“ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ
Team Udayavani, Apr 16, 2021, 4:17 PM IST
ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಅವರ ‘ಬೊಮ್ಮನ ಹಳ್ಳಿಯಕಿಂದರಿ ಜೋಗಿ’ ಕವನದ ಪುಸ್ತಕವನ್ನು ಕೇವಲ 1×1 ಸೆಂ.ಮೀ.ಅಳತೆಯುಳ್ಳ, 0.210 ಮಿ.ಗ್ರಾಂ. ತೂಕದ ಪುಸ್ತಕದಲ್ಲಿ ಲೆಡ್‌ಪೆನ್ಸಿಲ್‌ನಿಂದ ಬರೆಯುವ ಮೂಲಕ ‘ಗೋಲ್ಡನ್ ಬುಕ್ ಆಫ್‌ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ರಾಂಪುರ ಗ್ರಾಮದ ಆರ್. ವಿ. ಅಚಲಸ್ಥಾನ ಪಡೆದಿದ್ದಾರೆ.
ಕೈ ಬರವಣಿಗೆಯಲ್ಲಿ ಬರೆದ ಅತೀ ಸಣ್ಣ ಪುಸ್ತಕ ಇದಾಗಿದ್ದು,32 ಪುಟಗಳುಳ್ಳ ಇಡೀ ಪುಸ್ತಕ ಬರೆಯಲು ಕೇವಲ 12ಗಂಟೆಗಳ ಸಮಯ ತೆಗೆದುಕೊಂಡಿರುವುದು ವಿಶೇಷ. ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದ ಅನಿತಾ ಮತ್ತುವಿಜಯ್ ಅವರ ಕಿರಿಯ ಪುತ್ರಿ ಆರ್.ವಿ. ಅಚಲ, 10ನೇತರಗತಿ ವ್ಯಾಸಂಗ ಮಾಡುತ್ತಿದ್ದು, ಸರ್ಕಾರ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಓದುವ ಬೆಳಕು ಯೋಜನೆಯಅಭಿಯಾನ ಕೈಗೊಂಡಿದ್ದರು.
ಆರ್.ವಿ. ಅಚಲ ವ್ಯಾಸಂಗದಲ್ಲೂಮುಂದಿದ್ದು, ಕವನ ರಚನೆ, ಚಿತ್ರಕಲೆ ಮತ್ತು ಗಾಯನದಲ್ಲೂವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹಲವಾರು ಸಂಘಸಂಸ್ಥೆಗಳು ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಸ್ವರಚಿತಕವಿತೆ ವಾಚನ ಹಾಗೂ ಗೀತಗಾಯನ ನಡೆಸಿಕೊಟ್ಟಿದ್ದಾರೆ. ಕನಕಪುರದ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್‌ನಿಂದ ನೀಡುವ’ಧಮ್ಮ ದೀವಿಗೆ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.