ರಾಮನಗರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿ
Team Udayavani, Nov 18, 2019, 4:52 PM IST
ರಾಮನಗರ: ರಾಮನಗರ ನಗರಸಭೆ ವತಿಯಿಂದ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಸಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶ ನಾಲಯದಡಿ ಸ್ಥಾಪನೆಯಾಗಿರುವ ಸಿಟಿ ಮ್ಯಾನೇಜರ್ಅ ಸೋಶಿಯಷನ್ ಆಫ್ ಕರ್ನಾಟಕ (ಸಿ.ಎಂ.ಎ.ಕೆ) ಪ್ರತಿ ವರ್ಷ ಅತ್ಯುತ್ತಮ ವ್ಯವಸ್ಥೆ ಪ್ರಶಸ್ತಿಯನ್ನು ಕೊಡುತ್ತಿದ್ದು, ರಾಮನಗರ ನಗರಸಭೆ ಸ್ಥಾಪಿಸಿರುವ ಹಸಿ ಕಸದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ
(ಬಯೋಮಿಥನೈಸೇಷನ್ ಪ್ಲಾಂಟ್ ಫಾರ್ ಎಲೆಕ್ಟ್ರಿಸಿಟಿ ಜನರೇಷನ್) ರಾಜ್ಯ ಮಟ್ಟದ ತೃತೀಯ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ. ಪ್ರಶಸ್ತಿ ಪತ್ರದ ಜೊತೆಗೆ 50 ಸಾವಿರ ರೂ ನಗದುಹಣ ಕೂಡ ಲಭಿಸಿದ್ದು, ಈ ಘಟಕವನ್ನು 2017-18ನೇ ಸಾಲಿನ ಅತ್ಯುತ್ತಮ ವ್ಯವಸ್ಥೆ ಎಂದು ದಾಖಲಿಸಿಕೊಳ್ಳಲಾಗಿದೆ ಎಂದು ಸಿ.ಎಂ.ಎ.ಕೆ ನೀಡಿರುವ ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ.
ನಗರದಲ್ಲಿ ಉತ್ಪತ್ತಿಯಾಗುವ ಟನ್ ಗಟ್ಟಲೆ ತ್ಯಾಜ್ಯದ ನಿರ್ವಹಣೆಗೆ ಸ್ಥಳೀಯ ನಗರಸಭೆ ಕೆಲ ವರ್ಷಗಳ ಹಿಂದೆಯೇ ಈ ಘಟಕವನ್ನು ಆರಂಭಿಸಿತ್ತು. ಹಸಿ ತ್ಯಾಜ್ಯವನ್ನು ನಾಗರಿಕರು ಬೇರ್ಪಡಿಸಿಕೊಡದಿದ್ದರೂ, ನಗರಸಭೆಯ ಸಿಬ್ಬಂದಿಯೇ ಹಸಿ ಕಸವನ್ನು ಬೇರ್ಪಡಿಸಿ ಬಯೋಮಿಥನೈಸೇಷನ್ ಪ್ಲಾಂಟ್ ಪಾರ್ ಎಲೆಕ್ಟ್ರಿಸಿಟಿ ಜನರೇಷನ್ ಘಟಕಕ್ಕೆ ಸುರಿಯುತ್ತಾರೆ. ಹಸಿ ಕಸದ ಮೂಲಕ ವಿದ್ಯುತ್ ಉತ್ಪಾದಿಸಿ ಸ್ಥಳೀಯವಾಗಿ ಬೀದಿ ದೀಪಗಳನ್ನು ಬೆಳಗಿಸಲು ಉಪ ಯೋಗಿಸಲಾಗುತ್ತಿದೆ.
ಕಸ ನಿರ್ವಹಣೆ ತೀರಾ ಕಷ್ಟದ ಕೆಲಸ. ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಕಸ ನಿರ್ವಹಣೆಮಾಡುವುದು ಸಹ ಸವಾಲಿನ ಕೆಲಸ. ನಗರಸಭೆಯ ಅಧಿಕಾರಿಗಳು ಹಸಿ ಕಸವನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದಿಸಿ ಅದನ್ನು ಸಾರ್ವಜನಿಕರಿಗೆ ಸಮರ್ಪಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ. ಇದೀಗ ಈ ಕಾರ್ಯಕ್ಕೆ ಪ್ರಶಸ್ತಿ ಸಿಕ್ಕಿ ರುವುದು ಅಧಿಕಾರಿಗಳಲ್ಲಿ ಸಂತಸ ತಂದಿದೆ. ಸಾರ್ವಜನಿಕರು ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಡನೆ ಸಹಕರಿಸಬೇಕಾಗಿದೆ.
ಹಸಿ ಕಸವನ್ನು ಬೇರ್ಪಡಿಸಿಕೊಟ್ಟರೆ ಇಂತಹ ಇನ್ನಷ್ಟು ಘಟಕಗಳನ್ನು ಆಯಾ ವಾರ್ಡುಗಳಲ್ಲೇ ಸ್ಥಾಪಿಸಿ ವಿದ್ಯುತ್ ಉತ್ಪಾದಿಸಿ ಬೀದಿ ದೀಪಗಳಿಗೆ ಉಪಯೋಗಿಸಬಹುದು. ಬಯೋ ಮಿಥನೈಸೇಷನ್ ಘಟಕದಿಂದ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ. ಯಾವುದೇ ವಾಸನೆ ಬರುವುದಿಲ್ಲ. ದ್ಯಾವರಸೇಗೌಡನ ದೊಡ್ಡಿ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಈ ಘಟಕವನ್ನು ಸಾರ್ವಜನಿಕರು ನೋಡಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.