ಜಾನಪದ ಲೋಕಕ್ಕೆ ಬೆಳ್ಳಿ ಹಬ್ಬದ ಸಂಭ್ರಮ
ರೇಷ್ಮೆ ನಗರಿಯಲ್ಲಿ ನಾಡಿನ ಸಾಂಸ್ಕೃತಿಕ ಸೊಗಡು ಪರಿಚಯಿಸುವ ಕಲಾವಿದರ ಕಾಶಿ
Team Udayavani, Feb 16, 2020, 7:31 PM IST
ರಾಮನಗರ: ಜಾನಪದ ಕಲೆಗಳ, ಕಲಾವಿದರ ತವರು ಅಂತಲೇ ಗುರುತಿಸಿಕೊಂಡು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ, ಸಾಹಿತಿ ದಿವಂಗತ ಎಚ್.ಎಲ್. ನಾಗೇಗೌಡರ ಕನಸಿನ ಕೂಸು ಜಾನಪದ ಲೋಕಕ್ಕೆ ಈಗ 25ರ ಸಂಭ್ರಮ!
ಬೆಳ್ಳಿ ಹಬ್ಬದ ಆಚರಣೆಯಲ್ಲಿರುವ ಜಾನಪದ ಲೋಕ ಜನ್ಮತಳೆದಿದ್ದು, ಬೆಳೆದಿದ್ದು ರೋಚಕ! ಸಿಲ್ಕ್ ಸಿಟಿ ಬಿರುದಿನೊಂದಿಗೆ ಸಪ್ತಗಿರಿಗಳ ನಡುವೆ ಅರ್ಕಾವತಿ ನದಿಯ ದಂಡೆಯಲ್ಲಿ ಅರಳಿದ ರಾಮನಗರದಲ್ಲೇ ಜಾನಪದ ಲೋಕ ಜನ್ಮ ತಳೆದಿದ್ದು, ಈ ನೆಲದ ಪುಣ್ಯ! ಹಸಿರಿನ ಸಿರಿಯ ನಡುವೆ ಜಾನಪದ ಲೋಕ ಇಂದು ವಿವಿಧ ರಾಜ್ಯಗಳ ಜನರನ್ನು ಆಕರ್ಷಿಸುತ್ತಿದೆ. ಜಾನಪದ ಲೋಕ ಎಚ್.ಎಲ್.ನಾಗೇಗೌಡರ ಕನಸಿನ ಕೂಸು ನಿಜ. ಆದರೆ ಇವರ ಕನಸಿಗೆ ಸಹಕಾರ ನೀಡಿದ್ದು, ಅನೇಕ ಮನಸ್ಸುಗಳು. ಲೋಕದ ಹಿರಿಯ, ಕಿರಿಯ ಸಿಬ್ಬಂದಿ ಶ್ರಮದಿಂದಾಗಿ ಜಾನಪದ ಲೋಕ 25 ವರ್ಷಗಳ ಅಸ್ತಿತ್ವ ಪಡೆದುಕೊಂಡು ಇಂದು ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅನನ್ಯ ಕೊಡುಗೆ ನೀಡುತ್ತಿದೆ.
ಜಾನಪದ ಸಂಸ್ಕೃತಿ, ಕಲೆಗಳ ಲೋಕ: ಜಾನಪದ ಸಂಸ್ಕೃತಿ, ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸ ರಣ ಮತ್ತು ದಾಖಲಾತಿ ಕಾರ್ಯ ನಡೆಸುತ್ತಿದೆ. ಜಾನಪದ ಚಟುವಟಿಕೆಗಳ ಪ್ರಮುಖ ತಾಣವಾಗಿರುವ ಜಾನಪದ ಲೋಕದಲ್ಲಿ ಜಾನಪದ ಪ್ರದರ್ಶನ, ಪ್ರಾತ್ಯಕ್ಷಿಕೆ, ಸಂಶೋಧನೆ, ತರಬೇತಿ, ವಿಚಾರ ಸಂಕಿರಣ, ಜಾನಪದ ಮೂಲ ಕಲಾವಿದರಿಂದ ಕಾರ್ಯಕ್ರಮ ಆಯೋಜನೆಯಾಗುತ್ತಿವೆ. ಜನಮಾನಸದಿಂದ ದೂರ ಸರಿಯುತ್ತಿರುವ ದೇಸಿ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ.
ಅಪರೂಪದ ವಸ್ತು ಸಂಗ್ರಹಾಲಯ ಇಲ್ಲಿವೆ: ಜಾನಪದ ಲೋಕದಲ್ಲಿರುವ ವಸ್ತು ಸಂಗ್ರಹಾಲಯಗಳಲ್ಲಿ ಗ್ರಾಮೀಣ ಭಾರತದ ವಸ್ತುಗಳ ಅಪಾರ ಸಂಗ್ರಹವಿದೆ. ಬಹುಶಃ ದೇಶದಲ್ಲೇ ಅಪರೂಪದ ಜನಪದೀಯ ವಸ್ತು ಗಳನ್ನು ಈ ಸಂಗ್ರಹಾಲಯಗಳಲ್ಲಿ ಕಾಣ ಸಿಗುತ್ತವೆ. ಚಿತ್ರ ಕುಟೀರದಲ್ಲಿ ನಾಡಿನ ಹಬ್ಬ, ಕಲೆ, ಆಚರಣೆಗಳು, ಜಾತ್ರೆಗಳನ್ನು ಕಣ್ಣಿಗೆ ಕಟ್ಟುವಂತಹ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದೆ. ಎರಡು ಅಂತಸ್ತಿನ ಕಟ್ಟಡ ಲೋಕಮಹಲ್‌ನಲ್ಲಿ ಅಪರೂಪದ ಜನಪದೀಯ ವಸ್ತುಗಳ ಸಂಗ್ರಹವಿದೆ. ವೇಷ ಭೂಷಣಗಳು, ಗತ ಕಾಲದ ಅಡುಗೆಮನೆ ಉಪ ಕರಣಗಳು, ಪೂಜಾ ವಸ್ತುಗಳು, ತೂಕ ಅಳತೆ ಸಾಧನ ಗಳು, ವೈವಿದ್ಯಮಯ ಜಾನಪದ ವಾದ್ಯಗಳ ಸಮೂಹವಿದೆ. ಶಿಲ್ಪಮಾಲ ಸಂಗ್ರಹದಲ್ಲಿ ಸುಮಾರು 200 ವರ್ಷಗಳ ಹಿಂದಿನ ವೀರಗಲ್ಲು, ಶಾಸನ ರಥ ಮುಂತಾದವುಗಳಿವೆ. ಲೋಕಮಾತ ಮಂದಿರದಲಿ ಗ್ರಾಮೀಣ ಸೊಗಡು, ಸೊಗಸು, ಸೊಬಗುಗಳ ಆಗರವೇ ಇಲ್ಲಿದೆ. ಗ್ರಾಮೀಣರು ಬಳಸುವ ವಸ್ತುಗಳು ಸೇರಿದಂತೆ ಅನೇಕ ವಸ್ತು ಗಳು ಇಲ್ಲಿವೆ. ಒಟ್ಟಾರೆ ಜಾನಪದ ಲೋಕದ ವಸ್ತು ಸಂಗ್ರಹಾಲಯಗಳು ವಿಸ್ಮಯಗಳ ಆಗರವಾಗಿದೆ.
ಜಾನಪದ ಲೋಕದಲ್ಲಿ ಜಾನಪದ ಕಲೆಗಳನ್ನು ಪ್ರತಿನಿಧಿಸುವ ಆಳೆತ್ತರದ ಗೊಂಬೆಗಳಿವೆ, ಗ್ರಾಮೀಣ ಜನ ಜೀವನ ಪ್ರತಿಬಿಂಬಿಸುವ ಗೊಂಬೆಗಳು ಇಲ್ಲಿವೆ. ಕಲಿಯುವ ಆಸಕ್ತಿ ಇದ್ದರೆ ಅವಕಾಶ: ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯ ನಶಿಸುತ್ತಿದೆ ಎಂಬ ಆತಂಕದ ನಡುವೆಯೇ ಜಾನಪದ ಕಲೆಗಳನ್ನು ಕಲಿಯುವ ಆಸಕ್ತರು ಇದ್ದಾರೆ. ಇಂತಹ ಆಸಕ್ತರಿಗಾಗಿಯೇ ಜಾನಪದ ಲೋಕದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಗೇಗೌಡ ಕಲಾ ಶಾಲೆಯಲ್ಲಿ ಕಲಾ ತರಬೇತಿ ನೀಡಲಾಗುತ್ತದೆ. ಈಗಾಗಲೆ 500ಕ್ಕೂ ಹೆಚ್ಚು ಮಂದಿ ಇಲ್ಲಿ ಜಾನಪದ ಹಾಡುಗಾರಿಕೆ ಕಲಿತಿದ್ದಾರೆ. ಎಳೆಯರು ಸೇರಿದಂತೆ ನೂರಾರು ಮಂದಿ ಇಲ್ಲಿ ಜಾನಪದ ಕುಣಿತಗಳ ತರಬೇತಿ ಪಡೆದುಕೊಂಡಿದ್ದಾರೆ. ಜಾನಪದ ಮಹಾವಿದ್ಯಾಲಯದವತಿಯಿಂದ ಇಲ್ಲಿ ಜಾನಪದ ಸರ್ಟಿಫಿಕೇಟ್ ಮತ್ತು ಜಾನಪದ ಡಿಪ್ಲೋಮಾ ಕೋರ್ಸುಗಳೀಗೆ ಶನಿವಾರ ಮತ್ತು ಭಾನುವಾರ ತರಬೇತಿ ತರಗತಿಗಳು ಇಲ್ಲಿ ನಡೆಯುತ್ತಿವೆ.
ವೀಕೆಂಡ್ ಕಾರ್ಯಕ್ರಗಳು: ಇಲ್ಲಿ ಪ್ರತಿ ಭಾನುವಾರ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತದೆ. ಪ್ರತಿ ತಿಂಗಳ ಎರಡನೇ ಶನಿವಾರ ಲೋಕಸಿರಿ ಕಾರ್ಯ ಕ್ರಮದಲ್ಲಿ ಜಾನಪದ ಕಲೆಗಳ ಸಾಧಕರನ್ನು ಕರೆಸಿ ಅವರನ್ನು ಸನ್ಮಾನಿಸಿ, ಅವರಿಂದ ಕಲೆಗಳ ಪ್ರದರ್ಶನ ಮತ್ತು ಸಾರ್ವಜನಿಕರೊಂದಿಗೆ ಸಂವಾದ ಕಾರ್ಯ ಕ್ರಮ ಆಯೋಜಿಸಲಾಗುತ್ತಿದೆ. ಜಾನಪದ ಲೋಕದಲ್ಲಿರುವ ಹಲವಾರು ಆಕರ್ಷಣೆಗಳ ಪೈಕಿ ಇಲ್ಲಿನ ಬಯಲು ರಂಗಮಂದಿರ
ಹೆಚ್ಚು ಗಮನ ಸೆಳೆಯುತ್ತದೆ.
ಗ್ರೀಕ್ ಶೈಲಿಯಲ್ಲಿರುವ ಮಂದಿರದಲ್ಲಿ ಸುಮಾರು 1,000 ಮಂದಿ ಕುಳಿತು ಕೊಳ್ಳಬಹುದು. ಚಿಂತನ-ಮಂಥನಗಳ ವೇದಿಕೆ:ಜಾನಪದ ಲೋಕ ಕೇವಲ ಕಲಾವಿದರ ತವರು ಮಾತ್ರವಲ್ಲ. ಅದು ಜಾನಪದ ಸಂಶೋಧಕರಿಗೆ ಅಧ್ಯಯನ ಕೇಂದ್ರವೂ ಆಗಿದೆ. ಚಿಂತನ-ಮಂಥನಗಳ ವೇದಿಕೆಯಾಗಿದೆ. ರಾಜ್ಯ, ದೇಶದ ಪ್ರವಾಸಿಗಳ ಗಮನ ಸೆಳೆಯಲಾರಂಭಿಸಿದೆ. 25ರ ಹರೆಯದ ಈ ಲೋಕ ವಿಸ್ಮಯಗಳ ಆಗರ. ಅಧುನಿಕತೆಯ ಹೊಡೆತದಿಂದ ನೇಪಥ್ಯಕ್ಕೆ ಸರಿಯುತ್ತಿರುವ ಗ್ರಾಮೀಣ ಸೊಗಡನ್ನು ತನ್ನ ಒಡಲಲ್ಲಿ ಇಟ್ಟು ಕೊಂಡು ಬೆಳೆಸುತ್ತಿದೆ. ಪ್ರವಾಸಿಗರ ಪ್ರಮುಖ ತಾಣವಾಗಿ ರೂಪುಗೊಳ್ಳುತ್ತಿದೆ. 2020ರ ಜನವರಿ 1ರಂದು ಜಾನಪದ ಲೋಕದಲ್ಲಿ ಸುಮಾರು 1 ಲಕ್ಷ ರೂ. ಪ್ರವೇಶ ಶುಲ್ಕದಿಂದಲೇ ವಸೂಲಾಗಿದೆ. ಅಂದರೆ ಜಾನಪದ ಲೋಕದ ಜನಪ್ರಿಯತೆ ವಿಸ್ತಾರವಾಗಿದೆ ಅಂತಲೇ ಅರ್ಥ!.
ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಜಾನಪದ ಲೋಕ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿ ರೂಪುಗೊಂಡಿದೆ. ಸಿಲ್ಕ್, ಮಿಲ್ಕ್, ಮಾವು ಮತ್ತು ಇದೀಗ ಜಾನಪದ ಕಲೆಗಳ ತವರಾಗಿ ಜಿಲ್ಲೆಯ ಹೆಸರು ಮಾಡುತ್ತಿವೆ .
ಎಚ್.ಎಲ್.ನಾಗೇಗೌಡರು ವರ್ಷಗಳ ಕಾಲ ರಾಜ್ಯದ ಮೂಲೆ ಮೂಲೆ ಸುತ್ತಿ ಜಾನಪದ ಗೀತೆ, ಸೋಬಾನೆ ಪದ, ಕಲೆಗಳ ಮೂಲ ಸ್ವರೂಪಗಳನ್ನು ಆಡಿಯೋ ಮತ್ತು ಚಿತ್ರಗಳ ಮೂಲಕ ಸಂಗ್ರಹಿಸಿದ್ದಾರೆ. ಇವೆಲ್ಲ ಜಾನಪದ ಲೋಕದಲ್ಲಿ ರಕ್ಷಣೆಯಲ್ಲಿವೆ. ಜಾನಪದ ಲೋಕ ಸದ್ಯ ಸುಂದರ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದೆ.
●ಟಿ.ತಿಮ್ಮೇಗೌಡ, ಅಧ್ಯಕ್ಷರು, ಜಾನಪದ
ಲೋಕ
●ಬಿ.ವಿ.ಸೂರ್ಯಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.