ರಾಮನಗರ: ಚಿತ್ರಮಂದಿರ ತೆರವು ವಿಳಂಬ
ಬೇಡಿಕೆ ಈಡೇರಿಕೆಗೆ ಚಿತ್ರಮಂದಿರ ಮಾಲೀಕರ ಒತ್ತಾಯ| ಅ.15ರಿಂದ ಜಿಲ್ಲೆಯಲ್ಲಿ ಚಿತ್ರ ಮಂದಿರ ಆರಂಭ ಇಲ್ಲ
Team Udayavani, Oct 14, 2020, 2:05 PM IST
ರಾಮನಗರ: ನಾಳೆ ಗುರುವಾರದಿಂದ ಜಿಲ್ಲೆಯಲ್ಲಿ ಚಿತ್ರ ಮಂದಿರಗಳು ತೆರೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರಣಚಿತ್ರ ಮಂದಿರ ಮಾಲೀಕರು ತಮ್ಮ ಕೆಲವು ಬೇಡಿಕೆಗಳು ಈಡೇರುವರೆಗೂ ಚಿತ್ರ ಮಂದಿರ ತೆರೆಯುವುದು ವಿಳಂಬವಾಗಲಿದೆ ಎಂದಿದ್ದಾರೆ.
ಸರ್ಕಾರದ ಕೆಲವು ನಿಯಮಗಳು ಹಾಗೂ ನಿರ್ಮಾಪಕರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿರುವುದರಿಂದ ಚಿತ್ರ ಪ್ರದರ್ಶನಉದ್ಯಮ ಲಾಭಶೂನ್ಯವಾಗುತ್ತಿದೆ. ಹೀಗಾಗಿ ಚಿತ್ರ ಪ್ರದರ್ಶನ ಉದ್ಯಮದ ಉಳಿವಿಗಾಗಿ ಸರ್ಕಾರದ ಮತ್ತು ಚಿತ್ರ ನಿರ್ಮಾಪಕರ ಗಮನ ಸೆಳೆಯಲು ಅ.15ರಿಂದಲೇ ಚಿತ್ರ ಪ್ರದರ್ಶನಗಳ ಆರಂಭ ವಿಳಂಬವಾಗಬಹುದು ಎಂದು ಮಾಲೀಕರು ತಿಳಿಸಿದ್ದಾರೆ.
ನಿರ್ಮಾಪಕರೊಂದಿಗಿನ ಘರ್ಷಣೆಯೇ ವಿಳಂಬಕ್ಕೆ ಕಾರಣ!: ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಚಿತ್ರ ಮಂದಿರಗಳ ಆರಂಭ ವಿಳಂಬವಾಗಲು ಪ್ರಮುಖ ಕಾರಣ ಪ್ರದರ್ಶಕರು ಮತ್ತುಚಿತ್ರ ನಿರ್ಮಾಕರ ನಡುವಿನ ಸಮಸ್ಯೆಗಳುಎಂದು ಹೇಳಲಾಗಿದೆ. ಡಾ.ರಾಜ್ ಕುಮಾರ್ ಅವರ ಕಾಲದ ಚಿತ್ರಮಂದಿರಗಳಲ್ಲಿ ಸಂಗ್ರಹವಾಗುತ್ತಿದ್ದ ಒಟ್ಟು ಪ್ರದರ್ಶನ ಶುಲ್ಕದಲ್ಲಿ ಚಿತ್ರ ಮಂದಿರಗಳಿಗೆ ಇಂತಿಷ್ಟು ಹಣ ಎಂದು ಕೊಡುತ್ತಿದ್ದರು. ಆದರೆ ಇಂದು ಚಿತ್ರ ಮಂದಿರದಿಂದಲೇ ಇಂತಿಷ್ಟು ಹಣ ಪಡೆದು ಚಿತ್ರ ಕೊಡುತ್ತಿದ್ದಾರೆ. ಚಿತ್ರಕ್ಕೆ ಕೊಟ್ಟ ಹಣ ಇಲ್ಲಿ ವಾಪಸ್ ಬರುತ್ತಿಲ್ಲ. ಹೀಗಾಗಿಯೇ ಚಿತ್ರ ಮಂದಿರಗಳು ಬಾಗಿಲು ಮುಚ್ಚುತ್ತಿವೆ ಎಂಬುದು ಪ್ರದರ್ಶಕರ ಸಂಘದ ಪ್ರಮುಖ ಆರೋಪ.
ಪರವಾನಿಗೆ ಶುಲ್ಕಕಡಿಮೆ ಮಾಡಿ: ಚಿತ್ರಮಂದಿರ ಪರವಾನಿಗೆ ಶುಲ್ಕ ಪ್ರತಿ 5 ವರ್ಷಕ್ಕೊಮ್ಮೆ 25 ಸಾವಿರ ರೂ (ವಾರ್ಷಿಕ5ಸಾವಿರ ರೂಗಳಂತೆ) ವಿಧಿಸಲಾಗುತ್ತಿತ್ತು. ಆದರೆ ಇದೀಗ ಪ್ರತಿ ವರ್ಷ 25 ಸಾವಿರ ಪಾವತಿಸಲು ಸರ್ಕಾರ ಒತ್ತಾಯಿಸುತ್ತಿದೆ.ಕಳೆದ5 ವರ್ಷಗಳಿಂದ ಚಿತ್ರ ಮಂದಿರಗಳ ವಹಿವಾಟು ಕುಸಿಯುತ್ತಿದೆ. ಹೀಗಾಗಿ ಈ ಶುಲ್ಕ ದುಬಾರಿಯಾಗಿದೆ. ಮೊದಲಿನ ಶುಲ್ಕವನ್ನೇ ಪಡೆ ಯುವಂತೆ ಸರ್ಕಾರದ ಮೇಲೆ ಪ್ರದರ್ಶಕರು ಒತ್ತಡ ಹೇರಿದ್ದಾರೆ.
ವಿದ್ಯುತ್ದರ ಸಮಸ್ಯೆ: ರಾಜ್ಯದಲ್ಲಿಚಿತ್ರದ್ಯೋಮವನ್ನು ಕೈಗಾರಿಕೆ ಎಂದು ಪರಿಗಣಿಸಲಾಗಿದೆ. ಆದರೆ ವಿದ್ಯುತ್ ಶುಲ್ಕ ಮಾತ್ರ ಕಮಶೀರ್ಷಿಯಲ್ ದರ ವಿಧಿಸಲಾಗುತ್ತಿದೆ. ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 4 ರೂ. ವಿಧಿಸಲಾಗುತ್ತಿದ್ದು ಇದೇ ದರವನ್ನು ಚಿತ್ರ ಮಂದಿರಗಳಿಂದಲೂ ಪಡೆಯಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಾಗಿದೆ.
ಪಿಪಿಇ ಕಿಟ್ ಧರಿಸುವುದರಿಂದ ವಿನಾಯ್ತಿ: ಚಿತ್ರ ಮಂದಿರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕು ಎಂಬ ಕೋವಿಡ್ ಲಾಕ್‌ಡೌನ್ ಎಸ್ ಒಪಿ ಹೇಳುತ್ತದೆ. ಪಿಪಿಇ ಕಿಟ್ ಧರಿಸಿಕೊಂಡು ಕೆಲಸ ಮಾಡುವುದು ಸಾಧ್ಯವಾಗದ ಮಾತು. ಎಸ್‌ಒಪಿಯ ಎಲ್ಲಾ ನಿಯಮ ಪಾಲಿಸಲು ಸಿದ್ಧ ಆದರೆ ಪಿಪಿಇ ಕಿಟ್ ಧರಿಸುವುದರಿಂದವಿನಾಯ್ತಿಕೊಡುವಂತೆಪ್ರದರ್ಶಕರು ಆಗ್ರಹಿಸಿದ್ದಾರೆ.
ಸರ್ವಿಸ್ ಚಾರ್ಜ್ಗೆ ಅನುಮತಿ ಕೊಡಿ: ಮಹಾರಾಷ್ಟ, ಗುಜರಾತ್, ತಮಿಳುನಾಡು ಮುಂತಾದ ಬಳಕೆದಾರರಶುಲ್ಕ ವಿಧಿಸಲಾಗುತ್ತಿದೆ. ಟಿಕೆಟ್ ಮೇಲೆ ಇಂತಿಷ್ಟು ಸರ್ವಿಸ್ ಚಾರ್ಜ್‌ಎಂದು ಸಂಗ್ರಹಿಸಲಗುತ್ತಿದೆ.ಥಿಯೇಟರ್‌ಗಳ ನಿರ್ವಹಣೆ ಮತ್ತು ಸೌಲಭ್ಯ ಹೆಚ್ಚಿಸಲು ಈ ಶುಲ್ಕದ ಅಗತ್ಯವಿದೆ. ರಾಜ್ಯದಲ್ಲೂ ಈ ಶುಲ್ಕಕ್ಕೆ ಸರ್ಕಾರ ಅನುಮತಿ ನೀಡಬೇಕು. ಡಿಜಿಟಲ್ ಚಾರ್ಜ್‌ಸ್ ಪ್ರತಿ ಸಿನಿಮಾಕ್ಕೆ ಪ್ರತಿ ವಾರಕ್ಕೆ10 ಸಾವಿರ ರೂ. ಶುಲ್ಕ ಞವನ್ನು ನಿರ್ಮಾಪಕರೇ ಭರಿಸುವುದುನ್ನು ಮುಂದುವರೆಸಬೇಕು ಎಂಬುದು ಪ್ರದರ್ಶಕರ ಮತ್ತೂಂದು ಬೇಡಿಕೆಯಾಗಿದೆ.
ಈ ಎಲ್ಲಾ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಜಿಲ್ಲೆಯಲ್ಲಿ ಚಿತ್ರ ಪ್ರದರ್ಶನ ಆರಂಭ ತಡವಾಗಲಿದೆ.
ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದುಕಡಿಮೆಯಾಗಿದೆ. ಪ್ರದರ್ಶನ ಶುಲ್ಕ ಸಂಗ್ರಹಕುಸಿಯುತ್ತಿದೆ. ಆದರೆ ಪ್ರದರ್ಶಕರು ಹಣ ಕೊಟ್ಟರೆ ಮಾತ್ರ ಚಿತ್ರಕೊಡ್ತೀವಿ ಎಂದು ಚಿತ್ರ ನಿರ್ಮಾಕರು ಹೇಳುತ್ತಿದ್ದಾರೆ. ಪ್ರದರ್ಶಕರು ಲಾಭ ಮಾಡಿಕೊಳ್ಳುವುದು ಹಾಗಿರಲಿ, ನಾವುಕೊಟ್ಟ ಹಣ ವಾಪಸ್ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ. –ಜಿ.ಸುರೇಂದ್ರನಾಥ, ರಾಮನಗರ ಶ್ರೀರಾಮ ಚಿತ್ರ ಮಂದಿರ ಮಾಲೀಕರು
–ಬಿ.ವಿ.ಸೂರ್ಯಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.