Ramnagar: ಆರೋಗ್ಯ ವಿವಿಗೆ ಮತ್ತೂಮ್ಮೆ ಭೂಮಿಪೂಜೆ
Team Udayavani, Sep 28, 2023, 1:38 PM IST
ರಾಮನಗರ: ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟಕ್ಕೆ ವೇದಿಕೆಯಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಇದೀಗ ಮತ್ತೂಮ್ಮೆ ಭೂಮಿಪೂಜೆ ನಡೆಯಲಿದೆ!.
ಹೌದು.., ಈಗಾಗಲೇ ಮೂರು ಬಾರಿ ಭೂಮಿಪೂಜೆ ಕಂಡಿರುವ ಆರೋಗ್ಯ ವಿವಿಗೆ ಐದನೇ ಬಾರಿಗೆ ಭೂಮಿಪೂಜೆ ಮಾಡಿಸಲು ಕ್ಷೇತ್ರದ ಶಾಸಕರು ಮುಂದಾಗಿದ್ದಾರೆ. ಈ ಸಂಬಂಧ ನಗರದ ಪ್ರಮುಖ ರಸ್ತೆಯಲ್ಲಿ ಶಾಸಕರ ಬೆಂಬಲಿಗರು ಬ್ಯಾನರ್ ಹಾಕಿಸಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಪ್ರಚಾರ ಮಾಡಿದ್ದು, ಈಗಾಗಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಆರೋಗ್ಯವಿವಿಗೆ ಇದೀಗ ಮತ್ತೆ ಪೂಜೆ ಮಾಡುತ್ತಿರುವುದು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
5ನೇ ಬಾರಿಗೆ ಪೂಜೆ: ರಾಜೀವ್‌ಗಾಂಧಿ ಆರೋಗ್ಯ ವಿವಿ ನಿರ್ಮಾಣ ಮಾಡುವ ಬಗ್ಗೆ 2007ರಲ್ಲಿ ಜೆಡಿಎಸ್-ಬಿಜೆಪಿ ದೋಸ್ತಿ ಸರ್ಕಾರದಲ್ಲಿ ಅಂದಿನ ಸಿಎಂ ಆಗಿದ್ದ ಎಚ್ .ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಬಳಿಕ ಅವರು ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ಭೂಮಿಪೂಜೆಯನ್ನು ನೆರವೇರಿಸಿದ್ದರು. 2012 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಹ ಭೂಮಿಪೂಜೆ ಮಾಡಲಾಗಿತ್ತು. ಬಳಿಕ 2022-23ರ ಬಜೆಟ್‌ನಲ್ಲಿ ಆರೋಗ್ಯ ವಿವಿಗೆ 600 ಕೋಟಿ ರೂ.ಅನುದಾನ ನಿಗದಿ ಮಾಡಿದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ವಿವಿಗೆ 2023ರ ಮಾರ್ಚ್ ತಿಂಗಳಲ್ಲಿ ಭೂಮಿಪೂಜೆ ನೆರ ವೇರಿಸಿದ್ದರು. ಇದೀಗ ಮತ್ತೆ ಭೂಮಿಪೂಜೆ ನಡೆಸುವುದಾಗಿ ಕ್ಷೇತ್ರದ ಶಾಸಕರಾಗಿರುವ ಇಕ್ಬಾಲ್ ಹುಸೇನ್ ಮುಂದಾಗಿದ್ದಾರೆ.
ಜನಾಕ್ರೋಶ ಕಡಿಮೆ ಮಾಡಲು ಮತ್ತೆ ಪೂಜೆ?: ಮೆಡಿಕಲ್ ಕಾಲೇಜನ್ನು ರಾಮನಗರ ದಿಂದ ಕನಕಪುರಕ್ಕೆ ಸ್ಥಳಾಂತರ ಮಾಡಲಾಗು ತ್ತಿದೆ ಎಂದು ಆರೋಪಿಸಿ ಜೆಡಿಎಸ್, ಬಿಜೆಪಿ ಸೇರಿದಂತೆ ಪಕ್ಷಗಳು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳು ರಾಮನಗರ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದವು. ಡಿಕೆಎಸ್ ಸಹೋ ದರರು ಮೆಡಿಕಲ್ ಕಾಲೇ ಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಸಿಎಂ ಡಿ.ಕೆ.ಶಿವಕುಮಾರ್ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮೆಡಿ ಕಲ್ ಕಾಲೇ ಜು ಸ್ಥಳಾಂತರ ವಿವಾದ ಜೀವಂ ತವಾಗಿರು ವಾಗಲೇ ಮತ್ತೆ ವಿವಿಗೆ ಭೂಮಿ ಪೂಜೆ ನಡೆ ಯುತ್ತಿರುವುದು ಕುತೂ ಹಲ ಮೂಡಿಸುವಂತೆ ಮಾಡಿದೆ. ಮತ್ತೆ ಭೂಮಿ ಪೂಜೆ ಮಾಡಿ ಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಅಂತರ ಕಾಯ್ದುಕೊಂಡ ಜಿಲ್ಲಾಡಳಿತ, ಆರೋಗ್ಯ ವಿವಿ: ಗುರುವಾರ ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ಭೂಮಿಪೂಜೆ ನಡೆಯ ಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳುತ್ತಿದ್ದಾರೆ. ಇನ್ನು ಕಾಂಗ್ರೆಸ್ ಮುಖಂಡರ ವಾಟ್ಸ್ ಆಪ್ ಗ್ರೂಪ್‌ಗ್ಳಲ್ಲಿ ಸಹ ಈ ಬಗ್ಗೆ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ, ಕಾರ್ಯ ಕ್ರಮದಿಂದ ಜಿಲ್ಲಾಡಳಿತ ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿವಿ ಅಂತರ ಕಾಯ್ದು ಕೊಂಡಿದೆ. ಸಚಿವರು ಆಗಮಿಸುತ್ತಿರುವ ಕಾರ್ಯಕ್ರಮಕ್ಕೆದ ಬಗ್ಗೆ ಜಿಲ್ಲಾಡಳಿತದಿಂದ ಇದು ವರೆಗೆ ಯಾವುದೇ ಅಧಿಕೃತ ಆಹ್ವಾನ ಪತ್ರ ಬಿಡುಗಡೆಯಾಗಿಲ್ಲ. ಸರ್ಕಾರಿ ಕಾರ್ಯಕ್ರಮ ಎಂದು ಘೋಷಣೆಯೂ ಆಗಿಲ್ಲ. ವೈದ್ಯಕೀಯ ಶಿಕ್ಷಣ ಸಚಿವರ ಪ್ರವಾಸದ ವಿವರ ಸಹ ಬಿಡುಗಡೆಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ. ಎಂ.ಕೆ.ರಮೇಶ್, ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿಯೂ ಇಲ್ಲ, ಆಹ್ವಾನವೂ ಇಲ್ಲ ಎಂದು ತಿಳಿಸಿದ್ದಾರೆ. ಇನ್ನು ಕಾರ್ಯಕ್ರಮದ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದು ಕೆಂಗಲ್ ಹನು ಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ರಾಜೀವ್‌ಗಾಂಧಿ ಆರೋಗ್ಯ ವಿವಿ 17 ವರ್ಷಗಳಿಂದ ನನೆ ಗುದಿಗೆ ಬಿದ್ದಿದೆ. ಮುಖ್ಯಮಂತ್ರಿಗಳು ಆರೋಗ್ಯ ವಿವಿ ನಿರ್ಮಾಣಕ್ಕೆ ಉತ್ಸುಕರಾಗಿದ್ದಾರೆ. ಭೂಮಿಪೂಜೆ ಬಳಿಕ ಕಟ್ಟಡ ನಿರ್ಮಾಣ ಕೆಲಸ ನಡೆ ಯಲಿದೆ. ಮೆಡಿಕಲ್ ಕಾಲೇಜು, ವಿವಿ ಎರಡೂ ಇಲ್ಲೆ ಆಗಲಿದೆ. ರಾಮ ನಗರದಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಸರ್ಕಾರದ ಸೂಚನೆ ಮೇರೆಗೆ ಕಾರ್ಯಕ್ರಮ ನಡೆಯುತ್ತಿದೆ. -ಇಕ್ಬಾಲ್ ಹುಸೇನ್, ಶಾಸಕ, ರಾಮನಗರ
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.