ಏ.27ಕ್ಕೆ ರಾಮನಗರ, ಚನ್ನಪಟ್ಟಣದಲ್ಲಿ ಚುನಾವಣೆ
Team Udayavani, Mar 30, 2021, 3:53 PM IST
ರಾಮನಗರ: ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಏ.27ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಪ್ರಕಟಣೆ ಹೊರೆಡಿಸಿದೆ.
ಏ.8ರ ಗುರುವಾರ ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸುವರು. ಏ.15 ನಾಮಪತ್ರಗಳ ಸಲ್ಲಿಕೆಗೆ ಕೊನೆ ದಿನ. ಏ.16 ನಾಮಪತ್ರಗಳ ಪರಿಶೀಲನೆ. ಏ.19 ಉದೇದುವಾರಿಕೆಗಳನ್ನು ಹಿಂಪಡೆಯುವ ದಿನ. ಮತದಾನದ ಅವಶ್ಯಕತೆ ಇದ್ದಲ್ಲಿ ಏ.27ರ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನದ ಅವಶ್ಯಕತೆ ಬಿದ್ದಲ್ಲಿ ಏ.29ರ ಗುರುವಾರ ನಡೆಯುತ್ತದೆ.ಮತಗಳ ಎಣಿಕೆ ಏ.30ರಂದು ಬೆಳಗ್ಗೆ 8 ಗಂಟೆಯಿಂದಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಅದೇ ದಿನ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಆಯೋಗದ ಆದೇಶ ತಿಳಿಸಿದೆ.
ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರೆಡಿಸಿದ ದಿನ ಏ.8 ರಿಂದ ಏ 30ರವರೆಗೆ ಸದಾಚಾರ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಆದೇಶ ತಿಳಿಸಿದೆ. ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಚುನಾವಣೆ ನಡೆಸಬೇಕು. ಏ.10 ಎರಡನೇ ಶನಿವಾರ ಸಾರ್ವತ್ರಿಕ ರಜಾದಿನವಾದ್ದರಿಂದ ಅಂದು ನಾಮಪತ್ರ ಸ್ವೀಕರಿಸುವಂತಿಲ್ಲ ಎಂದು ಆದೇಶ ತಿಳಿಸಿದೆ.
ಮರು ಮೀಸಲಾತಿ ನಿಗದಿ :
ಜನವರಿ 21, 2021ರಂದು ರಾಮನಗರ ನಗರಸಭೆಗೆ ಮೀಸಲಾತಿ ನಿಗದಿ ಪಡಿಸಿ ಹೊರೆಡಿಸಿದ್ದ ಅಧಿಸೂಚನೆಗೆ ಲಿಖಿತ ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಸಲಹೆ, ಆಕ್ಷೇಪಣೆಗಳನ್ನು ಪರಿಗಣಿಸಿ ರಾಮನಗರ ನಗರಸಭೆಯ 31 ವಾರ್ಡುಗಳಿಗೂ ಮೀಸಲಾತಿ ನಿಗದಿ ಪಡಿಸಿದ ಪ್ರಕಟಣೆ ಮಾ. 17ರಂದು ಹೊರಬಿದ್ದಿತ್ತು. ರಾಮನಗರ ನಗರಸಭೆಯ ನೂತನ ಮೀಸಲಾತಿ ಪಟ್ಟಿ ಹೀಗಿದೆ. ವಾರ್ಡ್ 1- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 2-ಪರಿಶಿಷ್ಟ ಜಾತಿ, ವಾರ್ಡ್ 3- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 4-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 5-ಸಾಮಾನ್ಯ, ವಾರ್ಡ್ 6- ಪರಿಶಿಷ್ಟ ಜಾತಿ, ವಾರ್ಡ್ 7 – ಹಿಂದುಳಿದ ವರ್ಗ (ಬಿ) ಮಹಿಳೆ,ವಾರ್ಡ್ 8 – ಸಾಮಾನ್ಯ ಮಹಿಳೆ, ವಾರ್ಡ್ 9- ಹಿಂದುಳಿದ ವರ್ಗ (ಎ), ವಾರ್ಡ್ 10-ಸಾಮಾನ್ಯ ಮಹಿಳೆ,ವಾರ್ಡ್ 11-ಹಿಂದುಳಿದ ವರ್ಗ (ಬಿ), ವಾರ್ಡ್ 12-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 13 -ಸಾಮಾನ್ಯ, ವಾರ್ಡ್ 14- ಸಾಮಾನ್ಯ, ವಾರ್ಡ್ 15- ಸಾಮಾನ್ಯ ಮಹಿಳೆ, ವಾರ್ಡ್ 16- ಹಿಂದುಳಿದ ವರ್ಗ (ಎ), ವಾರ್ಡ್ 17-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 18-ಸಾಮಾನ್ಯ, ವಾರ್ಡ್ 19 ಸಾಮಾನ್ಯ, ವಾರ್ಡ್ 20-ಸಾಮಾನ್ಯ ಮಹಿಳೆ, ವಾರ್ಡ್ 21-ಪರಿಶಿಷ್ಟ ಜಾತಿ, ವಾರ್ಡ್ 22- ಹಿಂದುಳಿದ ವರ್ಗ (ಎ), ವಾರ್ಡ್ 23- ಸಾಮಾನ್ಯ, ವಾರ್ಡ್ 24-ಸಾಮಾನ್ಯ ಮಹಿಳೆ, ವಾರ್ಡ್ 25-ಹಿಂದುಳಿದ ವರ್ಗ ಎ, ವಾರ್ಡ್ 26-ಪರಿಶಿಷ್ಟ ಪಂಗಡ, ವಾರ್ಡ್ 27-ಸಾಮಾನ್ಯ ಮಹಿಳೆ, ವಾರ್ಡ್ 28-ಸಾಮಾನ್ಯ, ವಾರ್ಡ್ 29-ಸಾಮಾನ್ಯ, ವಾರ್ಡ್ 30 -ಸಾಮಾನ್ಯ ಮಹಿಳೆ, ವಾರ್ಡ್ 31- ಸಾಮಾನ್ಯ ಮಹಿಳೆ.
ವಿಳಂಬ ಏಕಾಗಿತ್ತು? :
2018ರಲ್ಲೇ ಮೀಸಲಾತಿ ನ್ಯಾಯಾಲಯಕ್ಕೆ ಮೊರೆ 2018ರಲ್ಲಿಯೇ ರಾಜ್ಯಸರ್ಕಾರ ಪ್ರಕಟಿಸಿದ್ದ ರಾಮನಗರನಗರಸಭೆಯ ವಾರ್ಡುಗಳ ಮೀಸಲಾತಿ ಮತ್ತು ವಾರ್ಡುಗಳ ಮರುವಿಂಗಡನೆ ಪ್ರಶ್ನಿಸಿ ಕೆಲವರು ಹೈಕೋಟ್ ಮೊರೆ ಹೋಗಿದ್ದರು. ನ್ಯಾಯಾಲಯಮೀಸಲಾತಿ ಪರಿಷ್ಕರಿಸಿ ನಿಗದಿ ಪಡಿಸುವಂತೆನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿ ಆದೇಶ ಹೊರಡಿಸಿತ್ತು. ಆದರೆ ಇಲಾಖೆ ಈ ವಿಚಾರದಲ್ಲಿ ಪರಿಷ್ಕರಣೆ ಮಾಡಲಿಲ್ಲ. 2021ರ ಜನವರಿ 21ರಂದು ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕಾರಜಿಲ್ಲಾಧಿಕಾರಿಗಳು ಮೀಸಲು ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿದ್ದರು. ಸುಮಾರು 40ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಡೀಸಿಯವರು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
2 ವರ್ಷಗಳ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆ :
ಬರೋಬ್ಬರಿ 2 ವರ್ಷಗಳ ನಂತರ ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಎರಡು ವರ್ಷಗಳ ಕಾಲ ನಡೆದ ಅಧಿಕಾರಿಗಳ ದರ್ಬಾರು ಏಪ್ರಿಲ್‌ತಿಂಗಳಲ್ಲಿ ಅಂತ್ಯವಾಗಲಿದೆ. ಏ.27ರಂದು ಚುನಾವಣೆ ನಿಗದಿಪಡಿಸಿ ಚುನಾವಣಾ ಆಯೋಗ ಆದೇಶಹೊರೆಡಿಸಿದೆ. ಬೆನ್ನಲ್ಲೆ ಎರಡೂ ನಗರಗಳಲ್ಲಿ ರಾಜಕೀಯ ಗರಿಗೆದರಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ತಮ್ಮ ಗಾಡ್ ಫಾದರ್‌ಗಳ ಬೆನ್ನು ಹತ್ತಿದ್ದಾರೆ. ತೆರೆಮರೆಯಲ್ಲಿ ನಡೆಯುತ್ತಿದ್ದ ಈ ಚಟುವಟಿಕೆ ಸೋಮವಾರ ಇನ್ನಷ್ಟು ಬಿರುಸುಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.