ಫೆ.2 ರಂದು ರಾಮನಗರ ಮ್ಯಾರಥಾನ್
Team Udayavani, Jan 24, 2020, 2:41 PM IST
ರಾಮನಗರ: ದಕ್ಷಿಣ ಭಾರತದಲ್ಲಿ ಖ್ಯಾತಿಯಾಗಿರುವ ರಾಮನಗರ ಮ್ಯಾರಥಾನ್ 2020 ಇದೇ ಫೆಬ್ರವರಿ 2ರಂದು ಆಯೋಜನೆಯಾಗಿದೆ ಎಂದು ಯಲ್ಲೋ ಆಂಡರ್ ರೆಡ್ ಫೌಂಡೇಷನ್‌ನ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.
ನಗರದ ಕೆಂಗಲ್ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದು 7ನೇ ಬಾರಿಗೆ ಮ್ಯಾರಥಾನ್ ಆಯೋಜನೆಯಾಗಿದ್ದು, ದಕ್ಷಿಣ ಭಾರತದಲ್ಲಿ ಗಮನ ಸೆಳೆದಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ಸಮಾಜ: ಅರಣ್ಯ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಿಲ್ಲಿ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಲ್ಲಿ ಈ ಬಾರಿಯ ಮ್ಯಾರಥಾನ್ ನಡೆಯಲಿದೆ. ಮ್ಯಾರಥಾನ್‌ಗೆ ರಾಮನಗರ ಜಿಲ್ಲಾ ಪೊಲೀಸ್, ಜಿಲ್ಲಾ ಪಂಚಾಯಿತಿ, ಗೈಲ್ ಲಿಮಿಟೆಡ್ ಮತ್ತು ಮಹಾರಾಷ್ಟ್ರ ನ್ಯಾಷನಲ್ ಗ್ಯಾಸ್ ಲಿಮಿಟೆಡ್, ಕೆಂಗಲ್ ಹುನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ, ರೋಟರಿ ಸಿಲ್ಕ್ ಸಿಟಿ, ಶಾಂತಿ ನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಗ್ರೀನ್ ಡೈಮಂಡ್ ಸಂಸ್ಥೆ, ಸುಧಾ ಕ್ಲಿನಿಕ್, ಇಂಪನಾ ಹಾಸ್ಟಿಟಲ್‌ಗಳ ಸಹಯೋಗದಲ್ಲಿ ಮ್ಯಾರಥಾನ್ ಆಯೋಜನೆಯಾಗಿದೆ. ಮ್ಯಾರಥಾನ್ ಉದ್ಘಾಟನೆಗೆ ಜಿಪಂ ಸಿಇಒ ಇಕ್ರಂ, ಎಸ್ಪಿ ಅನೂಪ್ ಶೆಟ್ಟಿ ಆಗಮಿಸಲಿದ್ದಾರೆ ಎಂದರು.
ಓಟಗಳ ವರ್ಗ ಯಾವುವು?: ಎಂದಿನಂತೆ ಈ ಬಾರಿಯೂ ರೂರಲ್ 7 ಕಿಮೀ ಓಟ, ವಿದ್ಯಾರ್ಥಿ 7 ಕಿಮೀ ಓಟ, ಹಿರಿಯರ 7 ಕಿಮೀ ಓಟ, ರಾಕ್ 11 ಕಿಮೀ ಓಟ ಮತ್ತು ರೀಡಿಫೈನ್ 21.1 ಕಿಮೀ ಓಟ ಆಯೋಜಿಸಲಾಗಿದೆ. ರಾಮನಗರ ಹೊರ ವಲಯದ ಬಸವನಪುರದಲ್ಲಿ ಆರಂಭವಾಗುವ ಮ್ಯಾರಥಾನ್ ಓಟ, ವಡೇರಹಳ್ಳಿ, ರಾಂಪುರ ದೊಡ್ಡಿ, ಗೋಪಾಲಪುರ, ದಾಸೇಗೌಡನ ದೊಡ್ಡಿ ಮಾರ್ಗವಾಗಿ ಹುಣಸನಹಳ್ಳಿ ತಲುಪಿ ಮತ್ತೆ ವಾಪಸ್ ಅದೇ ಮಾರ್ಗದಲ್ಲಿ ಬಂದು ಬಸವನಪುರದಲ್ಲಿ ಅಂತ್ಯವಾಗಲಿದೆ ಎಂದರು. ಓಟದಲ್ಲಿ ಭಾಗವಹಿಸುವ ಎಲ್ಲರಿಗೂ ಪಾರಿತೋಷಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ವಿವರಿಸಿದರು.
ನೋಂದಣಿ ಹೇಗೆ?: ಆಸಕ್ತರು ರಾಮನಗರದ ಬಿಜಿಎಸ್ ಆಸ್ಪತ್ರೆಯ ಬಳಿಯ ಇರುವ ಯಲ್ಲೋ ಆಂಡರ್ ರೆಡ್ ಸರ್ವೀಸಸ್ ಪ್ರೈ.ಲಿ ನಲ್ಲಿ (ಮೊಬೈಲ್: 7676775624), ರಾಮನಗರ ಎಂ.ಜಿ.ರಸ್ತೆಯಲ್ಲಿರುವ ಶರ್ವರಿ ಜ್ಯೂಯೆಲರ್ (ಮೊ: 9242108418), ಕೆಂಪೇಗೌಡ ವೃತ್ತದಲ್ಲಿರುವ ಅಜಯ್ ಕಮ್ಯುನಿಕೇಷನ್ (ಮೊ: 080 27275624) ಇಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಶುಲ್ಕ 400 ರೂ. ಟೀ ಶರ್ಟ್, ಬೆಳಗಿನ ಉಪಹಾರ, ಪಾರಿತೋಷಕ, ಪ್ರಮಾಣ ಪತ್ರ ಉಚಿತ ಎಂದು ಅವರು ವಿವರಿಸಿದರು.
ಫೌಂಡೇಷನ್ ಎಂಡಿ ಆನಂದ ಶಿವ, ರೋಟರಿ ಸಿಲ್ಕ್ ಸಿಟಿ ನಿಯೋಜಿತ ಅಧ್ಯಕ್ಷ ಎನ್.ರವಿಕುಮಾರ್, ಕೆಂಗಲ್ ಹನುಮಂತಯ್ಯ ನ್ಪೋಟ್ಸ್ ಕ್ಲಬ್ ಖಜಾಂಚಿ ಸತೀಷ್, ನಿರ್ದೇಶಕ ಡಾ.ನಟರಾಜ್, ಯುರೋ ಕಿಡ್ಸ್ ಮಾಲೀಕ ವಿಶ್ವಾನಂದ ರಾಜೇ ಅರಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.