Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Team Udayavani, Oct 15, 2024, 9:52 AM IST

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

ರಾಮನಗರ: ಇಬ್ಬರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಸೋಮವಾರ ಆರೋಪಿಗಳನ್ನು ಬಂಧಿಸಿ, ಅವರ ಸಮ್ಮುಖದಲ್ಲಿ ಸಮಾಧಿಯಲ್ಲಿ ಹೂತಿದ್ದ ಮಕ್ಕಳ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು.

ನಗರ ವೃತ್ತ ನಿರೀಕ್ಷಕ ಕೃಷ್ಣ ನೇತೃತ್ವದಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು,  ಸ್ಮಶಾನದಲ್ಲಿ ಅಗೆದು ಮಕ್ಕಳ ಶವಗಳನ್ನು ಹೊರ ತೆಗೆದರು. ಬಳಿಕ ರಾಮನಗರ ಜಿಲ್ಲಾಸ್ಪತ್ರೆಯ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ತಮ್ಮ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ತನ್ನ ಇಬ್ಬರು ಮಕ್ಕಳನ್ನು ತಾಯಿ ಸ್ವೀಟಿ ಹಾಗೂ ಆಕೆಯ ಪ್ರಿಯಕರ ಫ್ರಾನ್ಸಿಸ್‌ ಸೇರಿ ಕೊಲೆಗೈದಿದ್ದರು. 2 ವರ್ಷದ ಗಂಡುಮಗುವನ್ನು ಉಸಿರು ಗಟ್ಟಿಸಿ ಸಾಯಿಸಿದ್ದರೆ, 11 ತಿಂಗಳ ಮಗುವನ್ನು ಗೋಡೆಗೆ ಹೊಡೆದು ಕೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಎ.ಕೆ.ಕಾಲೋನಿ ನಿವಾಸಿಯಾಗಿದ್ದ ಸ್ವೀಟಿ ಮನೆಕೆಲಸಕ್ಕೆ ಹೋಗುತ್ತಿದ್ದಳು. ಬೆಂಗಳೂರಿನ ನಿವಾಸಿಯಾಗಿರುವ ಫ್ರಾನ್ಸಿಸ್‌ ಅನ್ನು ಪ್ರೀತಿಸುತ್ತಿದ್ದಳು. ಈ ನಡುವೆ ತನ್ನ ಗಂಡದ ಎಟಿಎಂ ಕಾರ್ಡ್‌ ಅನ್ನು ತನ್ನ ಪ್ರಿಯಕರನಿಗೆ ನೀಡಿದ್ದಳು. ಈಕೆಯ ಪತಿಯ ಬ್ಯಾಂಕ್‌ಖಾತೆಯಲ್ಲಿ 2 ಲಕ್ಷ ರೂ. ಹಣ ಇತ್ತು. ಈ ಹಣವನ್ನು ಫ್ರಾನ್ಸಿಸ್‌ ಮತ್ತು ಸ್ವೀಟಿ ಬಳಸಿಕೊಂಡಿ ದ್ದರು. ಆಗಸ್ಟ್‌ನಲ್ಲಿ ತನ್ನ ಮಕ್ಕಳೊಂದಿಗೆ ಮನೆಬಿಟ್ಟು ಹೋಗಿದ್ದ ಸ್ವೀಟಿ, ಫ್ರಾನ್ಸಿಸ್‌ ಜೊತೆ ರಾಮನಗರದಲ್ಲಿ ಒಂದೂವರೆ ತಿಂಗಳು ವಾಸವಿದ್ದಳು. ಬಳಿಕ ಪತಿಯ ಮನೆಗೆ ಹಿಂದಿರುಗಿದ್ದಳು. ಮತ್ತೆ ಸೆ.15 ರಂದು ಪತ್ನಿ ನಾಪತ್ತೆಯಾಗಿದ್ದಳು. ಈ ಸಂಬಂಧ ಡಿ.ಕೆ.ಹಳ್ಳಿ ಠಾಣೆಯಲ್ಲಿ ಈಕೆಯ ಪತಿ ದೂರು ದಾಖಲಿಸಿದ್ದರು.

ಫೋನ್‌ಪೇ ನಂಬರ್‌ ಕೊಟ್ಟ  ಸುಳಿವು:

ರಾಮನಗರದ ಗೀತಾಮಂದಿರ ಬಡಾ ವಣೆಯ ಸಮೀಪ ಇರುವ ಸ್ಮಶಾನದಲ್ಲಿ ಮಕ್ಕಳನ್ನು ಹೂತಿದ್ದ ಆರೋಪಿಗಳು ಸ್ಮಶಾನದ ಕಾವಲುಗಾರನಿಗೆ ಫೋನ್‌ಪೇ ಮೂಲಕ ಹಣ ಪಾವತಿಸಿದ್ದರು. ಒಂದು ವಾರದ ಅಂತರದಲ್ಲಿ ಎರಡು ಮಕ್ಕಳು ಮೃತಪಟ್ಟಿವೆ ಎಂದು ಅಂತ್ಯಸಂಸ್ಕಾರ ಮಾಡಿದ್ದರಿಂದ ಅನುಮಾನ ಗೊಂಡ ಸ್ಮಶಾನದ ಕಾವಲುಗಾರ ಐಜೂರು ಠಾಣೆ ಪೊಲೀಸರಿಗೆೆ ಮಾಹಿತಿ ನೀಡಿದ್ದನು. ಈ ಸಮಯದಲ್ಲಿ ತನಗೆ ಫೋನ್‌ ಪೇ ಮಾಡಿದ್ದ ಮೊಬೈಲ್‌ ನಂಬರ್‌ ಅನ್ನು ಸಹ ಪೊಲೀಸರಿಗೆ ನೀಡಿದ್ದ. ಈ ಮೊಬೈಲ್‌ ಫೋನ್‌ ಆಧರಿಸಿ, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಕ್ಕಳನ್ನು ಸ್ಮಶಾನದಲ್ಲಿ ಹೂತಿದ್ದ ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು.

ಟಾಪ್ ನ್ಯೂಸ್

Kalaburagi: ರಾಜ್ಯದಲ್ಲಿ ಕದ್ದ ಮಾಲು ವಾಪಸ್ಸು ಕೊಡುವ ಟ್ರೆಂಡ್ ಶುರುವಾಗಿದೆ… ಸಿ.ಟಿ ರವಿ

Kalaburagi: ರಾಜ್ಯದಲ್ಲಿ ಕದ್ದ ಮಾಲು ವಾಪಸ್ಸು ಕೊಡುವ ಟ್ರೆಂಡ್ ಶುರುವಾಗಿದೆ… ಸಿ.ಟಿ ರವಿ

B.Y. Vijayendra: ಭ್ರಷ್ಟ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗಳಿಗೆ‌ ಮನವಿ ಸಲ್ಲಿಸುತ್ತೇವೆ

B.Y. Vijayendra: ಭ್ರಷ್ಟ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗಳಿಗೆ‌ ಮನವಿ ಸಲ್ಲಿಸುತ್ತೇವೆ

Miraculous Escape: ವಾಟರ್ ಟ್ಯಾಂಕ್ ಮೈಮೇಲೆ ಬಿದ್ದರೂ ಬಚಾವಾದ ಮಹಿಳೆ

Miraculous Escape: ಮೈಮೇಲೆ ವಾಟರ್ ಟ್ಯಾಂಕ್ ಬಿದ್ದರೂ ಮಹಿಳೆ ಪಾರಾಗಿದ್ದೇ ಪವಾಡ…

Kamal Haasan: ನಿರೂಪಣೆ ಬಿಟ್ಟ ಬಳಿಕ ಮತ್ತೆ ಬಿಗ್‌ಬಾಸ್‌ ವೇದಿಕೆಗೆ ಬರಲಿದ್ದಾರೆ ಕಮಲ್

Kamal Haasan: ನಿರೂಪಣೆ ಬಿಟ್ಟ ಬಳಿಕ ಮತ್ತೆ ಬಿಗ್‌ಬಾಸ್‌ ವೇದಿಕೆಗೆ ಬರಲಿದ್ದಾರೆ ಕಮಲ್

BBK11: ಬಿಗ್‌ ಬಾಸ್‌ಗೆ ಸುದೀಪ್‌ ವಿದಾಯ; ಕಿಚ್ಚನ ನಿರ್ಧಾರಕ್ಕೆ ಅಸಲಿ ಕಾರಣ ಇದೇನಾ?

BBK11: ಬಿಗ್‌ ಬಾಸ್‌ಗೆ ಸುದೀಪ್‌ ವಿದಾಯ; ಕಿಚ್ಚನ ನಿರ್ಧಾರಕ್ಕೆ ಅಸಲಿ ಕಾರಣ ಇದೇನಾ?

Air Pollution: ಜ.1ರ ವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟ, ಬಳಕೆ, ಉತ್ಪಾದನೆಗೆ ನಿಷೇಧ

Air Pollution: ಜ.1ರ ವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟ, ಬಳಕೆ, ಉತ್ಪಾದನೆಗೆ ನಿಷೇಧ

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY Election: ನಾಳೆ ಬಿಜೆಪಿ ಪ್ರಮುಖರ ಸಭೆ ಕರೆದ ಯೋಗೇಶ್ವರ್‌

BY Election: ನಾಳೆ ಬಿಜೆಪಿ ಪ್ರಮುಖರ ಸಭೆ ಕರೆದ ಯೋಗೇಶ್ವರ್‌

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

HDK

CM Post: ಅಧಿಕಾರಕ್ಕಾಗಿ ಜೆಡಿಎಸ್‌ಗೆ ಸಿದ್ದರಾಮಯ್ಯ ದ್ರೋಹ: ಎಚ್‌.ಡಿ.ಕುಮಾರಸ್ವಾಮಿ

DCM DKShivakumar

By Polls: ಚನ್ನಪಟ್ಟಣ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ: ಡಿ.ಕೆ. ಶಿವಕುಮಾರ್‌

Murder

Ramanagara: ಪ್ರಿಯಕರನ ಜತೆ ಸೇರಿ ಇಬ್ಬರು ಎಳೆಯ ಮಕ್ಕಳನ್ನೇ ಕೊಂದ ತಾಯಿ!

MUST WATCH

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

ಹೊಸ ಸೇರ್ಪಡೆ

1

Sullia: ಪಂಜ ಹೋಬಳಿ ಕೇಂದ್ರ ತಲುಪುವುದೇ ಕಷ್ಟ!

Kalaburagi: ರಾಜ್ಯದಲ್ಲಿ ಕದ್ದ ಮಾಲು ವಾಪಸ್ಸು ಕೊಡುವ ಟ್ರೆಂಡ್ ಶುರುವಾಗಿದೆ… ಸಿ.ಟಿ ರವಿ

Kalaburagi: ರಾಜ್ಯದಲ್ಲಿ ಕದ್ದ ಮಾಲು ವಾಪಸ್ಸು ಕೊಡುವ ಟ್ರೆಂಡ್ ಶುರುವಾಗಿದೆ… ಸಿ.ಟಿ ರವಿ

B.Y. Vijayendra: ಭ್ರಷ್ಟ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗಳಿಗೆ‌ ಮನವಿ ಸಲ್ಲಿಸುತ್ತೇವೆ

B.Y. Vijayendra: ಭ್ರಷ್ಟ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗಳಿಗೆ‌ ಮನವಿ ಸಲ್ಲಿಸುತ್ತೇವೆ

Miraculous Escape: ವಾಟರ್ ಟ್ಯಾಂಕ್ ಮೈಮೇಲೆ ಬಿದ್ದರೂ ಬಚಾವಾದ ಮಹಿಳೆ

Miraculous Escape: ಮೈಮೇಲೆ ವಾಟರ್ ಟ್ಯಾಂಕ್ ಬಿದ್ದರೂ ಮಹಿಳೆ ಪಾರಾಗಿದ್ದೇ ಪವಾಡ…

Kamal Haasan: ನಿರೂಪಣೆ ಬಿಟ್ಟ ಬಳಿಕ ಮತ್ತೆ ಬಿಗ್‌ಬಾಸ್‌ ವೇದಿಕೆಗೆ ಬರಲಿದ್ದಾರೆ ಕಮಲ್

Kamal Haasan: ನಿರೂಪಣೆ ಬಿಟ್ಟ ಬಳಿಕ ಮತ್ತೆ ಬಿಗ್‌ಬಾಸ್‌ ವೇದಿಕೆಗೆ ಬರಲಿದ್ದಾರೆ ಕಮಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.