ಮಳೆ ನೀರು ಪೈಪ್‌ನಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ
Team Udayavani, Jul 5, 2021, 5:18 PM IST
ರಾಮನಗರ: ನೂತನವಾಗಿ ನಿರ್ಮಾಣವಾಗುತ್ತಿರುವಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿರಸ್ತೆಯ ಕೆಳೆಗೆ ಅಳವಡಿಸಿರುವ ಮಳೆ ನೀರು ಹರಿದುಹೋಗುವ ಪೈಪ್‌ನೊಳಗೆ ನುಸುಳಿದ್ದ ವ್ಯಕ್ತಿಯೊಬ್ಬಹಿಂದಕ್ಕೂ ಬರಲಾಗದೆ, ಮುಂದಕ್ಕೂ ಹೋಗಲಾಗದೆ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ಸಿಂಗ್ರಾಬೋವಿದೊಡ್ಡಿಬಳಿಯಲ್ಲಿ ನಡೆದಿದೆ.
ಘಟನೆ: ನಗರದ ಸಿಂಗ್ರಾಬೋವಿದೊಡ್ಡಿ ಬಳಿಯಲ್ಲಿಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಕೆಳಗಡೆಮಳೆ ನೀರು ಹರಿದು ಹೋಗಲು ಸುಮಾರು 4 ಅಡಿಅಗಲದ ಸಿಮೆಂಟ್ ಪೈಪು ಅಳವಡಿಸಲಾಗಿದೆ.
ಸಿಂಗ್ರಾಬೋವಿ ದೊಡ್ಡಿ ನಿವಾಸಿ ರೈತ ರಾಜಣ್ಣ ಅಲಿಯಾಸ್‌ಗೋವಿಂದರಾಜು (48) ಅವರ ಜಮೀನು ರಸ್ತೆಯಎರಡೂ ಬದಿಗಳಲ್ಲಿದೆ. ಒಂದು ಬದಿಯಲ್ಲಿದ್ದಕೊಳವೆಬಾವಿಯಿಂದ ಮತ್ತೂಂದು ಬದಿಯ ತಮ್ಮ ಜಮೀನಿಗೆ ನೀರು ಹರಿಸಬೇಕಿತ್ತು. ಇದಕ್ಕೆ ಅವರು ಪ್ಲಾಸ್ಟಿಕ್‌ಪೈಪ್ ಎಳೆಯಬೇಕಿತ್ತು. ಭಾನುವಾರ ಬೆಳಗ್ಗೆ10 ಗಂಟೆವೇಳೆಗೆ ರಸ್ತೆ ಕೆಳೆಗೆ ಇದ್ದ ಮಳೆ ನೀರು ಹರಿಯುವಪೈಪಿನೊಳಗೆ ಪ್ಲಾಸಿಟಿಕ್ ಪೈಪ್ ಹಿಡಿದು ತೆವಳುತ್ತಾಸಾಗಿದ್ದಾರೆ.
ವ್ಯಕ್ತಿಗೆ ಆಮ್ಲ ಜನಕ ಪೂರೈಕೆ: ಸುಮಾರು 150 ಅಡಿತೆವಳುತ್ತಾ ಸಾಗಿದ ನಂತರ ಮಳೆ ನೀರು ಪೈಪಿನಲ್ಲಿಮಣ್ಣು ಸೇರಿಕೊಂಡು ಕೆಸರಿನಂತಾಗಿದ್ದು, ಅಲ್ಲಿ ಸಿಲುಕಿದ್ದಾರೆ. ಮತ್ತೆ ವಾಪಸ್ಸು ಬರಲಾಗದೆ, ಮುಂದಕ್ಕೂಹೋಗಲಾಗದೆ ಚೀರಾಡ ತೊಡಗಿದ್ದಾರೆ. ಚೀರಾಟಕೇಳಿದ ಅಲ್ಲೆ ಇದ್ದ ಅವರ ಮಗ ವೇಣುಗೋಪಾಲಮತ್ತು ಇತರರು ತಕ್ಷಣ ಗ್ರಾಮಾಂತರ ಪೊಲೀಸರಿಗೆಕರೆ ಮಾಡಿದ್ದಾರೆ. ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜೆಸಿಬಿ ಯಂತ್ರಗಳ ಸಹಾಯದಲ್ಲಿ ಹೆದ್ದಾರಿ ರಸ್ತೆ ಬದಿಯಲ್ಲಿ ಹಳ್ಳತೋಡಿ ಸಿಮೆಂಟ್ ಪೈಪ್ ಒಡೆದು ಹಾಕಿದ್ದಾರೆ.ಗೋವಿಂದರಾಜು ಪೈಪ್‌ನೊಳಗೆ ಇರುವುದನ್ನು ಖಾತ್ರಿಪಡಿಸಿಕೊಂಡು ಧೈರ್ಯ ತುಂಬಿ, ಆಮ್ಲ ಜನಕ ಪೂರೈಸಿದ್ದಾರೆ. ತದ ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿಸಹ ಸುಮಾರು 10-15 ಅಡಿ ತೆವಳಿ ರಾಜಣ್ಣರನ್ನುರಕ್ಷಿಸಿದ್ದಾರೆ.
ಕುಟುಂಬದ ಸದಸ್ಯರ ಹರ್ಷ: ಸುಮಾರು ಒಂದುಗಂಟೆಯಕಾಲ ಹರಸಾಹಸದ ನಂತರ ಗೋವಿಂದರಾಜುರನ್ನು ಕಂಡ ಅವರ ಪತ್ನಿ, ಮಗ ವೇಣುಗೋಪಾಲಮತ್ತು ಸಂಬಂಧಿಕರು ಆನಂದಬಾಷ್ಟ ಸುರಿಸಿಮತ್ತೂಂದು ಜನ್ಮ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪೈಪ್‌ನೊಳಗಿನಿಂದ ರಾಜಣ್ಣರನ್ನು ಹೊರ ಕರೆತಂದ ದೃಶ್ಯ ಕಂಡ ಅಲ್ಲಿ ಜಾಮಾಯಿಸಿದ್ದ ನಾಗರಿಕರುಚಪ್ಪಾಳೆ ತಟ್ಟಿ ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನುಅಭಿನಂದಿಸಿದರು. ಅಗ್ನಿ ಶಾಮಕ ದಳದ ಸಿಬ್ಬಂದಿರಾಜಣ್ಣರಿಗೆ ಕುಡಿಯುವ ನೀರು ಕೊಟ್ಟು ಉಪಚರಿಸಿದ ನಂತರ ಅವರ ಆರೋಗ್ಯ ತಪಾಸಣೆಗೆ ಜಿಲ್ಲಾಸ್ಪತ್ರೆಗೆಕರೆದೊಯ್ಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.