ಪತನದಂಚಿನ ಪತಂಗ ಪ್ರತ್ಯಕ್ಷ!
Team Udayavani, Sep 26, 2022, 3:19 PM IST
ಚನ್ನಪಟ್ಟಣ: ಪತನದ ಅಂಚಿನಲ್ಲಿರುವ ಪ್ರಭೇದಕ್ಕೆ ಸೇರಿದ ಅಟ್ಲಾಸ್ ಪತಂಗ ತಾಲೂಕಿನಲ್ಲಿ ಪ್ರತ್ಯಕ್ಷವಾಗಿದೆ. ಅಬ್ಬೂರು ಗ್ರಾಮದ ಮಧು ಎಂಬುವವರ ತೋಟದ ಮನೆ ಬಳಿ ಇದು ಕಂಡುಬಂದಿದ್ದು, ಪರಿಸರ ಪ್ರೇಮಿಯೊಬ್ಬರು ಇದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಅಟ್ಲಾಸ್ ಪತಂಗ ಹತ್ತರಿಂದ ಹದಿನೈದು ದಿನ ಬದುಕುವ ಅಲ್ಪಾವಧಿಯ ಕೀಟ. ಪಶ್ಚಿಮ ಘಟ್ಟದಂತಹ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಪ್ರಪಂಚದ ಅತಿದೊಡ್ಡ ಗಾತ್ರದಕೀಟಗಳ ಜಾತಿಗೆ ಸೇರಿದ್ದು, ರೆಕ್ಕೆಗಳಿಗೆ ಹೋಲಿಸಿದರೆ ಇದರ ದೇಹವು ಚಿಕ್ಕದಾಗಿರುತ್ತದೆ.
ಹಾವಿನ ರೂಪದ ರೆಕ್ಕೆಗಳು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ಪತಂಗಗಳು ನಿಶಾಚರಿಯಾಗಿದ್ದು, ರಾತ್ರಿ ವೇಳೆ ಹೆಚ್ಚು ಹಾರಾಡುತ್ತವೆ. ಆಕರ್ಷಿಸಲ್ಪಡುವ ಪತಂಗಗಳಿಗೆ ವಿರೋಧಿಗಳು ಹೆಚ್ಚು. ಹಾಗಾಗಿ, ರೆಕ್ಕೆಗಳ ಸುಳಿಗಳು ನಾಗರ ಹಾವಿನ ತಲೆಯಂತಿದ್ದು, ಪ್ರಾಣಿ ಅಥವಾ ಪಕ್ಷಿ ಬೇಟೆಯಾಡಲು ಬಂದಾಗ, ರೆಕ್ಕೆಗಳನ್ನು ಮೇಲಕ್ಕೆತ್ತಿ ಹಾವು ಅಥವಾ ಜಂತುಗಳ ರೀತಿಯಲ್ಲಿ ಕಾಣುವಂತೆ ಮಾಡಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತದೆ. ಮರಿ ಹುಳುಗಳು ಹಕ್ಕಿಗಳಿಗೆ ಆಹಾರವಾದರೆ, ಪ್ರೌಢ ಪತಂಗಗಳನ್ನು ಬಾವಲಿ, ಗೂಬೆ, ಹಲ್ಲಿ, ಬೆಕ್ಕು, ಕರಡಿ ಭಕ್ಷಿಸುತ್ತವೆ ಎನ್ನಲಾಗಿದೆ.
ದೇಹದಲ್ಲಿರುವ ದೈಹಿಕ ಒಳ ಶಕ್ತಿಯಿಂದ ಬೆಳಕಿಗೆ ಜೀವಿಸುವ ಇವುಗಳಿಗೆ ಪ್ರೌಢಾವಸ್ಥೆ ಬಳಿಕ ಕೇವಲ 10ರಿಂದ 15ದಿನಬದುಕಿರುತ್ತವೆ. ಈ ಪತಂಗಗಳನ್ನು ಬಹುತೇಕ ಮಂದಿ ಚಿಟ್ಟೆಅಥವಾ ಪಾತರಗಿತ್ತಿ ಎಂದೇ ಭಾವಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು.
ತಾಲೂಕಿನಲ್ಲಿ ಇದೇ ಮೊದಲು: ಇಂದೊಂದು ನಶಿಸುತ್ತಿರುವ ಪ್ರಭೇದಕ್ಕೆ ಸೇರಿದ ಪತಂಗವಾಗಿದೆ. ನಮ್ಮ ಭಾಗದಲ್ಲಿ ಇದು ಕಾಣಸಿಗುತ್ತಿರುವುದು ಇದೇ ಮೊದಲು. ಈ ಪತಂಗ ಹಲವುವಿಶೇಷಗಳಿಂದ ಕೂಡಿದೆ. ಆರಂಭದ ದಿನಗಳಲ್ಲಿ ಇದು ಏನನ್ನೂತಿನ್ನುವುದಿಲ್ಲ. ವಿಶೇಷವಾದ ರಕ್ಷಣಾ ವಿಧಾನ ಹೊಂದಿದೆ. ಇದರಎರಡೂ ರೆಕ್ಕೆಯ ತುದಿ ಹಾವಿನ ಆಕಾರದಲ್ಲಿರುವುದು ಈ ಪತಂಗದಬಹುಮಖ್ಯ ಆಕರ್ಷಣೆ. ಇಂತಹ ಪತಂಗ ಕಂಡು ಬಂದಾಗ ಹಾನಿ ಮಾಡಬಾರದು ಎಂದು ಅರಣ್ಯ ಅಧಿಕಾರಿ ದಿನೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.