ಟೋಲ್‌ ಪ್ಲಾಜಾದಿಂದಲೇ ಕಿರಿಕಿರಿ ಆರಂಭ


Team Udayavani, Jun 19, 2023, 1:46 PM IST

ಟೋಲ್‌ ಪ್ಲಾಜಾದಿಂದಲೇ ಕಿರಿಕಿರಿ ಆರಂಭ

ರಾಮನಗರ: ಬೆಂ-ಮೈ ಅಕ್ಸೆಸ್‌ ಕಂಟ್ರೋಲ್‌ ಹೈವೇ ಸಮಸ್ಯೆಯ ಆಗರವೆನಿಸಿದೆ. ಈ ಹೆದ್ದಾರಿ ಅವ್ಯವಸ್ಥೆ ಟೋಲ್‌ ಪ್ಲಾಜಾದಿಂದಲೇ ಆರಂಭವಾಗುತ್ತಿದ್ದು, ಆರಂ ಭ ದಿಂದ ಅಂತ್ಯದವರೆಗೆ ಸಮಸ್ಯೆಗಳ ಆಗರವೇ ಆಗಿದೆ. ಹೆದ್ದಾರಿಯ ಟೋಲ್‌ ಪ್ಲಾಜಾನಲ್ಲಿ ಕಿರಿಕಿರಿ ಅನುಭವಿಸಿಕೊಂಡೇ ಪ್ರಯಾಣಿಕರು ಎಕ್ಸ್‌ಪ್ರೆಸ್‌ ಹೈವೇಗೆ ಎಂಟ್ರಿ ಪಡೆಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಹೌದು..,ರಾಷ್ಟ್ರೀಯ ಹೆದ್ದಾರಿ 275ರ ಬೆಂ.-ಮೈ. ನಡುವಿನ ಬೆಂ-ಮೈ ನಗರಗಳ ನಡುವೆ ಎರಡೂ ಬದಿ ನಾಲ್ಕು ಪಥ ಸರ್ವೀಸ್‌ ರಸ್ತೆ, 6 ಪಥ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣ ಕಾಮ ಗಾರಿ ಮೊದಲ ಹಂತ ಪೂರ್ಣ ಗೊಂ ಡು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾ.12 ರಂದು ಉದ್ಘಾಟನೆಯನ್ನೂ ಕಂಡಿತು. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೆದ್ದಾರಿ ಪ್ರಾಧಿಕಾರ ದುಬಾರಿ ಟೋಲ್‌ ಸಂಗ್ರ ಹಕ್ಕೆ ಮುಂದಾಗಿದೆ.

ಇನ್ನು ಟೋಲ್‌ ಸಂಗ್ರಹದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತಾದರೂ, ಟೋಲ್‌ ಸಂಗ್ರಹ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರ ಟೋಲ್‌ ಶುಲ್ಕವನ್ನು ಹೆಚ್ಚಳಗೊಳಿಸಿದೆ. ಆದರೆ, ಟೋಲ್‌ ಬೂತ್‌ನಲ್ಲಿ ದಿನನಿತ್ಯ ಎದುರಾಗುತ್ತಿರುವ ಸಮಸ್ಯೆಗಳನ್ನು ಮಾತ್ರ ಪರಿಹರಿಸಲು ಮುಂದಾಗಿಲ್ಲ.

ಟೋಲ್‌ ಸಿಬ್ಬಂದಿಗಳ ಅನುಚಿತ ವರ್ತನೆ: ಬೆಂಗ‌ಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಕಡೆಗೆ ಹೋಗು ವವರಿಗೆ ಬಿಡದಿಯ ಶೇಷಗಿರಿ ಹಳ್ಳಿ ಬಳಿ, ಬೆಂಗಳೂರಿ ನಿಂದ ಮೈಸೂರು ಕಡೆಗೆ ಹೋಗುವವರಿಗೆ ಕಣಿ¾ಣಿಕೆ ಬಳಿಯ ಟೋಲ್‌ ಬೂತ್‌ಗಳಲ್ಲಿ ಟೋಲ್‌ ಸಂಗ್ರಹ ಮಾಡಲಾಗುತ್ತದೆ. ಈ ಎರಡೂ ಟೋಲ್‌ಬೂತ್‌ ಗಳಲ್ಲಿನ ಸಿಬ್ಬಂದಿ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ.

ಟೋಲ್‌ ಸಿಬ್ಬಂದಿ ಗುಂಪುಗೂಡಿ ರೌಡಿಸಂ: ಟೋಲ್‌ ಸಿಬ್ಬಂದಿ ಪ್ರಯಾಣಿಕರ ಜೊತೆಗೆ ಅನುಚಿ ತವಾಗಿ ವರ್ತಿಸುತ್ತಿದ್ದು, ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿದೆ. ಪ್ರಯಾಣಿ ಕರು ಟೋಲ್‌ ಸಿಬ್ಬಂದಿಯನ್ನು ಗಟ್ಟಿಯಾಗಿ ಪ್ರಶ್ನಿಸಿ ದರೆ ಟೋಲ್‌ ಸಿಬ್ಬಂದಿ ಗುಂಪುಗೂಡಿ ರೌಡಿಸಂ ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಟೋಲ್‌ ಸಿಬ್ಬಂದಿ ಬೆಂಗಳೂರಿನ ಯುವಕರ ಜೊತೆ ಮಾರಾಮಾರಿ ನಡೆಸಿದ್ದು, ಇದೇ ಸೇಡನ್ನು ಇರಿಸಿಕೊಂಡು ಹಿಂದಿರುಗಿ ಬಂದ ಯುವಕರು ಟೋಲ್‌ ಸಿಬ್ಬಂದಿಯನ್ನು ಕೊಲೆ ಮಾಡಿದ ಪ್ರಸಂಗವನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಶಾಸಕರಿಗೂ ಗೌರವವಿಲ್ಲ: ಟೋಲ್‌ ಬೂತ್‌ಗಳಲ್ಲಿ ಯಾರೆಂದರೆ ಯಾರಿಗೂ ಗೌರವ ವಿಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ, ಆಡಳಿತ ಪಕ್ಷದ ಶಾಸಕ ನರೇಂದ್ರಸ್ವಾಮಿ ಅವರಿಗೆ ಟೋಲ್‌ ಸಿಬ್ಬಂದಿ ಅವಾಜ್‌ ಹಾಕಿ, ಶಾಸಕರಾದರೆ ನನಗೇನು ಎಂದು ಉದ್ದಟತನದ ಪ್ರಶ್ನೆಯನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಸೋಜಿಗದ ಸಂಗತಿ ಎಂದರೆ ಟೋಲ್‌ ಸಿಬ್ಬಂದಿಯ ವಿರುದ್ಧ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಟೋಲ್‌ ಪ್ಲಾಜಾ ಬಳಿ ಪ್ರತಿದಿನ ಒಂದಿಲ್ಲೊಂದು ಗಲಾಟೆ ನಡೆಯುತ್ತಲೇ ಇದೆ. ಟೋಲ್‌ ಸಿಬ್ಬಂದಿಯ ದೌರ್ಜನ್ಯಕ್ಕೆ ಪ್ರಯಾಣಿಕರು ಹೈರಾ ಣಾ ಗಿದ್ದಾರೆ. ಈ ಅವವ್ಯಸ್ಥೆ ಬಗ್ಗೆ ಯಾರೂ ಪ್ರಶ್ನಿ ಸುತ್ತಿಲ್ಲ. ಪೊಲೀಸರು ಟೋಲ್‌ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಸಾಕಷ್ಟು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ.

ಹೈವೇ ಟೋಲ್‌ ಪ್ಲಾಜಾ ಬಳಿಯ ಸಮಸ್ಯೆಗಳು :

 ಟೋಲ್‌ ಪ್ಲಾಜಾ ಒಳಗೆ ಹೋಗುವಾಗ ನೆಲ ಹಾಸಿಗೆ ಅಳವಡಿಸಿರುವ ಮೆಟಲ್‌ ಪೈಪ್‌ಗ್ಳು ಶಬ್ದ ಮಾಡುತ್ತಿದ್ದು, ಇವುಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಇದರಿಂದ ಪ್ರಯಾಣಿಕರು ಭಯಪಡುವಂತಾಗಿದೆ. ಟೋಲ್‌ ಪ್ಲಾಜಾ ಸಿಬ್ಬಂದಿಗಳು ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವುದನ್ನು ಕಲಿಸಬೇಕಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಗಮನಹರಿಸಬೇಕು.

 ಟೋಲ್‌ ಬೂತ್‌ಗಳಲ್ಲಿ ಕೆಲವೊಮ್ಮೆ ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಕಡಿತವಾದರೂ, ಗೇಟ್‌ಗಳು ತೆರೆಯುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರು ದುಪ್ಪಟ್ಟು ಶುಲ್ಕ ತೆತ್ತುವಂತಾಗಿದೆ.  ಟೋಲ್‌ ಪ್ಲಾಜಾ ನಿರ್ವಹಣೆ ಮಾಡುವ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಹೊರ ರಾಜ್ಯದವರಾಗಿದ್ದು, ಅವರಿಗೆ ಕನ್ನಡ ಬರುವುದಿಲ್ಲ. ಇದರಿಂದ ಟೋಲ್‌ ಸಮಸ್ಯೆ ಹೇಳಿದರೂ ಅವರು ಕೇಳಿಸಿಕೊಳ್ಳುತ್ತಿಲ್ಲ.

 ಎಲ್ಲಾ ಟೋಲ್‌ ಪ್ಲಾಜಾಗಳಲ್ಲಿ ಸ್ಥಳೀಯ ವಾಹನಗಳಿಗೆ ರಿಯಾಯ್ತಿ ನೀಡಲಾಗುತ್ತದೆ. ಆದರೆ, ಎನ್‌ಎಚ್‌ 275 ಟೋಲ್‌ ಪ್ಲಾಜಾದಲ್ಲಿ ರಾಮನಗರ ಜಿಲ್ಲೆಯ ವಾಹನಗಳಿಗೆ ಯಾವುದೇ ರಿಯಾಯ್ತಿ ಇಲ್ಲವಾಗಿದೆ.

ಸಂಚಾರದ ವೇಳೆ ಸದ್ದು ಮಾಡುವ ಪೈಪ್‌ಗಳು: ಟೋಲ್‌ ಬೂತ್‌ಗಳ ಬಳಿ ಅಳವಡಿಸಿರುವ ಪೈಪ್‌ಗ್ಳ ಗುಣಮಟ್ಟದ ಅಸಮರ್ಪಕವಾಗಿದ್ದು, ವಾಹನಗಳು ಈ ಪೈಪ್‌ಗ್ಳ ಮೇಲೆ ಸಂಚರಿಸಿದಾಗ ಸದ್ದಾಗುತ್ತಿದೆ. ಕೆಲವೊಮ್ಮೆ ಪೈಪ್‌ಗ್ಳು ತುಂಡಾಗಿ ಬಿಡುತ್ತದೆ ಎಂಬ ಭಯ ಸಹ ಜನತೆಯನ್ನು ಕಾಡುತ್ತಿದೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.

ತೆರೆದು ಕೊಳ್ಳದ ಗೇಟ್‌ಗಳು : ಟೋಲ್‌ ಬೂತ್‌ಗೆ ಅಳವಡಿಸಿರುವ ಗೇಟ್‌ ಗಳು(ಬೂಮ್‌) ಫಾಸ್ಟ್‌ ಟ್ಯಾಗ್‌ ರೀಡ್‌ ಆಗುತ್ತಿದ್ದಂತೆ ಸ್ವಯಂಚಾಲಿತವಾಗಿ ತೆರೆದುಕೊಳ್ಳಬೇಕು. ಆದರೆ, ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಕಟ್‌ ಆದರೂ ತೆರೆದಕೊಳ್ಳುತ್ತಿಲ್ಲ. ಗೇಟ್‌ ತೆರೆಯದೇ ಹೋದರೆ ನಮಗೆ ಗೊತ್ತಿಲ್ಲ ಎಂದು ಟೋಲ್‌ ಸಿಬ್ಬಂದಿ ಬಿಲ್‌ ನೀಡಿ ದುಪ್ಪಟ್ಟು ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ದುಂಡಾವರ್ತನೆ ಮಾಡುತ್ತಾರೆ. ಕೆಲವೊಮ್ಮೆ ಫಾಸ್ಟ್‌ಟ್ಯಾಗ್‌ನಲ್ಲೂ ಹಣ ಕಟ್‌ ಆಗುವ ಜೊತೆಗೆ ಟೋಲ್‌ನಲ್ಲೂ ದುಪ್ಪಟ್ಟು ಹಣ ಕಟ್ಟಿಸಿಕೊಂಡು ಗ್ರಾಹಕರ ಜೇಬಿಗೆ ಬರೆ ಹಾಕಲಾಗುತ್ತಿದೆ.

-ಸು.ನಾ. ನಂದಕುಮಾರ್‌

ಟಾಪ್ ನ್ಯೂಸ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.