ನಾಗರಿಕರ ಸುಲಿಗೆಗೆ ನಿಂತ ನಗರಸಭೆ

Team Udayavani, Jul 2, 2022, 4:19 PM IST

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ರಾಮನಗರ: ರಾಮನಗರ ನಗರಸಭೆ ಒಂದಿಲ್ಲೊಂದು ವಿಚಾರಗಳಲ್ಲಿ ಸದಾ ಸದ್ದು ಮಾಡುತ್ತಲೇ ಇರುತ್ತೆ, ಖಾಲಿ ನಿವೇಶನಕ್ಕೂ ಘನತ್ಯಾಜ್ಯ ನಿರ್ವಹಣಾ ವೆಚ್ಚ ಹಾಕುವ ಮೂಲಕ ನಗರವಾಸಿಗಳ ಕಣ್ಣುಕೆಂಪಗೇರುವಂತೆ ಮಾಡಿದ್ದಾರೆ.

ಬೀದಿಬದಿಯ ಕಸವನ್ನೇ ಸಮ ರ್ಪಕವಾಗಿ ನಿರ್ವಹಣೆ ಮಾಡದಿದ್ರೂ, ಘನತ್ಯಾಜ್ಯ ಸುಂಕ ವಸೂಲಿಯಲ್ಲಿ ಮುಂದಿದ್ದ ನಗರಸಭೆ ಅಧಿಕಾರಿಗಳಿಗೆ ಮತ್ತು ಆಡಳಿತ ಮಂಡಳಿಗೆ ಖಾಲಿ ನಿವೇಶನಕ್ಕೂ ಘನತ್ಯಾಜ್ಯ ನಿರ್ವಹಣೆಯ ಸುಂಕ ವಿಧಿಸಿರುವ ಕಿರೀಟ ಸಿಕ್ಕಂತಾಗಿದೆ.

ಹೌದು…ರಾಮನಗರ ನಗರಸಭೆ ಯಲ್ಲಿ ಇದೀಗ ತೆರಿಗೆಯದ್ದೇ ಸದ್ದು ಕೊರೊನಾ ಅಬ್ಬರದ ಸಂಕಷ್ಟದ ನಡುವೆಯೂ ಕೂಡ ಶೇ.33ರಷ್ಟು ತೆರಿಗೆ ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಬರೆ ಎಳೆದಿದ್ದರು. ಅದನ್ನ ನಗರಸಭೆ ಸರ್ಕಾರ ಮಾಡಿದ್ದು ಎನ್ನುತ್ತಾ, ಇದೀಗ ಈ ವರ್ಷ ಕೂಡ ಆಗಿಲ್ಲ ಮತ್ತೂಮ್ಮೆ ಅವರ ಲೆಕ್ಕಕ್ಕೆ ಶೇ. 3ರಷ್ಟು ಸಾರ್ವಜನಿಕರ ಲೆಕ್ಕಕ್ಕೆ ಶೇ.10ರಷ್ಟು ಹೆಚ್ಚಳ ಮಾಡುವ ಮೂಲಕ ನಗರವಾಸಿಗಳನ್ನ ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಿರಂತರ ವಾಗಿ ಪ್ರತಿವರ್ಷ ತೆರಿಗೆ ಹೆಚ್ಚಳ ಮಾಡುವ ಮೂಲಕ ಸಾರ್ವಜನಿಕರ ರಕ್ತಹೀರುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಅಭಿವೃದ್ಧಿ ಮತ್ತು ನಗರವಾಸಿಗಳ ಹಿತ ಕಾಯಬೇಕಿದ್ದ ನಗರಸಭೆ ಸಾರ್ವಜ ನಿಕರ ರಕ್ತ ಹೀರುವ ಪೀಪಾಸುವಂತಾಗಿದೆ. ನಗರದ ಅಭಿವೃದ್ಧಿಗೆಂದೇ ಸರ್ಕಾರ ಕೋಟ್ಯಂತರ ಹಣ ಬಿಡುಗಡೆ ಮಾಡುತ್ತದೆ. ಆದರ ನಡುವೆಯೂ ನಗರವಾಸಿಗಳ ಮೇಲೆ ಸುಂಕದ ಬರೆ ಎಳೆಯುವ ಕೆಲಸ ನಿರಂತರವಾಗಿ ಬಿಟ್ಟಿದೆ ಎನ್ನುವ ಸ್ಥಳೀಯರು, ಕಳೆದ ಬಾರಿಗಿಂತ ತೆರಿಗೆ ಈ ಬಾರಿ ಮತ್ತೆ ಹೆಚ್ಚಳ ಮಾಡಿದ್ದು, ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ.

ಸಾರ್ವಜನಿಕರ ಆಕ್ರೋಶ: ರಸ್ತೆಯಲ್ಲೇ ಸಮರ್ಪಕವಾಗಿ ಕಸ ತೆಗೆಯದ ನಗರಸಭೆ ಪಾಪ ಖಾಲಿ ನಿವೇಶನಕ್ಕೂ ಘನ ತ್ಯಾಜ್ಯ ವಿಲೇವಾರಿ ಶುಲ್ಕ ವಿಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿಬದಿ ಹೆದ್ದಾರಿಗಳಲ್ಲಿ ಕಸದ ರಾಶಿ ಬಿದ್ದು ನಾರುತ್ತಿದೆ. ಮನೆಗಳಿಂದ ಕಲೆ ಹಾಕುತ್ತಿರುವ ಸುಂಕ ಅದರ ತೆರವಿಗೆ ಸಾಕಾಗುತ್ತಿಲ್ಲವೆ. ಮತ್ತೇ ಏಕೆ ಏರಿಸುತ್ತಾರೆ ಎನ್ನುವ ಪ್ರಶ್ನೆಯೊಂದಿಗೆ ಈ ವರ್ಷದಿಂದ ಖಾಲಿ ನಿವೇಶನದ ತ್ಯಾಜ್ಯ ವಿಲೇವಾರಿ ವೆಚ್ಚ ವಿಧಿಸಿದ್ದಾರೆ. ಅದೂ ಖಾಲಿ ನಿವೇಶನದ ತೆರಿಗೆಗಿಂತ ಕಸ ವಿಲೇವಾರಿ ತೆರಿಗೆಯೇ ಹೆಚ್ಚಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಏಕಾಏಕಿ ನಿರ್ಧಾರ: ದಿನೇ ದಿನೆ ಹೆಚ್ಚಿಸುತ್ತಿರುವ ಸುಂಕಗಳು ನಗರದಲ್ಲಿ ಒಂದು ನಿವೇಶನ ಸೂರು ಹೊಂದಬೇಕೆನ್ನುವುದು ಬಡವರ ಆಸೆಯಾಗಿತ್ತು. ಆದರೆ, ನಗರಸಭೆಯಲ್ಲಿ ಸುಂಕ ಏರಿಕೆ ಮತ್ತು ಕಸವಿಲೇವಾರಿಗೆ ಸುಂಕ ಹಾಕುತ್ತಿರುವುದು ಎಲ್ಲವನ್ನೂ ನೋಡಿದರೆ ಗ್ರಾಮೀಣ ಭಾಗದಲ್ಲಿ ವಾಸಿಸುವುದೇ ವಾಸಿ ಎನ್ನುವಂತಾಗಿದೆ. ಅಲ್ಲದೆ, ಯಾವುದೇ ಪ್ರಕಟಣೆ ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಹಿಟ್ಲರ್‌ ಸಂಸ್ಕೃತಿ ನೆನಪಿಸುವಂತಾಗಿದೆ.

ಪ್ರತಿವರ್ಷ ತೆರಿಗೆ ಹೆಚ್ಚಳ : ಒಮ್ಮೆ ತೆರಿಗೆ ಹೆಚ್ಚಳವಾದ್ರೆ ಮೂರು ವರ್ಷಗಳ ಕಾಲ ತೆರಿಗೆ ಹೆಚ್ಚಿಸುವಂತಿಲ್ಲ ಎಂಬ ನಿಯಮವಿದೆ. ಅಲ್ಲದೆ, ಯಾವುದೇ ತೆರಿಗೆ ಅಥವಾ ಸಾರ್ವಜನಿಕರ ಮೇಲೆ ಸುಂಕ ವಿಧಿಸುವುದಿದ್ದರೆ ಪೂರ್ವಭಾವಿಯಾಗಿ ಸಾರ್ವ ಜನಿಕರಿಗೆ ಪ್ರಕಟಣೆ ಹೊರಡಿಸಿ ಅಭಿಪ್ರಾಯ ಸಂಗ್ರ ಹಿಸಿ ಜಾರಿಗೆ ತರಬೇಕು. ಸಾಧಕ-ಬಾಧಕಗಳ ಬಗ್ಗೆ ನಗರಸಭೆಯ ಸದಸ್ಯರ ಸಭೆಯಲ್ಲಿಯೂ ಕೂಡ ಚರ್ಚಿಸಬೇಕು. ಆದರೆ, ರಾಮನಗರ ನಗರಸಭೆಗೆ ಪಾಪ ಕರ್ನಾಟಕ ಮುನಿಸಿಪಲ್‌ ಕಾಯ್ದೆ 1964ರ ಉಪನಿಯಮಗಳ ಕಾಯ್ದೆಯಡಿ ಸಾರ್ವಜನಿಕ ಮೂಲಭೂತ ಸೌಲಭ್ಯಕ್ಕಾಗಿ ತೆರಿಗೆ ವಿಧಿಸುವುದಕ್ಕೆ ಪಾಲನೆ ಅನ್ವಯವಾಗುವುದಿಲ್ಲ ಎನ್ನುವಂತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರು ವರ್ಷ ಗಳಲ್ಲಿ ಮೂರು ಬಾರಿ ಅಂದರೆ ಪ್ರತಿವರ್ಷ ಹೆಚ್ಚಳ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಕಳೆದ 2005ರಿಂದಲೂ ನಗರಸಭೆಯಲ್ಲಿ ಕರ ಹೆಚ್ಚಳ ಮಾಡಿರಲಿಲ್ಲ. ಸಬ್‌ ರಿಜಿಸ್ಟ್ರಾರ್‌ ಪ್ರಕಾರ ಲೆಕ್ಕಾಚಾರ ಮಾಡಿ ಫಿಕ್ಸ್‌ ಮಾಡಲಾಗಿತ್ತು. ಅದರಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಹೆಚ್ಚಳ ಮಾಡಬೇಕಿತ್ತು. ಆದರೆ, ಈವರೆಗೂ ಮಾಡಿರಲಿಲ್ಲ. 2021-22 ಅಂದರೆ ಕಳೆದ ವರ್ಷ ಸರ್ಕಾರದ ನಿಯಮಾವಳಿಯಂತೆ ಶೇ. 33ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ಬಾರಿ ನಗರಸಭೆಯ ನಿಯಮಾವಳಿಯಂತೆ ಹೆಚ್ಚಿಸಿದ್ದೇವೆ.

ಘನತ್ಯಾಜ್ಯ ವಿಲೇವಾರಿ ಶುಲ್ಕ ಖಾಲಿ ನಿವೇಶನಕ್ಕೂ ವಿಧಿಸಲು ನಿವೇಶನ ಆಕಾರ ಅಳತೆ ಮೇಲೆ ಸರ್ಕಾರವೇ ನಿಗದಿ ಮಾಡಿ ಆದೇಶ ಹೊರಡಿಸಿದೆ. ನಂಜುಂಡಸ್ವಾಮಿ, ಪ್ರಭಾರ ಕಂದಾಯ ಅಧಿಕಾರಿ

ಅದೇನೇ ಆದ್ರೂ ಸರ್ಕಾರದ ಹೆಸರಲ್ಲಿ ಒಮ್ಮೆ ಹೆಚ್ಚಿಸಿದ್ದಾಯ್ತು. ಇದೀಗ ನಗರಸಭೆ ಹೆಸರಲ್ಲಿ ಜನತೆಯ ಸುಲಿಗೆಗೆ ನಿಂತಿದ್ದಾರೆ. ಪದೇ ಪದೆ ತೆರಿಗೆ ಹೆಚ್ಚಳ ಸಂಕಷ್ಟಕ್ಕೆ ದೂಡಿದೆ. ಇದು ಕೊರೊನಾ ಬಿಕ್ಕಟ್ಟಿನ ನಡುವೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಮೇಶ್‌, ಸ್ಥಳೀಯರು

ಟಾಪ್ ನ್ಯೂಸ್

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.