ಗ್ರಾಮೀಣ ಉದ್ಯಾನವನ ವೀಕ್ಷಣೆ
Team Udayavani, Feb 22, 2022, 4:33 PM IST
ರಾಮನಗರ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮನ್ ರಿವ್ಯೂ ಮಿಷನ್ ಸದಸ್ಯರು ಜಿಲ್ಲೆಯಲ್ಲಿ ಎರಡನೇದಿನವೂ ಪ್ರವಾಸ ಕೈಗೊಂಡು ಜಿಲ್ಲಾಪಂಚಾಯ್ತಿ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಮಾಹಿತಿ ಸಂಗ್ರಹಿಸಿದರು.
ಕಾಮನ್ ರಿವ್ಯೂ ಮಿಷನ್‌ನ ಸದಸ್ಯರಾದ ಡಾ. ಸತ್ರಾಲ ನಾಗಭೂಷಣ ರಾವ್ ಹಾಗೂಇಸುಕಪಲ್ಲಿ ರಾಮಚಂದ್ರರೆಡ್ಡಿ ಕನಕಪುರತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದರು.
ಸಂವಾದ: ಕೋಳ್ಳಿಗನಹಳ್ಳಿ ಗ್ರಾಮ ಪಂಚಾಯ್ತಿಯ ಗ್ರಾಮೀಣ ಉದ್ಯಾನವನ ವೀಕ್ಷಣೆ ಹಾಗೂ ಸಂಜೀವಿನಿ ಒಕ್ಕೂಟದ ಸ್ವಸಹಾಯಗುಂಪಿನ ಮಹಿಳೆಯರ ಜತೆ ಮತ್ತು ಎನ್‌ಎಸ್‌ಸಿಪಿ -ರಾಷ್ಟ್ರೀಯ ಸಾಮಾಜಿಕ ಭದ್ರತಾಯೋಜನೆ ಫಲಾನುಭವಿಗಳ ಜತೆ ಸಂವಾದನಡೆಸಿದರು. ನಂತರ ಹಾರೋಹಳ್ಳಿಯಲ್ಲಿಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗತರಬೇತಿ ಸಂಸ್ಥೆಗೆ ಭೇಟಿ ಕೊಟ್ಟು ಅಲ್ಲಿ ದೊರೆಯುತ್ತಿರುವ ವಿವಿಧ ತರಬೇತಿಗಳ ಬಗ್ಗೆಮಾಹಿತಿ ಪಡೆದುಕೊಂಡರು. ಇದೇ ವೇಳೆಸದಸ್ಯರು ತರಬೇತಿ ಪಡೆಯುತ್ತಿರುವ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರ ಜತೆ ಚರ್ಚಿಸಿ ತರಬೇತಿ ಬಗ್ಗೆ ಅವರಅನುಭವಗಳನ್ನು ದಾಖಲಿಸಿಕೊಂಡರು.
ಕಲ್ಯಾಣಿ ಪುನಶ್ಚೇತನ ಕಾಮಗಾರಿ: ದ್ಯಾವಸಂದ್ರ ಗ್ರಾಪಂನ ಕಾಡು ಜಕ್ಕಸಂದ್ರಗ್ರಾಮದ ಸ್ಮಶಾನ, ತೋಕಸಂದ್ರ ಗ್ರಾಮಪಂಚಾಯ್ತಿಯ ಗುತ್ತಲಹುಣಸೆ ಗ್ರಾಮದಲ್ಲಿಕಲ್ಯಾಣಿ ಪುನಶ್ಚೇತನ ಕಾಮಗಾರಿ ವೀಕ್ಷಿಸಿದರು.ಇದೇ ವೇಳೆ ಅಲ್ಲಿ ನೆರೆದಿದ್ದ ಗ್ರಾಮಸ್ಥರೊಂದಿಗೆ ಸದಸ್ಯರು ಮಾತನಾಡಿದರು.
ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಬೆಳೆದ ಬಾಳೆ ಬೆಳೆ ವೀಕ್ಷಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ದಿಡ್ಡಿಮನಿ ಅಗತ್ಯ ಮಾಹಿತಿ ನೀಡಿದರು.
ಕಾಮನ್ ರಿವ್ಯೂ ಮಿಷನ್‌ನ ಸದಸ್ಯರ ಪ್ರವಾಸದ ವೇಳೆ ಜಿಪಂ ಉಪ ಕಾರ್ಯದರ್ಶಿಟಿ.ಕೆ.ರಮೇಶ್, ಕೃಷಿ ಇಲಾಖೆ ಉಪನಿರ್ದೇಶಕ ಎ.ಉಮೇಶ್, ಕನಕಪುರ ತಾಪಂ ಇಒ ಮಧು, ಸಹಾಯಕ ನಿರ್ದೇಶಕ (ಗ್ರಾ.ಉ) ಮೋಹನ್ ಬಾಬು, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ್ ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ಅರುಣ್ ಕುಮಾರ್ ಸಿ.ಜಿ, ತಾಲೂಕು ಐಇಸಿ ಸಂಯೋಜಕಿ ಭವ್ಯಾ, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಚೆಕ್ ಡ್ಯಾಂ ಪರಿಶೀಲನೆ :
ಅರಕೆರೆ ಗ್ರಾಪಂ ವ್ಯಾಪ್ತಿಯ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಂಜೀವಿನಿ ಸ್ವ ಸಹಾಯಸಂಘದ ಸದಸ್ಯರ ಮೂಲಕ ರಸ್ತೆ ಬದಿಗಳಲ್ಲಿ ಗುಂಡಿ ತೋಡಿ ನೆಡಲಾದ ಗಿಡಗಳ ವೀಕ್ಷಿಸಿದನಂತರ ಉಯ್ಯಂಬಳ್ಳಿ ಗ್ರಾಪಂ ವ್ಯಾಪ್ತಿಯ ಹೆಗ್ಗನೂರುದೊಡ್ಡಿ ಗ್ರಾಮದಲ್ಲಿ ನರೇಗಾಯೋಜನೆಯಡಿ ಕಾಮಗಾರಿ ಹಂತದಲ್ಲಿರುವ ಚೆಕ್ ಡ್ಯಾಮ್ ಕಾಮಗಾರಿ ಪರಿಶೀಲನೆನಡೆಸಿದರು. ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರನ್ನು ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಚೀಟಿ ಆಧಾರಿತ ಪ್ರಶ್ನೆ ಕೇಳಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮನ್ ರಿವ್ಯೂ ಮಿಷನ್ ಸದಸ್ಯರು ಮಾಹಿತಿ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.