Ramanagara: ಸದ್ದಿಲ್ಲದೇ ಹೆಚ್ಚಾಯ್ತು ಎಕ್ಸ್‌ಪ್ರೆಸ್ ಟೋಲ್ ದರ!
ಆಕ್ರೋಶದ ಹಿನ್ನಲೆಯಲ್ಲಿ ದರ ಹೆಚ್ಚಳವನ್ನು ವಾಪಸ್ ಪಡೆಯಲಾಗಿತ್ತು, ಮತ್ತೆ ಹೆಚ್ಚಳ...
Team Udayavani, Jun 12, 2023, 7:30 PM IST
ರಾಮನಗರ: ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು ಹೆದ್ದಾರಿ ಪ್ರಾಧಿಕಾರ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದೆ. ಜೂನ್ 1ರಿಂದಲೇ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
ಫಾಸ್ಟ್ ಟ್ಯಾಗ್ ಇರೋ ಕಾರಣ ವಾಹನ ಸವಾರರ ಗಮನಕ್ಕೂ ಬಾರದೇ ಹಣ ವಸೂಲಿ ಮಾಡಲಾಗುತ್ತಿದೆ. ಕಾರ್, ವ್ಯಾನ್, ಜೀಪ್‌ಗಳ ಏಕಮುಖ ಸಂಚಾರಕ್ಕೆ 135 ರೂ.ನಿಂದ 165ಕ್ಕೆ ಏರಿಕೆ (30 ರೂ ಹೆಚ್ಚಳ) ಮಾಡಲಾಗಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ 220 ರೂ.ನಿಂದ 270ಕ್ಕೆ ಏರಿಕೆ(50ರೂ ಹೆಚ್ಚಳ). ಟ್ರಕ್, ಬಸ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 460 ರೂ.ನಿಂದ 565ಕ್ಕೆ ಏರಿಕೆ(105 ಹೆಚ್ಚಳ). 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ 500 ರೂ.ನಿಂದ 615ಕ್ಕೆ ಏರಿಕೆ (115 ರೂ ಹೆಚ್ಚಳ).ಭಾರಿ ವಾಹನಗಳ ಏಕಮುಖ ಸಂಚಾರ 720 ರೂ.ನಿಂದ 885ಕ್ಕೆ ಏರಿಕೆ (165 ಹೆಚ್ಚಳ). 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ಎಕಮುಖ ಸಂಚಾರ 880 ರೂ.ನಿಂದ 1,080ಕ್ಕೆ ಏರಿಕೆ (200 ಹೆಚ್ಚಳ) ಮಾಡಲಾಗಿದೆ.
ಈ ಹಿಂದೆ ಏಪ್ರಿಲ್ 1ರಂದೇ ದರ ಏರಿಕೆ ಮಾಡಿದ್ದ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರ ಭಾರಿ ಆಕ್ರೋಶ ಹಿನ್ನಲೆಯಲ್ಲಿ ದರ ಹೆಚ್ಚಳವನ್ನು ವಾಪಸ್ ಪಡೆದಿತ್ತು.ಇದೀಗ ಮತ್ತೆ ಟೋಲ್ ದರ ಏರಿಕೆ ಮಾಡಲಾಗಿದ್ದು ಮತ್ತೆ ಆಕ್ರೋಶ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.