ನರೇಗಾ ನಿಯಮ ಉಲ್ಲಂಘಿಸಿ ರಸ್ತೆ ಕಾಮಗಾರಿ: ಕಿಡಿ
Team Udayavani, Dec 10, 2022, 3:52 PM IST
ಕನಕಪುರ: ನರೇಗಾ ನಿಯಮ ಉಲ್ಲಂಘಿಸಿ ನಡೆಸಿರುವ ಜೆಲ್ಲಿ ಮೆಟ್ಲಿಂಗ್ ರಸ್ತೆ ಕಾಮಗಾರಿಗೆ ಹಣಬಿಡುಗಡೆ ಮಾಡದೆ ತಡೆಹಿಡಿದು ಕ್ರಮ ಕೈಗೊಳ್ಳಬೇಕು ಎಂದು ಗುತ್ತಲ ಹುಣಸೆ ಗ್ರಾಮಸ್ಥರು ಜಿಲ್ಲಾ ಮತ್ತು ತಾಪಂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ತಾಲೂಕಿನ ಮರಳವಾಡಿ ಹೋಬಳಿಯ ತೂಕಸಂದ್ರ ಗ್ರಾಪಂ ವತಿಯಿಂದ ಗುತ್ತಲಹುಣಸೆಗ್ರಾಮದ ಪಾರ್ವತಮ್ಮನ ಕೆರೆಯ ಏರಿಯ ಮೇಲಿಂದ ಮಾದಯ್ಯನ ಜಮೀನಿನವರೆಗೆ ನರೇಗಾ ಯೋಜನೆಯಲ್ಲಿ 5 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 9 ಮಾನವ ದಿನಗಳಲ್ಲಿ ಜಲ್ಲಿ ಮೆಟ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಕಾಮಗಾರಿಯಲ್ಲಿ ಪಂಚಾಯತ್ ರಾಜ್ ಇಲಾಖೆ ಉದ್ದೇಶ ಮತ್ತುನಿಯಮ ಗಾಳಿಗೆ ತೋರಿ ಮಾನವ ಸಂಪನ್ಮೂಲಸರಿಯಾಗಿ ಬಳಸಿಕೊಳ್ಳದೆ ಬೇಕಾಬಿಟ್ಟಿಯಾಗಿಕಾಮಗಾರಿ ನಡೆಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸ್ಥಳೀಯವಾಗಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಅನುಷ್ಠಾನ ಮಾಡುತ್ತದೆ.ಆದರೆ, ಮಾನವ ಸಂಪನ್ಮೂಲ ಬಳಸಿ ಮಾಡಬೇಕಾದ ಕಾಮಗಾರಿ ಜೆಸಿಬಿ ಯಂತ್ರ ಬಳಸಿಕೊಂಡು ಕಾಮಗಾರಿ ಮುಗಿಸಿ ಸ್ಥಳೀಯ ಜನರಿಗೆ ಉದ್ಯೋಗ ವಂಚಿತರನ್ನಾಗಿ ಮಾಡಿ ತರಾತುರಿಯಲ್ಲಿ ಮೂರು ದಿನದಲ್ಲೇ ಕಾಮಗಾರಿ ಮಾಡಿ ಮುಗಿಸಿದ್ದು, ಮಾನವ ಸಂಪನ್ಮೂಲ ಬಳಸಿ ಕಾಮಗಾರಿ ಮಾಡಿರುವಂತೆ ಬಿಂಬಿಸಲು ಹೊರಟ್ಟಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರು ಸಲ್ಲಿಸಲಾಗಿದೆ: ಕಾಮಗಾರಿ ಮುಗಿದಿರುವ ಸ್ಥಳದಲ್ಲಿ ಏನು ಅರಿಯದ ಮುಗ್ಧ ಜನರನ್ನು ನಿಲ್ಲಿಸಿ ಮಾನವ ಸಂಪನ್ಮೂಲ ಬಳಸಿ ಕಾಮಗಾರಿನಡೆಸಿರುವುದಾಗಿ ದಾಖಲೆ ಸೃಷ್ಟಿಸಲು ಕಾಯಕ ಬಂಧು ಸಿಬ್ಬಂದಿಗಳಿಂದ ಭಾವಚಿತ್ರ ತೆಗೆಸಿ ಎನ್ ಎಂಎಂಎಸ್ ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗ್ರಾಪಂ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕಾಮಗಾರಿ ಕೈಗೊಂಡವರ ಬೆನ್ನಿಗೆ ನಿಂತಿದ್ದಾರೆ. ಜಿಲ್ಲಾ ಮತ್ತು ತಾಪಂ ಅಧಿಕಾರಿಗಳು ನಿಯಮ ಉಲ್ಲಂಘಿಸಿ ನಡೆದಿರುವ ಕಾಮಗಾರಿ ಹಣ ಬಿಡುಗಡೆಗೆ ಮಾಡದಂತೆ ತಡೆ ಹಿಡಿದು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗೊತ್ತಲಹಣಸೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತೂಕಸಂದ್ರ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ.ಕಾಮಗಾರಿಯನ್ನು ಯಂತ್ರದಲ್ಲಿಮಾಡಿರುವುದಾಗಲಿ ಮತ್ತು ಯಾವುದೇ ಲೋಪ ಕಂಡು ಬಂದಿಲ್ಲ. – ಶ್ರೀಧರ್, ತೋಕಸಂದ್ರ ಗ್ರಾಪಂ ಪ್ರಭಾರ ಪಿಡಿಒ
ನರೇಗಾ ನಿಯಮ ಉಲ್ಲಂಘಿಸಿಜೆಸಿಬಿಯಲ್ಲಿ ಕಾಮಗಾರಿ ಮಾಡಿದ್ದಾರೆ. ಕೂಲಿ ಚೀಟಿ ಫಲಾನುಭವಿಗಳಿಗೆ 9 ದಿನ ಉದ್ಯೋಗ ಕೊಡದೆ ಯಂತ್ರದ ಮೂಲಕ ಮೂರು ದಿನದಲ್ಲಿ ಕಾಮಗಾರಿ ಮಾಡಿದ್ದಾರೆ. ಅನುದಾನ ತಡೆ ಹಿಡಿದು ಕ್ರಮಕೈಗೊಳ್ಳಬೇಕು– ಪ್ರದೀಪ್, ಗುತ್ತಲಹುಣಸೆ ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ವಿಪಕ್ಷ, ಕಾಂಗ್ರೆಸ್ ನಾಯಕರಿದಂಲೂ ಸಿದ್ದರಾಮಯ್ಯ ಟಾರ್ಗೆಟ್; ವಾಟಾಳ್
Kanakapura: ಕನಕಪುರ ಸರ್ಕಾರಿ ಬಸ್‌ನಲ್ಲಿ ಖಾಸಗಿ ವ್ಯಕ್ತಿ ಕಂಡಕ್ಟರ್!
Ramanagara: ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ
Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.