ನಿತ್ಯ ನರಕದಲ್ಲಿ ಇರುಳಿಗರ ಬದುಕು

ಮಳೆ ಗಾಳಿಗೆ ಹಾರಿಹೋಗುವ ಗುಡಿಸಲು „ ಮಕ್ಕಳು, ಮಹಿಳೆಯರ ಗೋಳು ಕೇಳ್ಳೋರಿಲ್ಲ

Team Udayavani, Nov 11, 2021, 5:49 PM IST

ನಿತ್ಯ ನರಕದಲ್ಲಿ ಇರುಳಿಗರ ಬದುಕು

ರಾಮನಗರ: ಗುಡಿಸಲು ರಹಿತ ಗ್ರಾಮಗಳನ್ನು ಮಾಡ್ತೇವೆ ಎಂದು ಭರವಸೆ ಕೊಟ್ಟು ನಂತರ ಮರೆ ಯುವ ಜನಪ್ರತಿನಿಧಿಗಳು, ಅಧಿಕಾರಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ಹೀಗೆ ಕೇವಲ ಭರವಸೆಯೊಂದಿಗೆ ಗುಡಿಸಿಲಿನಲ್ಲೇ ಬದುಕು ನೂಕುತ್ತಿರುವ 20ಕ್ಕೂ ಹೆಚ್ಚು ಇರುಳಿಗರ ಕುಟುಂಬಗಳ ವ್ಯಥೆಕಥೆ ಇದು.

ತಾಲೂಕಿನ ಕೂಟಗಲ್‌ ಗ್ರಾಮದ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಗುಂಡು ತೋಪಿನಲ್ಲಿ ತಾತ್ಕಾಲಿಕವಾಗಿ ತೆಂಗಿನ ಮರದ ಗರಿಯಲ್ಲಿ ನಿರ್ಮಿಸಲಾದ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ನೆರವಿಗೆ ತಾಲೂಕು ಆಡಳಿತವಾಗಲಿ, ಜಿಪಂ ಆಗಲಿ ಧಾವಿಸಿಲ್ಲ. ಇಲ್ಲಿ ವಾಸಿಸುತ್ತಿರುವ ಮಹಿಳೆ ಯರು ಶೌಚಕ್ಕೆ ಹೋಗಲು ಕತ್ತಲು ಆವರಿಸಬೇಕು. ಸ್ನಾನ ಮಾಡಲು ತೆಂಗಿನಗರಿಗಳ ಮರೆ ಸಾಲದು, ಹೀಗಾಗಿ ಸೀರೆ ಕಟ್ಟಿಕೊಂಡು ಸಾನ್ನ ಮಾಡಬೇಕಾದ ಪರಿಸ್ಥಿತಿ. ಈ ಧಾರುಣ ಸ್ಥಿತಿ ಸಂಬಂಧಿಸಿದ ಅಧಿಕಾರಿಗಳಿಗೆ ಅರಿವಿದೆ. ಆದರೆ ಈ ಕುಟುಂಬಗಳಿಗೆ ಆಸರೆಯಾಗಿ ನಿಲ್ಲುವ ಮನಸ್ಸು ಮಾಡಿಲ್ಲವಷ್ಟೆ.

ಸೌದೆ ಮಾರಿಕೊಂಡು ಜೀವನ: ಕಳೆದ ಮೂವತ್ತು – ನಲವತ್ತು ವರ್ಷಗಳಿಂದ ಕೂಲಿ ಮಾಡಿಕೊಂಡು, ಇಲ್ಲವೆ ಸೌದೆ ಮಾರಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳು ಇಲ್ಲಿ ವಾಸವಿದೆ. ಮನೆ ಕಟ್ಟಿಸಿ ಕೊಡಿ ಎಂದು ಹಲವು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಅವರಿಗೆ ನಿವೇಶನ ಮತ್ತು ಸೂರಿನ ಭಾಗ್ಯ ದೊರೆಯದೆ ಇರುವುದು ದುರ್ದೈವದ ಸಂಗತಿ.

ದಾಖಲೆಯಿದೆ, ನೆಲೆಯಿಲ್ಲ: “ನಮ್ಮೆಲ್ಲರ ಬಳಿ ಚುನಾವಣೆ ಗುರುತಿನ ಚೀಟಿ, ಬಿಪಿಎಲ… ಕಾರ್ಡ್‌, ಆಧಾರ ಕಾರ್ಡ್‌ಗಳು ಇವೆ, ಪ್ರತಿ ಭಾರಿ ಚುನಾವಣೆ ಬಂದಾಗ ಮಾತ್ರ ಎಲ್ಲ ಪಕ್ಷದ ಜನಪ್ರತಿನಿಧಿಗಳು ನಮ್ಮ ಬಳಿ ಬಂದು ಮತಯಾಚಿಸುತ್ತಾರೆ.

ಇದನ್ನೂ ಓದಿ:- ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ

ನಿವೇಶನ, ಮನೆಯ ಭರವಸೆ ಕೊಡುತ್ತಾರೆ. ನಂತರ ಮರೆತು ಹೋಗುತ್ತಿದ್ದಾರೆ ಎಂದು ಇರುಳಿಗ ಸಮುದಾಯದ ಬೋರಮ್ಮ, ಮುನಿಯಮ್ಮ, ಕೆಂಚಯ್ಯ, ಮುನಿಯಮ್ಮ ದೂರುತ್ತಾರೆ. ಶೌಚಾಲಯಗಳು ಇಲ್ಲದಿರುವುದರಿಂದ ಮಹಿಳೆ ಯರು ಮಲ, ಮೂತ್ರ ವಿಸರ್ಜನೆಗೆ ರಾತ್ರಿಯಾಗುವವರೆಗೂ ಕಾಯಬೇಕು. ಜನರ ಕಣ್ಣು ತಪ್ಪಿಸಿ ಹೊಳೆ ಬಳಿಗೆ ಓಡಬೇಕು ಎಂದು ನೊಂದು ನುಡಿದಿದ್ದಾರೆ.

ಮಳೆ ಬಂದರೆ ಯಾತನೆ!: 23ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿವೆ. ಇವರು ತೆಂಗಿನ ಗರಿಯಿಂದ ಗುಡಿಸಲನ್ನು ನಿರ್ಮಿಸಿಕೊಂಡಿ¨ªಾರೆ. ತಗ್ಗು ಪ್ರದೇಶವಾದ್ದರಿಂದ ಮಳೆ ಬಂದರೆ ಗುಡಿಸಲುಗಳಿಗೆ ನೀರು ನುಗ್ಗುತ್ತದೆ. ಮಕ್ಕಳನ್ನು ಜೋಪಾನ ಮಾಡಿ ಪಾತ್ರೆ, ಬಟ್ಟೆ, ಆಹಾರ ಪದಾರ್ಥಗಳು ಹಾನಿಯಾಗದಂತೆ ಎಚ್ಚರವ ಹಿಸಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಕುಟುಂಬಗಳ ಹಿರಿಯರದ್ದು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮೂರ್‍ನಾಲ್ಕು ಗುಡಿಸಲುಗಳು ನೆಲಕ್ಕುರಿಳಿವೆ.

ಇಲ್ಲಿ ನೆಲೆಸಿದ್ದು ಯಾಕೆ?: ರತ್ನಗಿರಿ ಎಂಬಾತ ಪ್ರತಿಕ್ರಿಯಿಸಿ, ತಾತ, ಅಪ್ಪ ಕಾಡಿನಲ್ಲಿ ವಾಸವಾಗಿದ್ದರು.ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದಾಗ ಬಂದ ನಾವು 40 ವರ್ಷಗಳಿಂದ ಇಲ್ಲೇ ನೆಲೆಸಿದ್ದೇವೆ. ಈ ಜಾಗ ಕೂಟಗಲ್‌ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ನೆಲೆಯಿಲ್ಲದ ನಮಗೆ ಆಡಳಿತಾಧಿಕಾರಿಗಳು ಸೂರಿ ಕಲ್ಪಿಸಿ ಬದುಕಿಗೆ ದಾರಿ ತೋರಿಸಿ ಅಂತಾರೆ ಸಂತ್ರಸ್ತರು.

ಅರಣ್ಯ ಪ್ರದೇಶವೇ ಸಾಕು: ಈ ಕುಟುಂಬಗಳ ಬಗ್ಗೆ ಕಾಳಜಿವಹಿಸಿರುವ ಸಂಶೋಧನಾ ವಿದ್ಯಾರ್ಥಿ ಎಸ್‌.ರು ದ್ರೇಶ್ವರ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿ ಇಲ್ಲಿ ವಾಸಿಸುವ ಕುಟುಂಬಗಳಿಗೆ ತಾಲೂಕು ಮತ್ತು ಜಿಲ್ಲಾಡಳಿತ ಉಚಿತವಾಗಿ ಭೂಮಿ ಕೊಟ್ಟು ಮನೆ ನಿರ್ಮಿಸಿಕೊಳ್ಳಲು ಸಹಕಾರ ಕೊಡಬೇಕು. ಯರೇಹಳ್ಳಿ ಗ್ರಾಮದ ಸರ್ವೆ ನಂಬರ್‌ 43ರಲ್ಲಿ ನಿವೇಶನ ಕೊಡಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ. ತಾಲೂಕು ಆಡಳಿತ ಮತ್ತು ಜಿಪಂ ಅಧಿಕಾರಿಗಳು ತಕ್ಷಣ ಈ ಕುಟುಂಬಗಳ ರಕ್ಷಣೆಗೆ ಬರಬೇಕಾಗಿದೆ.

ಜಮೀನು ಮಂಜೂರಾತಿ ವಿಳಂಬ

ವನವಾಸಿ ಕಲ್ಯಾಣ ಸಂಘಟನೆ ಜಿಪಂ ಸಿಇಒ ಅವರಿಗೆ ಮಾಡಿದ ಮನವಿಯಲ್ಲಿ ಯರೇಹಳ್ಳಿ ಸರ್ವೆ ಸಂಖ್ಯೆ 43ರಲ್ಲಿ 2.30 ಎಕರೆ ಜಮೀನನ್ನು ಕುಟುಂಬಗಳಿಗೆ ಮಂಜೂರು ಮಾಡಲು ಆದೇಶ ಸಿಕ್ಕಿಲ್ಲ ಎಂದು ದೂರಿದ್ದರು. ಈ ಕುರಿತು ಜಿಪಂ ಸಿಇಒ ಅವರು ಕೂಟಗಲ್‌ ಗ್ರಾಪಂ ಪಿಡಿಒ ಅವರಿಗೆ ಪತ್ರ ಬರೆದಿದ್ದು, ವನವಾಸಿ ಕಲ್ಯಾಣ ಸಂಘಟನೆ ಮನವಿ ಬಗ್ಗೆ ಪರಿಶೀಲಿಸಿ ಸದರಿ ಸರ್ವೆ ನಂ.43ರಲ್ಲಿ ಸುಮಾರು 175.00 ಎ/ಗುಂಟೆ ಇದ್ದು ಸದರಿ ಇರುವ ಜಮೀನಿನಲ್ಲಿ ಆಶ್ರಯ ನಿವೇಶನಕ್ಕೆ 5.00 ಎ/ಗುಂಟೆ ಜಮೀನು ಮಂಜೂರಾತಿಗೆ ಕ್ರಮಕೈಗೊಂಡು ಹಾಗೂ ಕ್ರಮದ ಬಗ್ಗೆ ಈ ಕಚೇರಿಗೆ ಮಾಹಿತಿ ಸಲ್ಲಿಸಲು ಸಿಇಒ ಅವರು ಸೂಚನೆಯನ್ನು 2021ರ ಜುಲೈನಲ್ಲೇ ಪತ್ರ ಬರೆದಿದ್ದಾರೆ. ಆದರೆ ಪಂಚಾಯ್ತಿ ವತಿಯಿಂದ ಇಲ್ಲಿಯವರೆಗೂ ವರದಿ ಹೋಗಿಲ್ಲ ಎಂಬ ದೂರುಗಳು ಇವೆ.

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.