕನಕಪುರ ತಾಲೂಕಿನ ಮುತ್ತೆತ್ತಿ ಅರಣ್ಯ ಪ್ರದೇಶದಲ್ಲಿ ಶ್ರೀ ಆಂಜನೇಯನ ದೇವಾಲಯವಿದೆ. ಮುತ್ತುರಾಜ್‌ ಡಾ.ರಾಜ್‌ಕುಮಾರ್‌ ಮೂಲ ಹೆಸರು. ಅವರು ಬದುಕಿದ್ದಾಗ ಕುಟುಂಬ ಸಮೇತರಾಗಿ ಈ ದೇವಾಲಯಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿಕೊಳ್ಳುತ್ತಿದ್ದರು. ದೇವಸ್ಥಾನದ ಅಭಿವೃದ್ಧಿಗೂ ಅವರ ಕೊಡುಗೆ ಇದೆ ಎಂಬುದು ದೇವಾಲಯದ ಭಕ್ತರ ಅಭಿಪ್ರಾಯ.

ಜಿಲ್ಲೆಯಲ್ಲಿ ಚಿತ್ರೀಕರಣ: ಡಾ.ರಾಜ್‌ ಕುಮಾರ್‌ ಅವರ ಅನೇಕ ಚಿತ್ರಗಳು ರಾಮನಗರ ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿವೆ. ನಾ ನಿನ್ನ ಮರೆಯಲಾರೆ, ಹುಲಿಯ ಹಾಲಿನ ಮೇವು, ಜಗ ಮೆಚ್ಚಿದ ಮಗ, ದೃವತಾರೆ, ದೇವತಾ ಮನುಷ್ಯ, ನಾನೊಬ್ಬ ಕಳ್ಳ, ಅಪೂರ್ವ ಸಂಗಮ, ಶೃತಿ ಸೇರಿದಾಗ, ಕೆರಳಿದ ಸಿಂಹ, ಲಗ್ನ ಪತ್ರಿಕೆ, ಯಾರಿವನು, ಸಂಪತ್ತಿಗೆ ಸವಾಲ್, ತಾಯಿಗೆ ತಕ್ಕ ಮಗ ಮುಂತಾದ ಚಿತ್ರಗಳು ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿವೆ.

ಶ್ರೀ ರಾಮದೇವರ ಬೆಟ್ಟ, ಕೆಂಗಲ್, ಸಾವನದುರ್ಗ ಬೆಟ್ಟ ಮತ್ತು ಅರಣ್ಯ ಪ್ರದೇಶ, ಮಾಗಡಿ ಶ್ರೀರಂಗನಾಥ ದೇವಾಲಯ, ಬೈರಮಂಗಲ, ಮಂಚನಬಲೆ, ಚನ್ನಪಟ್ಟಣ, ಮಾಗಡಿ, ಕನಕಪುರ ತಾಲೂಕುಗಳಲ್ಲಿಯೂ ಡಾ.ರಾಜ್‌ ಅವರ ಚಿತ್ರಗಳು ಚಿತ್ರೀಕರಣಗೊಂಡಿದೆ.

ಭವನ ನಿರ್ಮಾಣಕ್ಕೆ ಸಂಗೀತ ಕಾರ್ಯಕ್ರಮ: ರಾಮನಗರದಲ್ಲಿ ನಗರಸಭೆಯ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಆರ್ಥಿಕ ಸಂಪನ್ಮೂಲದ ಕೊರತೆ ಉಂಟಾಗಿತ್ತು. ಈ ಕೊರತೆ ನೀಗಿಸಲು ಆಗ ಅಧ್ಯಕ್ಷರಾಗಿದ್ದ ಸೈಯದ್‌ ಜಿಯಾವುಲ್ಲಾ ಮತ್ತು ತಂಡ ಡಾ.ರಾಜ್‌ ಕುಮಾರ್‌ ಮೊರೆ ಹೋದರು. ಸಂಗೀತ ಸಂಜೆ ನಡೆಸಿಕೊಟ್ಟು ಬರುವ ಆದಾಯವನ್ನು ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ಡಾ.ರಾಜ್‌ ಒಪ್ಪಿಗೆ ಕೊಟ್ಟರು. ಅದರಂತೆ ಅವರೇ ಹೆಚ್ಚು ಕಾಳಜಿವಹಿಸಿ 1994ರಲ್ಲಿ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. 3 ಲಕ್ಷಕ್ಕು ಅಧಿಕ ಮೊತ್ತದ ಹಣವನ್ನು ಭವನ ನಿರ್ಮಾಣಕ್ಕೆ ತಲುಪಿಸಿದ್ದು, ಇಂದು ರಾಮನಗರದ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.

ಪುನೀತ್‌ ಫಾರಂ: ವರನಟ ಡಾ.ರಾಜ್‌ ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯಲ್ಲಿ ತೋಟವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ತೋಟಕ್ಕೆ ಪುನಿತ್‌ ಫಾರಂ ಎಂದು ಹೆಸರಿಟ್ಟಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ಬದಿಯಲ್ಲೇ ಈ ಫಾರಂ ಇದೆ. ಬಿಡುವಿನ ವೇಳೆಯಲ್ಲಿ ಕುಟುಂಬ ಸಮೇತ ಈ ತೋಟದಲ್ಲಿ ನಿರ್ಮಿಸಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೀಗೆ ವಿಶ್ರಾಂತಿಗೆ ಆಗಮಿಸಿದಾಗ ಬಿಡದಿಯ ತಟ್ಟೆ ಇಡ್ಲಿಯನ್ನು ತರಿಸಿಕೊಳ್ಳುತ್ತಿದ್ದರು ಎಂದು ಆ ಭಾಗದ ಅವರ ಅಭಿಮಾನಿಗಳು ತಿಳಿಸಿದ್ದಾರೆ.

ಕಾಂಪ್ಲೆಕ್ಸ್‌, ರಸ್ತೆಗೆ ಹೆಸರು: ನಗರದ ವಿಜಯನಗರ ಬಡಾವಣೆಯ ಮುಖ್ಯರಸ್ತೆಗೆ ಅಭಿಮಾನಿಗಳು ಡಾ.ರಾಜ್‌ ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಿದ್ದಾರೆ. ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿ ದಂಡೆಯ ಮೇಲೆ ನಗರಸಭೆ ನಿರ್ಮಿಸಿರುವ ವಾಣಿಜ್ಯ ಸಂಕಿರ್ಣಕ್ಕೆ ನಗರಸಭೆ ಡಾ.ರಾಜ್‌ಕುಮಾರ್‌ ವಾಣಿಜ್ಯ ಸಂಕಿರ್ಣ ಎಂದು ನಾಮಕರಣ ಮಾಡಿತ್ತಾದರು ಅದರ ಬಳಕೆಯಾಗುತ್ತಿಲ್ಲ ಎಂದು ವರನಟನ ಅಭಿಮಾನಿಗಳಲ್ಲಿ ಆಕ್ರೋಶವಿದೆ.

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್‌ 91ನೇ ಜನ್ಮದಿನಾಚರಣೆಯನ್ನು ಏ.24ರಂದು ರಾಜ್ಯ ಸರ್ಕಾರವೇ ನಿರ್ಧರಿಸಿರುವುದು ಸ್ವಾಗತಾರ್ಹ. ಡಾ.ರಾಜ್‌ಕುಮಾರ್‌ ಅವರ ಹಲವು ಯಶಸ್ವಿ ಚಿತ್ರಗಳು ಮಾಗಡಿ ತಾಲೂಕಿನ ಬಹುತೇಕ ಪ್ರಸಿದ್ಧ ತಾಣಗಳಲ್ಲಿ ಚಿತ್ರಿಸಲಾಗಿದೆ.

ಸಂಪತ್ತಿಗೆ ಸವಾಲು, ಹುಲಿ ಹಾಲಿನ ಮೇವು, ದೇವತಾ ಮನುಷ್ಯ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳು ಮಾಗಡಿ ರಂಗನಾಥಸ್ವಾಮಿ ದೇಗುಲ, ಸಾವನದುರ್ಗ, ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯ, ಮಾಂಡವ್ಯ ಗುಹೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.

ಸಹೋದ್ಯೋಗಿಗಳೊಂದಿಗೆ ಭೋಜನ: ಡಾ.ರಾಜ್‌ಕುಮಾರ್‌ ಚಿತ್ರೀಕರಣದ ನಂತರ ಇಲ್ಲಿನ ಮಾಂಡವ್ಯ ಗುಹೆ ಬಳಿ ಊಟಕ್ಕೆ ಕೂರುತ್ತಿದ್ದರು. ಅವರು ಸಹದೋಗಿಗಳೊಂದಿಗೆ ಕುಳಿತು ನಗು ನಗುತ್ತಲೆ ಸಂತೋಷದಿಂದ ಊಟ ಮಾಡುತ್ತಿದ್ದರು. ಊಟದೊಂದಿಗೆ ಮಾಂಸಾಹಾರ ಸಹ ಇರುತ್ತಿತ್ತು. ಅವರಿಗೆ ಮೇಕೆ ಕಾಲು ಸೂಪು ಅಚ್ಚುಮೆಚ್ಚು ಎಂದು ಇಲ್ಲಿನ ಹಿರಿಯ ಅಭಿಮಾನಿ ಜಯರಾಮ್‌ ತಿಳಿಸಿದ್ದಾರೆ.

ರಾಜ್‌ಕುಮಾರ್‌ ರಸ್ತೆ: ಮಾಗಡಿ ಪಟ್ಟಣದ ಮುಖ್ಯರಸ್ತೆಗೆ ಡಾ.ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಪಟ್ಟಣದಲ್ಲಿ ಡಾ.ರಾಜಕುಮಾರ್‌ ಅಭಿಮಾನಿಗಳ ಬಳಗವಿದೆ. ಡಾ.ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆ ಮತ್ತು ಅವರ ಪುಣ್ಯತಿಥಿ ಕಾರ್ಯಕ್ರಮಗಳು ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ ಶಿಬಿರಗಳು ಸೇರಿದಂತೆ ಸಮಾಜಮುಖೀ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸುಮಾರ 205ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವರನಟ ಡಾ.ರಾಜ್‌ಕುಮಾರ್‌ಗೆ ಹಲವು ಪ್ರಶಸ್ತಿಗಳು ಲಭಿಸಿದೆ. ಏ.24ರ 1929 ರಲ್ಲಿ ಗಾಜನೂರಿನಲ್ಲಿ ಜನಿಸಿರುವ ಮುತ್ತುರಾಜ್‌ 1954ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ರಾಜ್‌ಕುಮಾರ್‌ ಆದರು. ಡಾ.ರಾಜ್‌ಕುಮಾರ್‌ ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಅಭಿಮಾನಿಗಳಿಗೂ ಡಾ.ರಾಜ್‌ಕುಮಾರ್‌ ಅಣ್ಣವೆುೕ ಆಗಿದ್ದಾರೆ. ಅವರ ಜನ್ಮದಿನಾವರಣೆ ಅರ್ಥಪೂರ್ಣವಾಗಿ ಆಚರಿಸುವುದು ಸಮಾಜದ ಹೊಣೆ.

 

ರಾಜ್‌ಕುಮಾರ್‌ ಜಯಂತಿಗೆ ಸರ್ಕಾರ ನಿರ್ಧಾರ

 ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್‌ 91ನೇ ಜನ್ಮದಿನಾಚರಣೆಯನ್ನು ಏ.24ರಂದು ರಾಜ್ಯ ಸರ್ಕಾರವೇ ನಿರ್ಧರಿಸಿರುವುದು ಸ್ವಾಗತಾರ್ಹ. ಡಾ.ರಾಜ್‌ಕುಮಾರ್‌ ಅವರ ಹಲವು ಯಶಸ್ವಿ ಚಿತ್ರಗಳು ಮಾಗಡಿ ತಾಲೂಕಿನ ಬಹುತೇಕ ಪ್ರಸಿದ್ಧ ತಾಣಗಳಲ್ಲಿ ಚಿತ್ರಿಸಲಾಗಿದೆ. ಸಂಪತ್ತಿಗೆ ಸವಾಲು, ಹುಲಿ ಹಾಲಿನ ಮೇವು, ದೇವತಾ ಮನುಷ್ಯ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳು ಮಾಗಡಿ ರಂಗನಾಥಸ್ವಾಮಿ ದೇಗುಲ, ಸಾವನದುರ್ಗ, ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯ, ಮಾಂಡವ್ಯ ಗುಹೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಸಹೋದ್ಯೋಗಿಗಳೊಂದಿಗೆ ಭೋಜನ: ಡಾ.ರಾಜ್‌ಕುಮಾರ್‌ ಚಿತ್ರೀಕರಣದ ನಂತರ ಇಲ್ಲಿನ ಮಾಂಡವ್ಯ ಗುಹೆ ಬಳಿ ಊಟಕ್ಕೆ ಕೂರುತ್ತಿದ್ದರು. ಅವರು ಸಹದೋಗಿಗಳೊಂದಿಗೆ ಕುಳಿತು ನಗು ನಗುತ್ತಲೆ ಸಂತೋಷದಿಂದ ಊಟ ಮಾಡುತ್ತಿದ್ದರು. ಊಟದೊಂದಿಗೆ ಮಾಂಸಾಹಾರ ಸಹ ಇರುತ್ತಿತ್ತು. ಅವರಿಗೆ ಮೇಕೆ ಕಾಲು ಸೂಪು ಅಚ್ಚುಮೆಚ್ಚು ಎಂದು ಇಲ್ಲಿನ ಹಿರಿಯ ಅಭಿಮಾನಿ ಜಯರಾಮ್‌ ತಿಳಿಸಿದ್ದಾರೆ. ರಾಜ್‌ಕುಮಾರ್‌ ರಸ್ತೆ: ಮಾಗಡಿ ಪಟ್ಟಣದ ಮುಖ್ಯರಸ್ತೆಗೆ ಡಾ.ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಪಟ್ಟಣದಲ್ಲಿ ಡಾ.ರಾಜಕುಮಾರ್‌ ಅಭಿಮಾನಿಗಳ ಬಳಗವಿದೆ. ಡಾ.ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆ ಮತ್ತು ಅವರ ಪುಣ್ಯತಿಥಿ ಕಾರ್ಯಕ್ರಮಗಳು ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ ಶಿಬಿರಗಳು ಸೇರಿದಂತೆ ಸಮಾಜಮುಖೀ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸುಮಾರ 205ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವರನಟ ಡಾ.ರಾಜ್‌ಕುಮಾರ್‌ಗೆ ಹಲವು ಪ್ರಶಸ್ತಿಗಳು ಲಭಿಸಿದೆ. ಏ.24ರ 1929 ರಲ್ಲಿ ಗಾಜನೂರಿನಲ್ಲಿ ಜನಿಸಿರುವ ಮುತ್ತುರಾಜ್‌ 1954ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ರಾಜ್‌ಕುಮಾರ್‌ ಆದರು. ಡಾ.ರಾಜ್‌ಕುಮಾರ್‌ ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಅಭಿಮಾನಿಗಳಿಗೂ ಡಾ.ರಾಜ್‌ಕುಮಾರ್‌ ಅಣ್ಣವೆುೕ ಆಗಿದ್ದಾರೆ. ಅವರ ಜನ್ಮದಿನಾವರಣೆ ಅರ್ಥಪೂರ್ಣವಾಗಿ ಆಚರಿಸುವುದು ಸಮಾಜದ ಹೊಣೆ.

ಟಾಪ್ ನ್ಯೂಸ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.