ಸಾರ್ವಜನಿಕ ಇ-ಗ್ರಂಥಾಲಯಕ್ಕೆ ನೋಂದಾಯಿಸಿಕೊಳ್ಳಿ
Team Udayavani, Nov 18, 2020, 1:57 PM IST
ರಾಮನಗರ: ರಾಜ್ಯದ ಸಾರ್ವಜನಿಕ ಗ್ರಂಥಾಲಯ ಆರಂಭಿಸಿರುವ ಇ-ಗ್ರಂಥಾಲಯಕ್ಕೆ ಜಿಲ್ಲೆಯ ಬಹಳಷ್ಟು ಮಂದಿ ಆಸಕ್ತರು ನೋಂದಾಯಿಸಿಕೊಂಡಿದ್ದಾರೆ, ನೋಂದಣಿಗೆಇನ್ನುಅವಕಾಶವಿದ್ದು,ಜಿಲ್ಲೆಯ ನಾಗರಿಕರು ಇ-ಗ್ರಂಥಾಲಯ ವ್ಯವಸ್ಥೆ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಮಮತಾಕರೆ ನೀಡಿದರು.
ನಗರದ ಜಿಲ್ಲಾ ಗ್ರಂಥಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಗ್ರಂಥ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ಲಾಕ್‌ಡೌನ್ ಕಾರಣ ಗ್ರಂಥಾಲಯಗಳು ಸಹ ಬಾಗಿಲು ಮುಚ್ಚಿದ್ದವು. ಆದರೆ ಈ ಸಮಯದಲ್ಲಿ ಓದುಗರಿಗೆ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳಲು ತಮ್ಮ ಇಲಾಖೆ ಇ-ಗ್ರಂಥಾಲಯ ವ್ಯವಸ್ಥೆ ಆರಂಭಿಸಿತ್ತು. ಇ-ಗ್ರಂಥಾಲಯ ನೋಂದಣಿಆಂದೋಲನ ಇನ್ನು ಜಾರಿಯಲ್ಲಿದೆ ಎಂದು ತಿಳಿಸಿದರು.
ಗ್ರಂಥಾಲಯ ಸಪ್ತಾಹದ ಪ್ರಾಮುಖ್ಯತೆ ಬಗ್ಗೆ ತಿಳಿಸಿದ ಅವರು ಗ್ರಂಥಾಲಯ ಸೇವೆಗಳ ಬಗ್ಗೆ ಮಾಹಿತಿ, ಪುಸ್ತಕ ಓದುವ ಹವ್ಯಾಸವನ್ನು ರೂಢಿಸುವ ಸಲುವಾಗಿಯೇ 1968ರಿಂದ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ. ನ.20 ರವರೆಗೆ ಈ ಸಪ್ತಾಹ ನಡೆಯಲಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಇತರೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕ ದಾಸ್ತಾನು, ಸಾರ್ವಜನಿಕರ ಸ್ಪಂದನೆ, ಓದುಗರ ಅಭಿಪ್ರಾಯ ಸಂಗ್ರಹಣೆ ಮುಂತಾದ ವಿಚಾರಗಳಲ್ಲಿ ಮಾಹಿತಿಯನ್ನು ಕಲೆ ಹಾಕಲಾಗುವುದು ಎಂದರು.
ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಸಾರ್ವಜನಿಕರಿಗೆಉಪಯೋಗವಾಗಲಿರುವ ಪುಸ್ತಕಗಳುಇವೆ.ಇವುಗಳನ್ನು ಎಲ್ಲರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು. ಓದುಗ ಹರೀಶ್ ಮಾತನಾಡಿ, ರಾಮನಗರ ಜಿಲ್ಲಾ ಗ್ರಂಥಾಲಯಹೆಸರಿಗೆಜಿಲ್ಲಾಕೇಂದ್ರ ಗ್ರಂಥಾಲಯ, ಆದರೆ ಇದಕ್ಕೆ ತಕ್ಕ ಅನುಕೂಲಗಳು ಇಲ್ಲಿಲ್ಲ. ಗ್ರಂಥಾಲಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಸರ್ಕಾರಿ ಗ್ರಂಥಾಲಯಗಳನ್ನು ಬಳಸುವವರು ಬಡವರ್ಗದವರೇ ಹೆಚ್ಚಾಗಿದ್ದಾರೆ.
ಕೋವಿಡ್ ನಿಯಮಾನುಸಾರ ಬಳಕೆ ಮಾಡಲು ಹೆಚ್ಚು ಉತ್ತೇಜನ ನೀಡಬೇಕು ಎಂದು ಮನವಿಮಾಡಿದರು. ನೆರೆದಿದ್ದ ಗ್ರಂಥಾಲಯ ಬಳಕೆದಾರರು ಶೌಚಾಲಯ ಸಮಸ್ಯೆ ನೀಗಿಸುವಂತೆ ಮತ್ತು ಕೆಲವು ಪುಸ್ತಕಗಳ ಅಗತ್ಯವನ್ನು ಮುಂದಿಟ್ಟರು. ಗ್ರಂಥಾಲಯ ಸಿಬ್ಬಂದಿ ಜಯರಾಮು, ಸದಾಶಿವ, ಮಹದೇವ ಸ್ವಾಮಿ, ಸುಮಲತಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.