ಡಾ.ರಾಜ್‌ಕುಮಾರ್ ರಂಗಮಂದಿರ ಉಳಿಸಿ
Team Udayavani, Jun 25, 2019, 12:12 PM IST
ಕುದೂರು ಗ್ರಾಮದ ಶ್ರೀ ರಾಮಲೀಲಾ ಮೈದಾನದಲ್ಲಿರುವ ಡಾ.ರಾಜ್‌ಕುಮಾರ್ ರಂಗ ಮಂದಿರದಲ್ಲಿ ಮಹಿಳಾ ಸ್ವಸಹಾಯ ಸಂಘದವರು ಗುಂಪು ಚರ್ಚೆ ನಡೆಸಿದರು.
ಕುದೂರು: ಗ್ರಾಮದ ಶ್ರೀ ರಾಮಲೀಲಾ ಮೈದಾನ ದಲ್ಲಿರುವ ಡಾ.ರಾಜ್‌ಕುಮಾರ್ ರಂಗಮಂದಿರ ಕುಡುಕರ ಹಾಗೂ ಜೂಜುಕೋರರ ಅಡ್ಡೆಯಾಗಿದೆ. ಗೋಡೆಗಳ ಮೇಲೆ ತಂಬಾಕು ಜಗಿದು ಉಗಿಯಲಾಗಿದೆ. ಅಲ್ಲದೆ ರಂಗಮಂದಿರದ ಒಳಗೆ ಮೂತ್ರದ ವಾಸನೆ ಗಬ್ಬೆದ್ದು ನಾರುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳಾ ಸಂಘದ ಸದಸ್ಯರು ದೂರಿದ್ದಾರೆ.
ಮುಚ್ಚಿಕೊಂಡು ಸಭೆ ನಡೆಸುವ ದುಸ್ಥಿತಿ:ಗ್ರಾಮದ ಮಹಿಳಾ ಸ್ವಸಹಾಯ ಸಂಘದವರು ಹಾಗೂ ಧರ್ಮಸ್ಥಳ ಸಂಘದ ಮಹಿಳೆಯರು ವಾರದಲ್ಲಿ ಮೂರು ಬಾರಿ ಗುಂಪು ಚರ್ಚೆಗಳಿಗೆ ಇದೇ ರಂಗಮಂದಿರ ಬಳಸುತ್ತಾರೆ. ಇದರ ಒಳಗೆ ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಸಭೆ ನಡೆಸುವ ದುಸ್ಥಿತಿ ಇವರದ್ದಾಗಿದೆ ಮತ್ತು ಕ್ರೀಡಾ ಚಟುವಟಿಕೆಗಳು ಸ್ವಾತಂತ್ರ್ಯ ದಿನಾಚರಣೆ ಇದೇ ಸಭಾಂಗಣದಲ್ಲಿ ನಡೆಯುತ್ತದೆ. ಗ್ರಾಮದಲ್ಲಿ ಇದೊಂದೆ ಸಭಾಂಗಣ ಇರುವುದರಿಂದ ಇದನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಗ್ರಾಪಂಗೆ ಮನವಿ ಮಾಡಿದ್ದಾರೆ.
ಗ್ರಾಪಂ ವಿರುದ್ಧ ಆಕ್ರೋಶ: ಮಳೆಗಾಲದಲ್ಲಿ ರಂಗ ಮಂದಿರದ ಒಳಗಡೆ ನೀರು ಹರಿಯುವುದರಿಂದ ಸಭೆ ನಡೆಸಲು ಅನಾನುಕೂಲವಾಗುತ್ತದೆ. ಇದರ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಒತ್ತಾಯ: ರಂಗಮಂದಿರಕ್ಕೆ ಅಗತ್ಯ ಭದ್ರತೆ ಒದಗಿಸಬೇಕು. ಆದಷ್ಟು ಬೇಗ ಗೇಟ್‌ಗಳ ವ್ಯವಸ್ಥೆ ಮಾಡಬೇಕು. ಹಿಂಬದಿಯ ಗೋಡೆಗಳಿಗೆ ಬಾಗಿಲು ಅಳವಡಿಸಬೇಕು. ಗ್ರಾಮದ ಕಾರ್ಯ ಕ್ರಮಗಳಿಗೆ ರಂಗಮಂದಿರ ಸದ್ಬಳಕೆಯಾಗಬೇಕು. ರಾತ್ರಿ ವೇಳೆ ಪೊಲೀಸ್ ಗಸ್ತು ಹಾಕಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.