Ramnagar: ಜೀವನ ಸಂಗಾತಿ ಕರುಣಿಸೆಂದು ದೇವರಿಗೆ ಮೊರೆ ಹೋದ ಭಕ್ತರು
Team Udayavani, Mar 11, 2024, 3:49 PM IST
ರಾಮನಗರ: ದೇವರೆ ನನಗೆ ಒಳ್ಳೆಯ ಹುಡುಗ ಸಿಗುವಂತೆ ಮಾಡು, ನಮ್ಮ ಮಗನಿಗೆ ಬೇಗ ಹುಡುಗಿ ಸಿಗಲಿ, ನಮ್ಮ ಕುಟುಂಬಕ್ಕೆ ಹೊಂದಿಕೊಂಡು ಹೋಗುವ ಸೊಸೆ ಬರಲಿ.. ಇವು ಚನ್ನಪಟ್ಟಣ ತಾಲೂ ಕಿನ ತಗಚಗೆರೆ ಗ್ರಾಮದಲ್ಲಿ ಶಿವರಾತ್ರಿಯ ದಿನ ನಡೆದ ರಥೋತ್ಸವದಲ್ಲಿ ದೇವರಿಗೆ ಭಕ್ತರು ಸಲ್ಲಿಸಿದ ಹರಕೆಯ ಸ್ಯಾಂಪಲ್‌ಗಳು.
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಕಳೆದ 5 ವರ್ಷಗಳ ಹಿಂದೆ ಕೆಗ್ಗೆರೆ ಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದ ಪ್ರತಿ ಶಿವರಾತ್ರಿಯಂದು ಕೆಗ್ಗೆರೆಲಿಂಗೇಶ್ವರನ ರಥೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ರಥೋತ್ಸವದಲ್ಲಿ ಭಕ್ತರು ಬಾಳೆ ಹಣ್ಣು ಜವನವನ್ನು ರಥಾರೂಢನಾಗಿ ಬರುವ ಕೆಗ್ಗೆರೆ ಲಿಂಗೇಶ್ವರನಿಗೆ ಎಸೆದು ತಮ್ಮ ಇಷ್ಟಾರ್ಥ ಈಡೇರಿಸು ಎಂದು ಪ್ರಾರ್ಥಿಸುವುದು ವಾಡಿಕೆ. ಹೀಗೆ ಬಾಳೆ ಹಣ್ಣು ಎಸೆಯುವರು ತಮ್ಮ ಕೋರಿಕೆ ಯನ್ನು ಬರೆದು ರಥಕ್ಕೆ ಎಸೆಯುತ್ತಾರೆ. ಭಕ್ತರು ತಮ್ಮ ಬೇಡಿಕೆ ಯನ್ನು ಬರೆದು ಎಸೆದಿರುವ ಬಾಳೆಹಣ್ಣುಗಳ ಮೇಲೆ ಭಕ್ತರು ಬರೆದಿರುವ ವಿಶಿಷ್ಟ ಕೋರಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಳೆಹಣ್ಣಿಗೆ ಜವನ ಸಿಗಿಸಿ ಬಾಳೆಹಣ್ಣಿನ ಮೇಲೆ ತಮ್ಮ ಕೋರಿಕೆಯನ್ನು ಬರೆದು ಎಸೆದಿರುವ ಭಕ್ತರು ಬೇಡಿಕೆ ಗಳನ್ನು ಕೆಗ್ಗೆರೆ ಲಿಂಗೇಶ್ವರ ನೋಡಿದ್ದಾನೋ ಇಲ್ಲವೋ, ಇವರು ಬರೆದಿರುವ ಬಾಳೆಹಣ್ಣುಗಳನ್ನು ಸ್ಥಳೀಯರು ನೋಡಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.
ಮದುವೆಯದ್ದೇ ಗುಂಗು : ಕೆಗ್ಗೆರೆ ಲಿಂಗೇಶ್ವರನಿಗೆ ಬೇಡಿಕೆ ಸಲ್ಲಿಸಿರುವ ಭಕ್ತರಲ್ಲಿ ಬಹುತೇಕರಿಗೆ ಮದುವೆಯದ್ದೇ ಗುಂಗಿದ್ದು, ತಮ್ಮ ಜೀವನ ಸಂಗಾತಿ ಕರುಣಿಸು ವಂತೆ ಭಕ್ತರು ದೇವರಿಗೆ ಕೋರಿಕೆ ಸಲ್ಲಿಸಿದ್ದಾರೆ. ಯುವತಿಯರು ಒಳ್ಳೆಯ ಹುಡುಗ ಸಿಗಲಿ ಎಂದು ಪ್ರಾರ್ಥಿಸಿದ್ದರೆ, ವಯಸ್ಸಾಗುತ್ತಿರುವ ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂದು ನೊಂದಿರುವ ಪೋಷಕರು ಮಗನಿಗೆ ಬೇಗ ಹುಡುಗಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ಕೆಲ ಪೋಷಕರು ನಮ್ಮ ಮನೆಗೆ ಹೊಂದಿಕೊಂಡು ಹೋಗುವ ಸೊಸೆ ಬರಲಿ ಎಂದು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.